ಸುರಪುರ: ಎಸ್ಸೆಸ್ಸೆಲ್ಸಿ ಬಾಲಕರ ಮೇಲುಗೈ
ಸುರಪುರ: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಒಟ್ಟು 3462 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದರು. ಅದರಲ್ಲಿ 1706 ಬಾಲಕರು, 1294 ಬಾಲಕಿಯರು ಸೇರಿದಂತೆ ಒಟ್ಟು 3000 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ತಾಲೂಕಿಗೆ ಶೇ.86.66ರಷ್ಟು ಉತ್ತಮ ಫಲಿತಾಂಶ ಬಂದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ವಿ. ಕೆಂಪರಂಗಯ್ಯ ತಿಳಿಸಿದ್ದಾರೆ. ಕೆಂಭಾವಿ ಹೇಮರಡ್ಡಿ ಮಲ್ಲಮ್ಮ ಪ್ರೌಢಶಾಲೆಯ ತರನಂ ಮೈನುದ್ದೀನ್ ಸಾಸನೂರ- ಶೇ.94.44, ಸರ್ವೋದಯ ಪ್ರೌಢಶಾಲೆ ಕಾದಂಬರಿ ಕಾಡ್ಲೂರು- ಶೇ.93.44, ವಜ್ಜಲ್ ಸರ್ಕಾರಿ ಪ್ರೌಢಶಾಲೆ ಮಹೆಬೂಬ್- ಶೇ.93.28, ಸುರಪುರದ ಗಾಯಿತ್ರಿ ಪ್ರೌಢಶಾಲೆ ಮೌನೇಶ- 92.80, ಸುರಪುರ ವೆಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಭಾರ್ಗವಿ ಕನಕಗಿರಿ- ಶೇ.92.16ರಷ್ಟು ಸಾಧನೆ ಮಾಡಿದ್ದಾರೆ. ಕೊಡೇಕಲ್ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಹುಣಸಗಿಯ ಬಿ.ಎನ್. ಪಾಟೀಲ್ ಪ್ರೌಢಶಾಲೆ, ಆಲ್ದಾಳದ ಸರ್ಕಾರಿ ಪ್ರೌಢಶಾಲೆ, ಕೆಂಭಾವಿಯ ಹೇಮರಡ್ಡಿ ಮಲ್ಲಮ್ಮ ಪ್ರೌಢಶಾಲೆ ಮತ್ತು ರಾಜನಕೋಳೂರಿನ ರಾಣಿ ಕಿತ್ತೂರು ಚನ್ನಮ್ಮ ವಸತಿ ಪ್ರೌಢಶಾಲೆಗಳು ಫಲಿತಾಂಶದಲ್ಲಿ ಶೇ.100ರಷ್ಟು ಸಾಧನೆ ಮಾಡಿವೆ. ಸರ್ವೋದಯ ಶಿಕ್ಷಣ ಸಂಸ್ಥೆ: ಇಲ್ಲಿಯ ಸರ್ವೋದಯ ಶಿಕ್ಷಣ ಸಂಸ್ಥೆಪ್ರೌಢಶಾಲೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.93ರಷ್ಟು ಸಾಧನೆ ಮಾಡಿದೆ. ಇಬ್ಬರು ವಿದ್ಯಾರ್ಥಿಗಳು ಅಗ್ರ ಶ್ರೇಣಿಯಲ್ಲಿ, 40 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಗಾಯಿತ್ರಿ ಶಾಲೆ: ಪ್ರೌಢಶಾಲೆಯು ಶೇ.98.46ರಷ್ಟು ಸಾಧನೆ ಮಾಡಿದೆ. ಪರೀಕ್ಷೆಗೆ ಕುಳಿತ 65 ವಿದ್ಯಾರ್ಥಿಗಳ ಪೈಕಿ 12 ಅಗ್ರಶ್ರೇಣಿ, 43 ಪ್ರಥಮ, 5 ದ್ವಿತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಸುರಪುರದ ಡಾ. ಬಿ.ಆರ್. ಅಂಬೇಡ್ಕರ್ ಪ್ರೌಢಶಾಲೆ ಶೇ.92.5ರಷ್ಟು ಸಾಧನೆ ಮಾಡಿದೆ. ಹಾಜರಾದ 40 ವಿದ್ಯಾರ್ಥಿಗಳಲ್ಲಿ 11 ಪ್ರಥಮ, 8 ದ್ವಿತೀಯ, 18 ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಗುರುಕುಲ್: ರಂಗಂಪೇಟೆ ಗುರುಕುಲ್ ಪ್ರೌಢಶಾಲೆ ಶೇ.96.46ರಷ್ಟು ಸಾಧನೆ ಮಾಡಿದೆ. 28 ವಿದ್ಯಾರ್ಥಿಗಳಲ್ಲಿ 2 ಅಗ್ರಶ್ರೇಣಿ, 12 ಪ್ರಥಮ, 12 ದ್ವಿತೀಯ, 3 ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

