ಅಂಬೇಡ್ಕರ್ ತತ್ವ ಮನೆ ಮನೆಗೆ ತಲುಪಲಿ: ಜವಳಿ
ಕ.ಪ್ರ. ವಾರ್ತೆ, ಆಳಂದ, ಮೇ 18
ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರರ ಸಮತಾ ಸಮಾಜ ಕಟ್ಟುವ ವಿಚಾರಗಳನ್ನು ಪ್ರತಿಯೊಬ್ಬರ ಮನೆ ಮನೆಗೆ ಮುಟ್ಟಿಸಲು ಯುವಪಡೆ ಸಜ್ಜಾಗಬೇಕೆಂದು ದಲಿತ ಸೇನೆ ಜಿಲ್ಲಾ ಅಧ್ಯಕ್ಷ ನಾಗೇಂದ್ರ ಜವಳಿ ಹೇಳಿದರು.
ತಾಲೂಕಿನ ಬಸವಣ್ಣ ಸಂಗೊಳಗಿ ಗ್ರಾಮದಲ್ಲಿ ಭಾನುವಾರ ಜೈಭೀಮ ನವತರುಣ ಸಂಘ ಹಾಗೂ ದಲಿತ ಸೇನೆ ಗ್ರಾಮ ಶಾಖೆ ಏರ್ಪಡಿಸಿದ್ದ ಡಾ. ಅಂಬೇಡ್ಕರ್ ಜಯಂತಿ ಸಮಾರಂಭದಲ್ಲಿ ಮಾತನಾಡಿ, ದೇಶದ ಸಮಸ್ತ ನಾಗರಿಕರ ಅಭಿವೃದ್ಧಿಗಾಗಿ ಸಂವಿಧಾನ ನೀಡಿದ್ದಾರೆ. ಹಿಂದುಳಿ ಮತ್ತು ಶೋಷಿತರ ಒಳಗೊಂಡು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ನೀಡಲು ಸಂವಿಧಾನ ಬರೆದ ಮಹಾನ್ ವ್ಯಕ್ತಿಯ ವಿಚಾರ ಕೇವಲ ಜಯಂತಿ, ಮೆರವಣಿಗೆಗೆ ಸೀಮಿತಗೊಳಿಸದೆ, ಅವರು ಕಂಡುಕೊಂಡ ಚಳವಳಿ ಮುನ್ನಡೆಸಲು ಮುಂದಾಗಬೇಕಾಗಿದೆ ಎಂದರು.
ಮಹಾತ್ಮರ ಮಾರ್ಗ ಅನುಕರಿಸಿ: ಗುಲ್ಬರ್ಗ ಸರ್ಕಾರಿ ಪದವಿ ಕಾಲೇಜಿನ ಪ್ರಾಧ್ಯಾಪಕ ಬಿ. ಕೃಷ್ಣಪ್ಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಬುದ್ಧ, ಬಸವ, ಡಾ. ಅಂಬೇಡ್ಕರ್ ಅವರ ಮಾರ್ಗವನ್ನು ಅನುಸರಿಸಬೇಕು. ದುಶ್ಚಟಗಳಿಗೆ ಬಲಿಯಾಗದೆ ಒಳ್ಳೆಯ ಬದುಕು ರೂಪಿಸಿಕೊಂಡು ಶಿಕ್ಷಣ ಸಂಘಟನೆ ಮೂಲಕ ಉತ್ತಮ ನಾಗರಿಕರಾಗಿ ಹೊರಹೊಮ್ಮಬೇಕೆಂದು ಸಲಹೆ ನೀಡಿದರು.
ಸಂತೋಷ ಶಿಂಧೆ, ಮರೆಪ್ಪ ಬಡಿಗೇರ, ದಲಿತ ಸೇನೆ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಬೋಳಣಿ ಮಾತನಾಡಿ, ಮೂಢನಂಬಿಕೆ ಕಂದಾಚಾರವನ್ನು ಬಿಟ್ಟು ಸುಶಿಕ್ಷಿತರಾಗಿ ಓದುವಿನ ಮೂಲಕ ಇತಿಹಾಸವನ್ನು ಅರಿತು, ತಪ್ಪು ದಾರಿ ತುಳಿಯದೆ ಅಂಬೇಡ್ಕರ್ ಹಾಕಿಕೊಟ್ಟ ತತ್ವ ಸಿದ್ಧಾಂತಗಳನ್ನು ಪಾಲಿಸಬೇಕು ಎಂದರು.
ಪಂಚಶೀಲ ಧ್ವಜವನ್ನು ನರೋಣಾ ಪಿಎಸ್‌ಐ ಎಂ.ಎಸ್. ದೊರೆ ಮತ್ತು ನೀಲಿ ಧ್ವಜ ಮರೆಪ್ಪ ಬಡಿಗೇರ ಅವರು ನೆರವೇರಿದರು. ಮಾದನಹಿಪ್ಪರಗಾ ಪಿಎಸ್‌ಐ ಡಿ.ಬಿ. ಕಟ್ಟಿಮನಿ, ಪತ್ರಕರ್ತ ಮಹಾದೇವ ವಡಗಾಂವ, ದಯಾನಂದ ಶೇರಿಕಾರ, ಮಹಾಲಿಂಗಪ್ಪ ಜಮಾದಾರ, ದಿನೇಶ ಕೊಟ್ಟನೂರ್, ಮಹೇಶ ಕೋಚ್ಚಿ, ಲಕ್ಷ್ಮಣ ಮೇಲಿನಕೇರಿ ಪಾಲ್ಗೊಂಡಿದ್ದರು.
ಅರುಣಕುಮಾರ ಸಂಗಾವಿ ಕಾರ್ಯಕ್ರಮ ನಿರೂಪಿಸಿದರು. ರಾಣಪ್ಪ ಮೇಲಕೇರಿ ಸ್ವಾಗತಿಸಿದರು. ಲಕ್ಷ್ಮಣ ಜಿ. ಮೇಲಕೇರಿ ವಂದಿಸಿದರು.ಬೀದಿಗಳಲ್ಲಿ ನಡೆದ ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆಯಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

