ಎಸ್ಯುಸಿಐ ಪಕ್ಷದ ಅಭ್ಯರ್ಥಿ ಶರ್ಮಾ ಪ್ರಚಾರ
ಗುಲ್ಬರ್ಗ: ಲೋಕಸಭೆಯಲ್ಲಿ ಜನರ ಧ್ವನಿಯನ್ನು ಮೊಳಗಿಸಲು ಎಸ್ಯುಸಿಐ(ಕಮುನಿಸ್ಟ್)ಪಕ್ಷದ ಅಭ್ಯರ್ಥಿ ಎಸ್. ಎಂ. ಶರ್ಮಾ ಸ್ಪರ್ಧಿಸಿದ್ದಾರೆ. ಪಕ್ಷದ ಕಾರ್ಯಕರ್ತರು ಶನಿವಾರ ನಗರದ ಮುಖ್ಯರಸ್ತೆಗಳಲ್ಲಿ ಅಭ್ಯರ್ಥಿಯ ಪರವಾಗಿ ಮೆಟಾಡೊರ್ ಮೂಲಕ ಪ್ರಚಾರ ನಡೆಸಿದರು.
ಬೆಲೆಏರಿಕೆ, ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ಬಂಡವಾಳ ಹೂಡಿಕೆ, ಶಿಕ್ಷಣ ಹಾಗೂ ಆರೋಗ್ಯದ ವ್ಯಾಪಾರೀಕರಣ ವಿರುದ್ಧ ಹೋರಾಡಲು, ಶುದ್ಧ ಕುಡಿಯುವ ನೀರು, ರಸ್ತೆ, ಚರಂಡಿ, ಬೀದಿ ದೀಪಗಳು ಹಾಗೂ ನೀರಿನ ಖಾಸಗೀಕರಣವನ್ನು ಕೈಬಿಡಲು ಒತ್ತಾಯಿಸಿ ಹೋರಾಡಲು ಎಸ್ಯುಸಿಐ(ಕಮ್ಯುನಿಸ್ಟ್)ಪಕ್ಷದ ಅಭ್ಯರ್ಥಿಯನ್ನು ಆಯ್ಕೆಮಾಡಬೇಕೆಂದು ಮತದಾರರಲ್ಲಿ ಮನವಿ ಮಾಡಲಾಯಿತು.
ಅಭ್ಯರ್ಥಿ ಎಸ್.ಎಂ. ಶರ್ಮಾ ಮಾತನಾಡಿ, ದೇಶದ ಲೋಕಸಭಾ ಚುನಾವಣೆಯು ಈ ಬಾರಿ ಕುತೂಹಲಕರವಾಗಿದೆ. ಭಾರಿ ಮಟ್ಟದಲ್ಲಿ ಜನರನ್ನು, ಯುವಜನತೆಯನ್ನು ರಾಜಕಿಯದತ್ತ ಆಕರ್ಷಿಸಿ ಹೊಸ ಬದಲಾವಣೆಯ ಆಕಾಂಕ್ಷೆಯನ್ನು ಬಿತ್ತಿದೆ. ದೇಶದಾದ್ಯಂತ ಹಲವಾರು ವರ್ಷಗಳಿಂದ ಆಳ್ವಿಕೆ ನಡೆಸುತ್ತಾ ಬಂದಿರುವ ರಾಜಕೀಯ ಪಕ್ಷಗಳು ಜನರನ್ನು ವಂಚಿಸಿ ಅವರ ಜೀವನವನ್ನು ಜರ್ಜರಿತಗೊಳಿಸಿವೆ. ಬೆಲೆಏರಿಕೆ, ಭ್ರಷ್ಟಾಚಾರ, ನಿರುದ್ಯೋಗ, ಮಹಿಳೆಯರ ಮೇಲಿನ ಅನಿಯಂತ್ರಿತ ದೌರ್ಜನ್ಯಗಳು ಜನತೆಯನ್ನು ರೊಚ್ಚಿಗೆಬ್ಬಿಸುತ್ತಿವೆ. ಈ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಯು ಎದುರಾಗಿದ್ದು ಭ್ರಷ್ಟ ಜನವಿರೋಧಿ ಪಕ್ಷಗಳನ್ನು ಸೋಲಿಸಲು ಸನ್ನದ್ಧರಾಗಬೇಕೆಂದು ಕರೆ ನೀಡಿದರು.
ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್.ವಿ. ದಿವಾಕರ್ರವರು ಉಪಸ್ಥಿತರಿದ್ದ ಈ ಪ್ರಚಾರ ಕಾರ್ಯಕ್ರಮದಲ್ಲಿ ಪಕ್ಷದ ಹಲವು ಸದಸ್ಯರು, ಬೆಂಬಲಿಗರೂ ಭಾಗವಹಿಸಿ ಮತಯಾಚಿಸಿದರು.
ಪಕ್ಷದ ಜಿಲ್ಲಾ ಸಮಿತಿಯ ಸದಸ್ಯ ಗೌಸ್ ಪಟೇಲ್, ಸಂತೋಷ್ ಕುಮಾರ್ ಹಿರವೆ, ಮಹೇಶ್ ನಾಡಗೌಡ, ಭಾಗಣ್ಣ, ಮಹೇಶ್ ಎಸ್.ಬಿ., ಸೀಮಾ ದೇಶಪಾಂಡೆ, ಅಭಯಾ, ಅಶ್ವಿನಿ, ಅಜಯ, ನಾಗಾರ್ಜುನ ಸೇರಿದಂತೆ ಹಲವಾರು ಜನ ಬೆಂಬಲಿಗರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

