ಗುಲ್ಬರ್ಗಾ

ವಿಜೃಂಭಣೆಯಿಂದ ಭಗೀರಥ ಜಯಂತಿ ಆಚರಣೆ

Published On :

ಯಾದಗಿರಿ: ಜಿಲ್ಲಾ ಮತ್ತು ತಾಲೂಕು ಭಗೀರಥ ಉಪ್ಪಾರ ಸಮಾಜದ ಸಂಯುಕ್ತ ಆಶ್ರಯದಲ್ಲಿ ನಗರದ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಭಗೀರಥ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಜಿಲ್ಲಾ ಉಪ್ಪಾರ ಸಮಾಜದ ಅಧ್ಯಕ್ಷ ಪಿ. ಶಿವರಾಜ ಉಳ್ಳೇಸುಗೂರ ಯಾದಗಿರಿ ಸಮಾರಂಭವನ್ನು ಉದ್ಘಾಟಿಸಿದರು.  ತಾಲೂಕು ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಕಟ್ಟಿಮನಿ ಅಧ್ಯಕ್ಷತೆ ವಹಿಸಿದ್ದರು. ವೆಂಕಟೇಶ ಡಿ.ಎಂ. ರಾಮಣ್ಣ ಚಿಗಿರಿಹಳ್ಳಿ ಮುಂತಾದವರು ಮುಖ್ಯ ಅತಿಥಿಗಳಾಗಿದ್ದರು. ಕಾರ್ಯಕ್ರಮದಲ್ಲಿ ಯಾದಗಿರಿ ನಗರ ಘಟಕದ ಹಾಗೂ ತಾಲ್ಲೂಕು ಘಟಕದ ಪದಾಧಿಕಾರಿಗಳ ನೇಮಕ ಮಾಡಲಾಯಿತು.
ಯಾದಗಿರಿ ನಗರ ಘಟಕ: ಗಣೇಶ ಕಟ್ಟಿಮನಿ(ಅಧ್ಯಕ್ಷ), ಜಗದೀಶ ಕಟ್ಟಿಮನಿ (ಪ್ರ.ಕಾರ್ಯದರ್ಶಿ), ಶರಣು ಕಟ್ಟಿಮನಿ, ತಾಲೂಕಾ ಯಾದಗಿರಿ ಯುವ ಅಧ್ಯಕ್ಷ), ಕಾಶಪ್ಪ ಕೆ.ಆರ್. ರಾಮಸಮುದ್ರ(ಪ್ರ.ಕಾರ್ಯದರ್ಶಿ), ವೆಂಕಪ್ಪ ಗೋಪಾಲಪುರ, ಹಳ್ಳೆಪ್ಪ ಮನಗಾರ ಶೆಟ್ಟಿಗೇರಾ(ಉಪಾಧ್ಯಕ್ಷ) ಮಾರ್ತಾಂಡಪ್ಪ ಕಟ್ಟಿಮನಿ(ಸಹ ಕಾರ್ಯದರ್ಶಿ), ಬನ್ನಪ್ಪ ಬೆಳಗುಂದಿ(ಖಜಾಂಚಿ), ಭೀಮಪ್ಪ ಸೌರಾಷ್ಟ್ರಹಳ್ಳಿ (ಸಂಘಟನೆ ಕಾರ್ಯದರ್ಶಿ). ಜಿಲ್ಲಾಧ್ಯಕ್ಷ ವಕೀಲ ಪಿ.ಶಿವರಾಜ ಹಾಗೂ ತಾಲೂಕ ಅಧ್ಯಕ್ಷ ಮಲ್ಲಿಕಾರ್ಜುನ ಕಟ್ಟಮನಿ ಇವರ ನೇತೃತ್ವದಲ್ಲಿ ಈ ನೇಮಕಗಳನ್ನು ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಭಗೀರಥ ಉಪ್ಪಾರ ಸಮಾಜದ ವಧು-ವರರ ಮಾಹಿತಿ ಪ್ರತಿನಿಧಿಯನ್ನಾಗಿ ರಾಘವೇಂದ್ರ ಬಂಡಿಮನಿ ಯಾದಗಿರಿ ಇವರನ್ನು ನೇಮಕ ಮಾಡಲಾಯಿತು. ಶಿವಾರಾಜ ಕಿಣಕೇರಿ ಖಜಾಂಚಿ ರಾಮಲಿಂಗ ಯರಗೋಳ, ಶೆಟ್ಟಿಹಳ್ಳಿ ಗ್ರಾಮಘಟಕ ಅಧ್ಯಕ್ಷರು ಇತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.