ಕೆಂಭಾವಿಗೆ ಜೆಸ್ಕಾಂ ಕಗ್ಗತ್ತಲ ಕೊಡುಗೆ!
ಕೆಂಭಾವಿ: ಬೇಸಿಗೆ ಬಿಸಿಲು ಏರುತ್ತಿದ್ದಂತೆ ಪಟ್ಟಣದಲ್ಲಿ ವಿದ್ಯುತ್ ಸಮಸ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಯಾವಾಗ ನೋಡಿದರೂ ಪವರ್ ಕಟ್ ಸಮಸ್ಯೆಯಿಂದ ಕೆಂಭಾವಿ ಜನರು ಕತ್ತಲಲ್ಲಿ ಕಾಳ ಕಳೆಯುವಂತಾಗಿದೆ.
ಇದಕ್ಕೆ ಪೂರಕವೆಂಬಂತೆ ಕಳೆದೆರಡು ದಿನದಿಂದ ಪಟ್ಟಣದ ಸರ್ಕಾರಿ ಕಾಲೇಜು ಪಕ್ಕದಲ್ಲಿರುವ 100 ಕೆವಿ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸುಟ್ಟಿದ್ದು, ಇದರ ವ್ಯಾಪ್ತಿಯಲ್ಲಿ ಬರುವ ಸುಮಾರು 100 ಮನೆಗಳು ಎರಡು 3 ಫೇಸ್ ಗಿರಣಿಗಳು ಸೇರಿದಂತೆ ಹಲವು ಜನತೆ ಕತ್ತಲಲ್ಲಿ ಕಾಲ ಕಳೆಯುವ ಪರಿಸ್ಥಿತಿ ಬಂದೊದಗಿದೆ.
ಧನ ಸಹಾಯವಿದ್ದರೆ ಟಿಸಿ: ಬೇಸಿಗೆ ದಿನಗಳಲ್ಲಿ ವಿದ್ಯುತ್ ಅಭಾವ ನೀಗಿಸಲು ಜೆಸ್ಕಾಂ ಮುಂದಾಗಿದ್ದರೂ ಇಲ್ಲಿ ಸುಟ್ಟಿರುವ ಟಿಸಿ ತರಲು ಹಣವಿಲ್ಲದೆ ಚಂದಾ ಎತ್ತುವ ಪರಿಸ್ಥಿತಿ ಬಂದೊಗಿದೆ. ಇದಕ್ಕೆ ಸಂಬಂಧಿಸಿದ ಲೈನ್‌ಮ್ಯಾನ್‌ಗಳನ್ನು ವಿಚಾರಿಸಿದರೆ ಟಂಟಂ ಬಾಡಿಗೆಗೆ ರು. 2000 ಒದಗಿಸಬೇಕು ಎಂದು ಹೇಳುತ್ತಿರುವುದು ಜನತೆಗೆ ನಿರಾಸೆ ಮೂಡಿದೆ.
ಈಗ ಹಲವು ಬಾರಿ ಈ ಟಿಸಿ ಸುಟ್ಟಿದ್ದು ಬದಲಿ ಟಿಸಿಗಾಗಿ ಅನೇಕ ಬಾರಿ ಜನರಿಂದಲೇ ಹಣ ಸಂಗ್ರಹಿಸಿ, ಟಂಟಂ ಬಾಡಿಗೆ ನೀಡಿದ ಉದಾಹರಣೆಗಳು ಸಾಕಷ್ಟಿವೆ. ಇಲಾಖೆಯಲ್ಲಿರುವ ಲಾರಿಗಳು ಏನು ಮಾಡುತ್ತಿವೆ ಎಂಬ ಯಕ್ಷ ಪ್ರಶ್ನೆ ಜನತೆಯನ್ನು ಕಾಡುತ್ತಿದೆ.
ಟಿಸಿಗಳ ಕೊರತೆ: ಇದರ ಬಗ್ಗೆ ಇಲಾಖೆಯ ಎಇಇ ಬಸವರಾಜ ಅವರನ್ನು ಪತ್ರಿಕೆ ಸಂಪರ್ಕಿಸಿದಾಗ ಇಲಾಖೆಯಲ್ಲಿ 100ಕೆವಿ ಸಾಮರ್ಥ್ಯದ ಟಿಸಿಗಳ ಕೊರತೆಯಿದ್ದು, ಇನ್ನೆರಡು ದಿನಗಳಲ್ಲಿ ಸರಿಪಡಿಸಿ ವಿದ್ಯುತ್ ಕೊಡಲಾಗುವುದು. ಈ ಪ್ರದೇಶಗಳಲ್ಲಿ ವಿದ್ಯುತ್ ಒತ್ತಡ ಜಾಸ್ತಿ ಇದ್ದು, ಇದನ್ನು ನೀಗಿಸಲು ಇನ್ನೊಂದು ಟಿಸಿ ಕೂಡಿಸುವ ವ್ಯವಸ್ಥೆಗೆ ಶಾಖಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಹೇಳಿದರು. ಏನೇ ಇರಲಿ, ಬೇಸಿಗೆ ವಿದ್ಯುತ್ ಸಮಸ್ಯೆ ಆಗದೆ ಜನರಿಗೆ ಉತ್ತಮ ವಿದ್ಯುತ್ ವ್ಯವಸ್ಥೆ ಕಲ್ಪಿಸಲು ಇಲಾಖೆ ಮುಂದಾಗಬೇಕು ಎಂಬುದೇ ಇಲ್ಲಿನ ಜನತೆಯ ಆಶಯವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

