ಗುಲ್ಬರ್ಗಾ

ಕೌಶಲ್ಯಾಭಿವೃದ್ಧಿ ವೃತ್ತಿ ತರಬೇತಿ ಕಾರ್ಯಾಗಾರ

Published On :

ಆಳಂದ: ಮಹಿಳೆಯರು ಪರಾವಲಂಬಿಗಳಾಗದೆ ಸ್ವಾವಲಂಬಿಗಳಾಗಿ ಬದುಕಬೇಕಾದರೆ ಕೌಶಲ್ಯಾಭಿವೃದ್ಧಿ ವೃತ್ತಿ ತರಬೇತಿ ಪಡೆಯುವುದು ಅವಶ್ಯಕವಾಗಿದೆ. ಈ ದಿಸೆಯಲ್ಲಿ ಹಳ್ಳಿಗಳಲ್ಲಿ ಮಹಿಳೆಯರು ಆಸಕ್ತಿಯಿಂದ ತರಬೇತಿ ಪಡೆದುಕೊಂಡರೇ ಆರ್ಥಾಕಾಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಸಂಯೋಜಕಿ ಶಂಕ್ರೆಮ್ಮಾ ಪಾಟೀಲ ಹೇಳಿದರು. ತಾಲೂಕಿನ ಹೊದಲೂರ ಗ್ರಾಮದಲ್ಲಿ ಜನಶಿಕ್ಷಣ ಸಂಸ್ಥಾನ ಗುಲ್ಬರ್ಗ ಹಾಗೂ ಗ್ರಾಮ ಲೋಕ ಶಿಕ್ಷಣ ಸಮಿತಿ  ಜಂಟಿ ಆಶ್ರಯದಲ್ಲಿ ನಡೆದ ಕೌಶಲ್ಯಾಭಿವೃದ್ಧಿ ವೃತ್ತಿ ತರಬೇತಿ ಕಾರ್ಯಾಗಾರದಲ್ಲಿ ಅವರು ತರಬೇತಿ ನೀಡಿ ಮಾತನಾಡಿದರು. ಲೋಕ ಶಿಕ್ಷಣ ಸಮಿತಿಯ ಸಂಯೋಜಕ ಹಾಗೂ ಪ್ರೇರಕ ಶಿವಾನಂದ ಮೂಲಗೆ, ಶಿಕ್ಷಕಿ ದೀಪಿಕಾ ಬನಶೆಟ್ಟಿ ಕಾರ್ಯಾಗಾರದ ಉದ್ದೇಶವನ್ನು ವಿವರಿಸಿದರು. ಗೀತಾ ಬನಶೆಟ್ಟಿ, ಜಗದೇವಿ, ಲತಾಫ, ಶ್ರೀದೇವಿ ಬಿರಾದಾರ, ಇತರರು ಪಾಲ್ಗೊಂಡಿದ್ದರು.


ಅಂಬಲಗಾ: ಅಂಬೇಡ್ಕರ್ ಜಯಂತ್ಯುತ್ಸವ ಇಂದು


ಗುಲ್ಬರ್ಗ: ಆಳಂದ ತಾಲೂಕಿನ ಕೆರಿ ಅಂಬಲಗಾ ಗ್ರಾಮದಲ್ಲಿ ಸಿದ್ದಾರ್ಥ ಯುವಕರ ಸಂಘ ವತಿಯಿಂದ ಮೇ 4ರಂದು ಬೆಳಗ್ಗೆ 8 ಗಂಟೆಗೆ ಡಾ. ಅಂಬೇಡ್ಕರ್ 123ನೇ ಜಯಂತ್ಯುತ್ಸವ ಹಮ್ಮಿಕೊಂಡಿದೆ. ಮೇ 4ರಂದು ಬೆಳಗ್ಗೆ 8 ಗಂಟೆಗೆ ಗೋಳಾ ಗ್ರಾಪಂ ಸದಸ್ಯ ಸೋಮಶೇಖರ ನವಲೆ ಧ್ವಜಾರೋಹಣ ನೆರವೇರಿಸುವರು. 8.30 ಗಂಟೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆ ಜರುಗುವುದು. ಸಂಜೆ 5 ಗಂಟೆಗೆ ನಡೆಯುವ ಬಹಿರಂಗ ಸಭೆಯನ್ನು ಶಾಸಕ ಜಿ. ರಾಮಕೃಷ್ಣ ಉದ್ಘಾಟಿಸುವರು. ಸೂರ್ಯ ಕಾಮತ ನಿಂಬಾಳಕರ ಜ್ಯೋತಿ ಬೆಳಗಿಸುವರು. ಅರ್ಜುನ ಶೃಂಗೇರಿ ಅಧ್ಯಕ್ಷತೆ ವಹಿಸುವರು. ಡಾ. ಸರ್ವೋದಯ ಎಸ್.ಎಸ್ ವಿಷಯ ಮಂಡನೆ ಮಾಡುವರು. ಅಂಬಾರಾಯ ಅಷ್ಟಗಿ, ಪ್ರಕಾಶ ಹಾಗರಗಿ, ಪಿಎಸ್‌ಐ ನರೋಣಾ, ಮಂಗಲ ಅರವಿಂದ ನರೋಣಾ ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದು ಜಯಂತ್ಯುತ್ಸವ ಸಮಿತಿ ಸಂಚಾಲಕ ಮಲ್ಲಿಕಾರ್ಜುನ ಎಲ್. ಕೆರಮಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.