ಗುಲ್ಬರ್ಗಾ

ಕೃಷಿಕರ ಮನೆಗೆ ಭೇಟಿ ಕೊಡಿ, ಮಾಹಿತಿ ನೀಡಿ

Published On :

ಚಿತ್ತಾಪುರ: ಕೃಷಿ ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಅನುಗಾರರು ಪ್ರತಿಯೊಬ್ಬರ ರೈತರ ಮನೆಗಳಿಗೆ ಹೋಗಿ ಮಾಹಿತಿ ನೀಡಬೇಕು ಎಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಚಂದ್ರಶೇಖರರೆಡ್ಡಿ ಪರಸರೆಡ್ಡಿ ಹೇಳಿದರು.
  ಕೃಷಿ ಇಲಾಖೆಯಿಂದ ಕೃಷಿ ಮಾಹಿತಿ ಜಾಗೃತಿ ಆಂದೋಲನ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, ಕೃಷಿ ಇಲಾಖೆಯ ಭೂ ಚೇತನ ಯೋಜನೆ, ರೈತ ತರಬೇತಿ ಮತ್ತು ಪ್ರಾತ್ಯಕ್ಷಿತೆ, ಬೆಳೆ ಸಾಲಕ್ಕೆ ಸಹಾಯಧನ, ರಾಷ್ಟ್ರೀಯ ಕೃಷಿ ವಿಮಾ ಯೋಜನೆ, ಕೃಷಿ ಪ್ರಶಸ್ತಿ, ಕೃಷಿ ಪಂಡಿತ ಪ್ರಶಸ್ತಿ, ಸಾವಯವ ಕೃಷಿ, ಬೆಳೆ ಸಂರಕ್ಷಣೆ, ಲಘು ಪೋಷಾಕಾಂಶಗಳ ವಿತರಣೆ, ಸಾವಯವ ಭಾಗ್ಯ ಯೋಜನೆ, ಕೃಷಿ ಯಾಂತ್ರೀಕರಣ, ಕೃಷಿ ಸಂರಕ್ಷಣೆ, ರಾಷ್ಟ್ರೀಯ ಸೂಕ್ಷ್ಮ ನೀರಾವರಿ ಅಭಿಯಾನ, ವಿಶೇಷ ಘಟನ ಯೋಜನೆ, ರೈತರ ಆಕಸ್ಮಿಕ ಮರಣ, ಬಣಮೆಗಳ ನಷ್ಟ ಪರಿಹಾರ, ರೈತರ ಆತ್ಮಹತ್ಯೆ ಪರಿಹಾರ, ರೈತರ ಸಹಾಯವಾಣಿ ಮತ್ತು ಉತ್ತಮ ಬೀಜ ಹಾಗೂ ರಿಯಾಯಿತಿ ಸೌಲಭ್ಯಗಳ ಬಗ್ಗೆ ರೈತರಿಗೆ ಮಾಹಿತಿ ನೀಡಬೇಕೆಂದು ಹೇಳಿದರು.
6 ಕೇಂದ್ರಗಳಲ್ಲಿ ಅಭಿಯಾನ: ಜಿಲ್ಲಾ ಉಪ ಕೃಷಿ ನಿರ್ದೇಶಕರಾದ ಜುಲ್ಫಿಕರ್ ಅಹ್ಮದ್ ಮಾತನಾಡಿ, ರೈತರಲ್ಲಿ ಕೃಷಿ ಇಲಾಖೆಯ ಸೌಲಭ್ಯದ ಬಗ್ಗೆ ಮಾಹಿತಿ ನೀಡಲು ಮೇ 19ರಿಂದ 24ರ ವರಗೆ 6 ರೈತ ಕೃಷಿ ಕೇಂದ್ರಗಳಲ್ಲಿ ಜಾಗೃತಿ ಆಂದೋಲನ ನಡೆಯಲಿದೆ. ರೈತ ಸಂಪರ್ಕ ಕೇಂದ್ರಗಳ ವ್ಯಾಪ್ತಿಯ ಹಳ್ಳಿಗಳಲ್ಲಿ ಅನುವುಗಾರರು ಭೇಟಿ ನೀಡಿ ಕೃಷಿ ಇಲಾಖೆ ಬಗ್ಗೆ ಮಾಹಿತಿ ನೀಡುವರು ಎಂದು ತಿಳಿಸಿದರು.
  ತಾಂತ್ರಿಕ ಕೃಷಿ ಅಧಿಕಾರಿ ಕರಣಕುಮಾರ, ಅಬ್ದುಲ್ ಕರೀಂ, ಅಂಕಿ ಸಂಖ್ಯೆಗಳ ಅಧಿಕಾರಿಗಳಾದ ಗೌಸೊದ್ದೀನ್ ಪಟೇಲ್, ತಾಲೂಕಿನ ಎಲ್ಲ ರೈತ ಸಂಪರ್ಕ ಕೇಂದ್ರಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ಅನುಗಾರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.