ಗುಲ್ಬರ್ಗಾ

ಸಮಾಜೋದ್ಧಾರಕನಿಗೆ ಚಿಂಚೋಳಿಯಲ್ಲಿ ಸಲಾಮ್

Published On :

ಚಿಂಚೋಳಿ: ಸಮಾಜೋದ್ಧಾರಕ, ಧಾರ್ಮಿಕ ಕ್ರಾಂತಿಯ ಹರಿಕಾರ ಬಸವಣ್ಣನವರ ಜಯಂತಿಯನ್ನು ಪಟ್ಟಣ ಸೇರಿದಂತೆ ತಾಲೂಕಿನ ಅನೇಕ ಗ್ರಾಮಗಳಲ್ಲಿ ಶುಕ್ರವಾರ ಭಕ್ತಿ ಶ್ರದ್ಧೆಯಿಂದ ಆಚರಿಸಲಾಯಿತು.
ಅಖಿಲ ಭಾರತ ವೀರಶೈವಸಭಾ ಮತ್ತು ತಾಲೂಕ ಲಿಂಗವಂತ ಧರ್ಮತತ್ತ್ವ ಪ್ರಚಾರ ಸಂಸ್ಥೆ, ಶರಣೆ ನೀಲಾಂಬಿಕಾ ಬಸವ ತತ್ವ ಸೇವಾ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ಚಿಂಚೋಳಿ ಸರ್ಕಾರಿ ಪದವಿ ಕಾಲೇಜಿನ ಉಪನ್ಯಾಸಕ ಡಾ. ಸಂಗಪ್ಪ ಮಾಮನಶೆಟ್ಟಿ ಮಾತನಾಡಿ, ಬಸವೇಶ್ವರರು ಕಾಯಕಕ್ಕೆ ಹೆಚ್ಚಿನ ಮಹತ್ವ ನೀಡಿದರು.  ಕಾಯಕದಲ್ಲಿ ತನು, ಮನ ಮತ್ತು ಶ್ರದ್ಧೆ ಇದ್ದರೆ ಕೈಲಾಸ ಕಾಣಬಹುದು. ಪ್ರತಿಯೊಬ್ಬರಲ್ಲಿ ಕಾಯಕ ಕಲ್ಪನೆಯಿದ್ದರೆ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ಬದುಕು ಹಸನು: ನೀಲಾಂಬಿಕೆ ಬಸವ ತತ್ತ್ವ ಸೇವಾ ಟ್ರಸ್ಟ್ ಅಧ್ಯಕ್ಷೆ ಶಕುಂತಲಾ ಹುಲಿ ಮಾತನಾಡಿ, ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನೆಡೆದರೆ ಬದುಕು ಹಸನಾಗಲಿದೆ ಎಂದರು.
ತಾಲೂಕ ವೀರಶೈವ ಸಮಾಜದ ಅಧ್ಯಕ್ಷ ವಿಶ್ವನಾಥ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕ ಯುವ ವೀರಶೈವ ಅಧ್ಯಕ್ಷ ರಮೇಶ ಸೀಳಿನ್, ಉಮೇಶ ಬೆಳಕೇರಿ ಇದ್ದರು. ಪಟ್ಟಣದ ವೀರಶೈವ ಸಮಾಜದ ಮುಖಂಡರಾದ ಗೌತಮ್ ಪಾಟೀಲ್, ಭೀಮಶೆಟ್ಟಿ ಜಾಬಶೆಟ್ಟಿ, ಪಪಂ ಸದಸ್ಯ ವೀರಣ್ಣ ಬಬಲಾದಿ ಇನ್ನಿತರರು ಭಾಗವಹಿಸಿದ್ದರು.
ಅದ್ಧೂರಿ ಮೆರವಣಿಗೆ: ಹಾರಕೂಡ ಚೆನ್ನಬಸವೇಶ್ವರ ಕಲ್ಯಾಣ ಮಂಟಪದಿಂದ ಮುಲ್ಲಾಮಾರಿ ನದಿ ಸೇತುವೆ ಬಳಿ ಇರುವ ಬಸವೇಶ್ವರ ಚೌಕದವರೆಗೆ ಬಸವೇಶ್ವರರ ಭಾವಚಿತ್ರದ ಅದ್ಧೂರಿ ಮೆರವಣಿಗೆ ನಡೆಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.