ಗುಲ್ಬರ್ಗಾ

ಎಸ್ಸೆಸ್ಸೆಲ್ಸಿ: ಎಸ್ಬಿಆರ್ ಮಕ್ಕಳ ಉತ್ತಮ ಸಾಧನೆ

Published On :

ಗುಲ್ಬರ್ಗ: ಇಲ್ಲಿನ ಶರಣಬಸವೇಶ್ವರ ವಸತಿ ಶಾಲೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದೆ. ಶಾಲೆಯ ಫಲಿತಾಂಶ ಶೇ. 97.14ರಷ್ಟಾಗಿದೆ. 163 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 76 ವಿದ್ಯಾರ್ಥಿಗಳು ಶೇ.90ಕ್ಕಿಂತ ಅಧಿಕ ಅಂಕ ಪಡೆದಿದ್ದಾರೆ.
87ವಿದ್ಯಾರ್ಥಿಗಳು ಶೇ.85ಕ್ಕೂ ಅಧಿಕ ಅಂಕ ಪಡೆದು ಉತ್ತೀರ್ಣರಾಗಿದ್ದಾರೆ. ವಿಷಯವಾರು 100ಕ್ಕೆ 100 ಅಂಕಗಳನ್ನೂ ವಿದ್ಯಾರ್ಥಿಗಳು ಸಾಧಿಸಿದ್ದಾರೆ. ಸಮಾಜ ವಿಜ್ಞಾನದಲ್ಲಿ 6, ಕನ್ನಡದಲ್ಲಿ 4, ಗಣಿತದಲ್ಲಿ ಒಬ್ಬ ವಿದ್ಯಾರ್ಥಿ 100ಕ್ಕೆ 100 ಅಂಕ ಪಡೆದು ಸಾಧನೆ ಮೆರೆದಿದ್ದಾರೆ.
ಅಕ್ಷತಾ ಮಾಲೀಪಾಟೀಲ್ ಶೇ.96.80 ಅಂಕಗಳೊಂದಿಗೆ ಶಾಲೆಗೆ ಪ್ರಥಮ, ಗುರುರಾಜ ಪಾಟೀಲ್ ಶೇ. 96.54 ದ್ವಿತೀಯ, ಧೀರಜ ಬಿರಾದಾರ್ ಶೇ. 96.32 ತೃತೀಯ ಸ್ಥಾನ ಪಡೆದು ಸಾಧಕರಾಗಿ ಹೊರಹೊಮ್ಮಿದ್ದಾರೆ.
ಶಾಲೆಯ ಒಟ್ಟು 491 ಮಕ್ಕಳು ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದು. ಶೇ.97.34 ರಷ್ಟು ಮಕ್ಕಳು ಉತ್ತೀರ್ಣರಾಗುವ ಮೂಲಕ ಶಾಲೆಯ ಕೀರ್ತಿ ಪತಾಕೆ ಹಾರಿಸಿದ್ದಾರೆ ಎಂದು ಪ್ರಾಚಾರ್ಯ ಎನ್.ಎಸ್. ದೇವರಕಲ್ ತಿಳಿಸಿದ್ದಾರೆ.
100ಕ್ಕೆ 100 ಸಾಧಕರು: ಕನ್ನಡ ವಿಷಯದಲ್ಲಿ- ಅಭಿಷೇಕ ಕುಲ್ಕರ್ಣಿ, ಅವಿನಾಶ ನಂದಿ, ಸೈಯ್ಯದ್ ಹಸೀಬುದ್ದೀನ್, ಸುಷ್ಮಾ ಕೋರಳ್ಳಿ
ಇಂಗ್ಲಿಷ್ ವಿಷಯದಲ್ಲಿ- ಅಕ್ಷತಾ ಮಾಲೀಪಾಟೀಲ್, ಹಿಂದಿ ವಿಷಯದಲ್ಲಿ- ಅವಿನಾಶ ನಂದಿ, ಅಕ್ಷತಾ ಮಾಲೀಪಾಟೀಲ್, ಸುರೈ ನೌಶೀನ್, ಅರ್ಪಿತಾ ಸಿಂಗ ಪ್ರತಾಪಸಿಂಗ್, ಧೀರಜ ಬಿರಾದಾರ್, ಅಂಕಿತಾ ಬಿರಾದಾರ್, ಅತುಲ ಕುಮಾರ್, ಭಾಗ್ಯಾ ಬಿ, ಸಫಾ ಮೈರಾಜ್, ಭಾಗ್ಯಲಕ್ಷ್ಮೀ ಪಾಟೀಲ್, ಅಶ್ವಿನಿ, ಗಿರೀಶ ಬುದ್ವಾನಿ, ಜಯತೀರ್ಥ ಕೆ, ಜೀವಿತಾ, ಅಕ್ಷತಾ, ಗಣಿತ- ಧೀರಜ ಬಿರಾದಾರ್, ವಿಜ್ಞಾನ ವಿಷಯದಲ್ಲಿ- ಭಾಗ್ಯಲಕ್ಷ್ಮೀ ಪಾಟೀಲ್
ಸಮಾಜ ವಿಜ್ಞಾನದಲ್ಲಿ- ಗುರುರಾಜ ಎಸ್‌ಎಂ, ಆಕಾಶ, ನಿಖಿಲ ಉಮೇಶ, ಪ್ರಮೋದ, ಅನುಷಾ ಪಾಟೀಲ್, ಅಕ್ಷತಾ ಮಾಲೀಪಾಟೀಲ್ ಔಟ್ ಆಫ್ ಔಟ್ ಅಂಕಗಳನ್ನು ಗಳಿಸಿದ್ದಾರೆ.
ಮಕ್ಕಳು ಎಸ್ಸೆಸ್ಸೆಲ್ಸಿಯಲ್ಲಿ ಮಾಡಿರುವ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಡಾ. ಶರಣಬಸವಪ್ಪ ಅಪ್ಪ, ಪ್ರಾಚಾರ್ಯರಾದ ಎನ್.ಎಸ್. ದೇವರಕಲ್ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.