ಗುಲ್ಬರ್ಗಾ

ಇನ್ನೂ ಬೆಳೆ ಹಾನಿ ಪರಿಹಾರದ ಸುಳಿವಿಲ್ಲ

Published On :

ಕ.ಪ್ರ. ವಾರ್ತೆ ್ಣ ಆಳಂದ ್ಣ ಮೇ 12
ಕಳೆದ ಮಾರ್ಚ್ 3ರಂದು ತಾಲೂಕಿನ ಹಲವು ಭಾಗದಲ್ಲಿ ಬಿದ್ದ ಆಲಿಕಲ್ಲು ಮಳೆಗೆ ತೋಟಗಾರಿಕೆ ಮತ್ತು ಖುಷ್ಕಿ ಜಮೀನಿನ ಬೆಳೆ ಹಾಳಾದ ಕುರಿತು ತಾಲೂಕಾಡಳಿತ ಅಂಕಿ- ಅಂಶ ಸಿದ್ಧಪಡಿಸಿ ಮೊದಲು ಮತ್ತು ಎರಡನೇ ಹಂತದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಆದರೆ ಸರ್ಕಾರ ಈವರೆಗೆ ಸಹಾಯಧನ ನೀಡುವ ಅಥವಾ ಹಣ ಬಿಡುಗಡೆ ಮಾಡುವ ನಿರ್ಧಾರ ಪ್ರಕಟಿಸದಿರುವುದು ರೈತರಲ್ಲಿ ನಿರಾಸೆ ಮೂಡಿಸುತ್ತಿದೆ.
ಇನ್ನೊಂದಡೆ ತಾಲೂಕಾಡಳಿತ ತನ್ನ ಸಂಪೂರ್ಣ ವರದಿಯನ್ನು ಸಿದ್ಧಪಡಿಸಲು ಮಾ.3ರಿಂದ ಬಹುತೇಕವಾಗಿ ಮೇ 9ರವರೆಗೆ ಬಹುಕಾಲ ವ್ಯಯ ಮಾಡಿದ್ದೇ ಪರಿಹಾರ ಮೊತ್ತ ಬಿಡುಗಡೆ ವಿಳಂಬಕ್ಕೆ ಕಾರಣವಾಗಿದೆ.
ಬೆಳೆ ಹಾಳಾದ ರೈತರು ಸರ್ಕಾರಿ ಕಚೇರಿ, ಅಧಿಕಾರಿಗಳ ಬಳಿಗೆ ಅಲೆದು ಪರಿಹಾರಕ್ಕೆ ಅರ್ಜಿ ಸಲ್ಲಿಸಿ ಪರದಾಡಿದ್ದು ಒಂದಡೆಯಾದರೆ, ಮತ್ತೊಂದೆಡೆ, ಸ್ವತಃ ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಜಂಟಿ ಸಮೀಕ್ಷಾ ಕಾರ್ಯ ಕೈಗೊಂಡು ಅಂಕಿ-ಅಂಶವನ್ನು ಕಲೆಹಾಕುವ ಕಾರ್ಯವನ್ನು ಗಮನಿಸಿದ ರೈತರು ಖುಷಿಯಿಂದ ತಕ್ಕಮಟ್ಟಿಗೆ ತುರ್ತು ಪರಿಹಾರ ದೊರೆಯಬಹುದೆಂಬ ಆಸೆಗೆ ತಣ್ಣೀರೆರಚತೊಡಗಿದೆ.
ಹಾನಿಯಾದ ಕ್ಷೇತ್ರ: ತಾಲೂಕಿನ ಆಳಂದ, ನರೋಣಾ, ಮಾದನಹಿಪ್ಪರಗಾ, ಖಜೂರಿ ಮತ್ತು ನಿಂಬರಗಾ ಹೋಬಳಿ ವಲಯದಲ್ಲಿ ಖುಷ್ಕಿ ಮತ್ತು ತೋಟಗಾರಿಕೆಯಲ್ಲಿ 21,785 ರೈತರ ಪೈಕಿ 54,679 ಎಕರೆ ಬೆಳೆ ಹಾನಿಗೀಡಾಗಿದೆ. ಅದರಲ್ಲಿ 42,075.33 ಎಕರೆ ಬೆಳೆ ಹಾನಿಯಾಗಿದೆ. ಇದಕ್ಕೆ 28,28,02,450 ಪರಿಹಾರ ನೀಡುವುದು ಅಗತ್ಯ ಎಂದು ಸ್ಥಳೀಯ ಅಧಿಕಾರಿಗಳು ಅಂತಿಮವಾಗಿ ವರದಿ ಸಲ್ಲಿಸಿದ್ದಾರೆ.
ವರದಿಯಲ್ಲಿ ಖುಷ್ಕಿ ಫಲಾನುಭವಿಗಳ ಸಂಖ್ಯೆ 20,187, ತೋಟಗಾರಿಕೆ 1,564 ಫಲಾನುಭವಿ ಸೇರಿ ಒಟ್ಟು 21,785 ಫಲಾನುಭವಿಗಳಿದ್ದು, ಇದರಲ್ಲಿ ಹಾನಿಯಾದ ಖುಷ್ಕಿ ಜಮೀನಿನ ಬೆಳೆಯ 50,819.01 ಎಕರೆ. ನೀರಾವರಿ 586.37 ಎಕರೆ ಮತ್ತು ತೋಟಗಾರಿಕೆ 3,273.32 ಎಕರೆ ಹೀಗೆ ಒಟ್ಟು 54,679 ಎಕರೆ ಬೆಳೆಯ ಹಾನಿಯನ್ನು ಅಂದಾಜಿಸಲಾಗಿದೆ.
28,28,02,450 ಪರಿಹಾರ ಅಗತ್ಯ: ಅಲ್ಲದೆ, ಇದಕ್ಕಾಗಿ ಪರಿಹಾರ ನೀಡುವ ಕುರಿತು ಪ್ರಾಥಮಿಕವಾಗಿ ಅಂದಾಜಿನಂತೆ 38,739.35 ಎಕರೆ ಒಣಬೇಸಾಯ, 502 ಎಕರೆ ನೀರಾವರಿ ಮತ್ತು 2,833.38 ಎಕರೆ ತೋಟಗಾರಿಕೆ ಸೇರಿ ಒಟ್ಟು 42,075.33 ಎಕರೆಗೆ ಪರಿಹಾರ ನೀಡಬೇಕಾಗಿದೆ. ಪರಿಹಾರ ಮೊತ್ತವನ್ನು ಖುಷ್ಕಿಗೆ 23,24,39,250, ನೀರಾವರಿಗೆ 50,20,000 ಮತ್ತು ತೋಟಗಾರಿಕೆಗೆ 4,53,43,200 ಸೇರಿ ಒಟ್ಟು ಹಾನಿಯ ಪರಿಹಾರದ ಮೊತ್ತ 28,28,02,450 ಪರಿಹಾರ ನೀಡುವುದು ಅಗತ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.