ಭೂ ಸರ್ವೇಗೆ ವಿಳಂಬ; ವಹಿವಾಟಿಗೆ ವರ್ಷವೇ ಗತಿ
ಕ.ಪ್ರ. ವಾರ್ತೆ ್ಣ ಆಳಂದ ್ಣ ಮೇ 5
ಭೂ ದಾಖಲೆಗಾಗಿ ಮಾಲೀಕರು ಅರ್ಜಿ ಸಲ್ಲಿಸಿ ಸಾಕಷ್ಟು ಹಣ, ಸಮಯ ಎರಡನ್ನು ವಿನಿಯೋಗಿಸಿದ ಮೇಲೂ ಸಂಬಂಧಿತರ ಕಡತ ನಿಗದಿತ ಅವಧಿಯೊಳಗೆ ವಿಲೇವಾರಿಯಾಗದೆ ಪರದಾಡುವಂತಾಗಿದೆ. ಸಂಬಂಧಿತ ಮೇಲಾಧಿಕಾರಿಗಳು ಇದಕ್ಕೆ ಸ್ಪಂದಿಸದೇ ಇರುವುದು ವಿಪರ್ಯಾಸ.
ಕಳೆದ ನವೆಂಬರ್ನಿಂದ ಇದುವರೆಗೆ ಸಲ್ಲಿಕೆಯಾದ 1400 ಅರ್ಜಿಗಳ ವಿಲೇವಾರಿಯಾಗದೆ, ಬಾಕಿ ಉಳಿದಿವೆ. ಅಕ್ಟೋಬರ್ನಲ್ಲಿ ಬಂದ ಅರ್ಜಿಗಳ ಸಂಖ್ಯೆ 140, ಅವು ಸಹ ಬಾಕಿ ಉಳಿದಿವೆ. ತಿಂಗಳಿಗೆ ಕನಿಷ್ಟ 300 ಮಂದಿ ದಾಖಲೆ ಬಯಸಿ ಅರ್ಜಿ ಸಲ್ಲಿಸಿದರೆ, ಅದಕ್ಕೆ ಪ್ರತಿಯಾಗಿ ಕೇವಲ 140 ರಿಂದ 180 ಮಂದಿಯ ಅರ್ಜಿ ಮಾತ್ರ ವಿಲೆವಾರಿಯಾಗುತ್ತದೆ. ಇದರಿಂದ ಪ್ರತಿ ತಿಂಗಳೂ ಅರ್ಜಿಗಳು ಬಾಕಿ ಉಳಿಯುವುದಲ್ಲದೆ, ಅವುಗಳ ಸಂಖ್ಯೆ ಹೆಚ್ಚಾಗುತ್ತಾ ಹೊಗುತ್ತದೆ. ಸದ್ಯ 9 ಮಂದಿ ಸರ್ವೇಯರ್ಗಳಿದ್ದಾರೆ. ಆದರೆ ಅವರ ಜೊತೆಗೆ ಇನ್ನೂ 9 ಸರ್ವೇಯರ್ಗಳನ್ನು ಕೊಟ್ಟರೂ, ಕೆಲಸ ಆಗದ ಪರಿಸ್ಥಿತಿ ಎದುರಾಗಿದೆ ಎನುತ್ತಾರೆ ಭೂಮಾಪನ ಶಾಖೆ ಸಿಬ್ಬಂದಿ.
ಈ ಸಿಬ್ಬಂದಿ ಕೊರತೆಯಿಂದ ವಿಲೇವಾರಿ ಮೇಲ್ನೋಟಕ್ಕೆ ಕಂಡು ಬಂದರೂ, ಇದ್ದ ಸಿಬ್ಬಂದಿ ನಿಷ್ಕಾಳಜಿ ಮತ್ತು ಆಮಿಷದ ಪ್ರಭಾವವೂ ದಾಖಲೆ ಪಡೆಯಲು ವಿಳಂಬಕ್ಕೆ ಕಾರಣವೂ ಆಗತೊಡಗಿದೆ ಎನ್ನುತ್ತಾರೆ ರೈತರು.
ತಪ್ಪದ ಪರದಾಟ: ಬಹುತೇಕರು ತಮ್ಮ ಕುಟುಂಬದ ತುರ್ತು ಪರಿಸ್ಥಿತಿಯಿಂದ ಆರ್ಥಿಕ ತೊಂದರೆ ನಿವಾರಣೆ ಅಥವಾ ಆಸ್ತಿ ವರ್ಗೀಕರಣ, ಹಂಚಿಕೆ, ಮಾರಾಟ ಹೀಗೆ ಮತ್ತಾವುದೋ ಅನುಕೂಲಕ್ಕಾಗಿ ಜಮೀನಿಗೆ ಸಂಬಂಧಿಸಿದ ಅಗತ್ಯ ದಾಖಲೆ ಪಡೆಯಲು ಅರ್ಜಿ ಸಲ್ಲಿಸಿದರೆ ಹತ್ತಾರು ತಿಂಗಳು ಕಾಯಬೇಕು.
ಹೀಗೆ ನಿಗದಿತ ಸಮಯದಲ್ಲಿ ದಾಖಲೆ ದೊರೆಯದೆ ಇರುವುದರಿಂದ, ಇತ್ತ ವಹಿವಾಟು ಮಾಡಬೇಕೋ ಅಥವಾ ಕುಟುಂಬದ ತುರ್ತು ಪರಿಸ್ಥಿತಿ ನಿಭಾಯಿಸಬೇಕೋ ಎಂಬ ಸಮಸ್ಯೆ ಕಾಡತೊಡಗಿದೆ. ಇದರಲ್ಲಿ ಕಂದಾಯ ಇಲಾಖೆಯ ಸಾಕಷ್ಟು ಅಧಿಕಾರಿಗಳೂ ಸೇರಿಕೊಂಡಿದ್ದಾರೆ. ಖಾತೆ ಬದಲಾವಣೆ ಪ್ರಕ್ರಿಯೆಯಲ್ಲಂತೂ ಗ್ರಾಮ ಲೆಕ್ಕಾಧಿಕಾರಿಗಳು ಅವರದ್ದೇ ದಾಖಲೆಗಳನ್ನು ಸೃಷ್ಟಿಸಿಕೊಂಡು ಭೂ ಮಾಲೀಕರಿಂದ ಸಾಕಷ್ಟು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಬಹಿರಂಗವಾಗಿಯೇ ಕೇಳಿ ಬರುತ್ತಿದೆ. ಆದರೆ, ಪರವಾನಗಿ ಭೂ ಮಾಪಕರಿಗೆ ಸರ್ಕಾರದಿಂದ ಲಭ್ಯವಾಗಬೇಕಾಗಿರುವ ಶುಲ್ಕ ಮಾತ್ರ ಪಾವತಿಯಾಗುತ್ತಿಲ್ಲ.
ಆಳಂದ ಶಾಖೆ: ಭೂಸರ್ವೇ ಕಾರ್ಯವನ್ನು ಅರ್ಜಿಗಳ ಆಧಾರದ ಮೇಲೆ ಬೆಂಗಳೂರಿನಿಂದಲೇ ಆನ್ಲೈನ್ ಮೂಲಕ ಸ್ಥಳೀಯ ಸಿಬ್ಬಂದಿಗೆ ಕೆಲಸ ಹಂಚಿಕೆ ಮಾಡುತ್ತಿದೆ. ಹಂಚಿಕೆಯಾದ ಕೆಲಸವನ್ನು ಪರವಾನಗಿ ಪಡೆದ ಮತ್ತು ಸರ್ಕಾರಿ ಭೂಮಾಪಕರು ಯಥಾವತ್ತಾಗಿ ಕೆಲಸ ನಿರ್ವಹಿಸುತ್ತಿದ್ದರೂ ಕೂಡ ವಿಳಂಬಕ್ಕೆ ಕಾರಣವಾಗಿದೆ.
ಒತ್ತಾಯ: ಸರ್ಕಾರ ತಾಲೂಕಿಗೆ ಅಗತ್ಯಕ್ಕೆ ತಕ್ಕಂತೆ ಸರ್ವೇಯರ್ಗಳನ್ನು ನೇಮಿಸಿಕೊಂಡು ನಿಗದಿತ ಸಮಯಕ್ಕೆ ದಾಖಲೆಗಳನ್ನು ಕೊಡುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

