ಗುಲ್ಬರ್ಗಾ

ಕಾಳಿಕಾದೇವಿಗೆ ಉಡಿ ತುಂಬುವಿಕೆ ಮಂಗಳ

Published On :

ಕನ್ನಡಪ್ರಭ ವಾರ್ತೆ  ಕೆಂಭಾವಿ  ಮೇ 23
ಪಟ್ಟಣದಲ್ಲಿ ಶುಕ್ರವಾರ ಕಾಳಿಕಾದೇವಿಗೆ ಉಡಿ ತುಂಬುವ ಕಾರ್ಯಕ್ರಮ ಅತಿ ವಿಜೃಂಭಣೆಯಿಂದ ನೆರವೇರಿತು.
  ದೇಶದಲ್ಲೆಡೆ ಶಾಂತಿ ನೆಲೆಸಲಿ, ಮಳೆಬೆಳೆ ಸಮೃದ್ಧಿಯಾಗಲಿ, ರೈತಾಪಿ ವರ್ಗ ಸಂತೋಷದಿಂದಿರಲಿ ಎಂಬ ಕೋರಿಕೆ, ನಂಬಿಕೆಯೊಂದಿಗೆ ಪ್ರತಿವರ್ಷ ಆಸ್ತಿಕ ಜನತೆ ಈ ಕಾರ್ಯಕ್ರಮವನ್ನು ಆಚರಿಸಿಕೊಂಡು ಬರುತ್ತಿದೆ.  ಗುರುವಾರ ರಾತ್ರಿಯಿಂದ ದೇವಸ್ಥಾನದಲ್ಲಿ ಭಜನೆ, ಪುರಾಣ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಶುಕ್ರವಾರ ಮುಂಜಾನೆ ಡೊಳ್ಳು, ಬಾಜಾಬಜಂತ್ರಿ ಸೇರಿದಂತೆ ಅನೇಕ ವಾದ್ಯವೈಭವದೊಂದಿಗೆ ಮುತ್ತೈದೆಯರು ಶೃಂಗಾರಗೊಂಡಿದ್ದ ದೇವಿಗೆ ಉಡಿ ತುಂಬಿದರು.
  ಇದಕ್ಕೂ ಮೊದಲು ಭಕ್ತರು ದೇವಿಯ ಮೂರ್ತಿಗೆ ಕಾಣಿಕೆಯಾಗಿ ನೀಡಿದ ಪಂಚಲೋಹದಿಂದ ನಿರ್ಮಿಸಿದ ಪ್ರಭಾವಳಿಯನ್ನು ಪಟ್ಟಣದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮೂಲಕ ತಂದು ದೇವಿಗೆ ಸಮರ್ಪಿಸಲಾಯಿತು. ಇದೇ ಸಂದರ್ಭದಲ್ಲಿ ನಡೆದ ಆಕರ್ಷಕ ಪುರವಂತರ ಮೆರವಣಿಗೆ ಎಲ್ಲರ ಗಮನ ಸೆಳೆಯಿತು. ಮಧ್ಯಾಹ್ನ ಎಲ್ಲ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು. ಅರ್ಚಕರಾದ ಮಲ್ಲಣ್ಣ ಪೂಜಾರಿ, ಬಾಲಕೃಷ್ಣರಾವ ಕುಲಕಣರ್, ಹಣಮಂತರಾವ, ಮಹಿಪಾಲರೆಡ್ಡಿ ಡಿಗ್ಗಾವಿ ಸೇರಿದಂತೆ ಅನೇಕರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.