ಅನೈತಿಕ ಸಂಬಂಧ ರಹಸ್ಯಕ್ಕೆ ಭಾವನ ಮಗನ ಕೊಂದಳು!
ಕ.ಪ್ರ. ವಾರ್ತೆ , ಗುಲ್ಬರ್ಗ , ಮೇ 29
ಪರ ಪುರುಷನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದನ್ನು ಭಾವನ ಮಗ ತಿಳಿದುಕೊಂಡನೆಂದು ಭಯಭೀತಳಾದ ಕಿರಾತಕಿ ಆತನನ್ನು ಪ್ರಿಯಕರನೊಟ್ಟಿಗೆ ಸೇರಿ ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿದ್ದ ಪ್ರಕರಣವನ್ನು ಗುಲ್ಬರ್ಗ ನಗರ ಪೊಲೀಸರು ಭೇದಿಸಿದ್ದು, ಆರೋಪಿಗಳಿಬ್ಬರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮೇ 26ರಂದು ವಿಶ್ವವಿದ್ಯಾಲಯ ಕ್ಯಾಂಪಸ್ಸಿನ ಕಾಮರ್ಸ್ ವಿಭಾಗಕ್ಕೆ ಹೋಗುವ ರಸ್ತೆಯಲ್ಲಿ ಈ ಭೀಕರ ಕೊಲೆ ಸಂಭವಿಸಿತ್ತು.
ವಿಜಯಕುಮಾರ ಕಾಳೆ ಹಾಗೂ ಲಕ್ಷ್ಮೀಬಾಯಿ ಕುಂಬಾರ ಇಬ್ಬರ ನಡುವೆ ನಾಲ್ಕು ವರ್ಷದಿಂದ ಅನೈತಿಕ ಸಂಬಂಧವಿತ್ತು. ಈ ಸಂಬಂಧದ ಬಗ್ಗೆ ಲಕ್ಷ್ಮೀಬಾಯಿ ಭಾವನ ಮಗ ಧೂಳಪ್ಪ ಕುಂಬಾರ ತಿಳಿದಿದ್ದ. ಆತ ಈ ಸಂಗತಿಯನ್ನು ಬೇರೆಯವರಿಗೆ ಹೇಳುತ್ತಾನೇನೋ ಎಂದು ಲಕ್ಷ್ಮೀಬಾಯಿ ಬೆದರಿದ್ದಳು.
ಕಲ್ಲಿನಿಂದ ಜಜ್ಜಿ ಕೊಲೆ: ಈ ವಿಚಾರವಾಗಿ ತನ್ನ ಪ್ರಿಯಕರ ವಿಜಯಕುಮಾರ ಕಾಳೆ ಜೊತೆಗೂಡಿ ಚರ್ಚಿಸಿದ್ದಳು. ಇಬ್ಬರು ಸೇರಿ ಧೂಳಪ್ಪನನ್ನು ಕೊಲೆ ಮಾಡುವ ಸಂಚು ರೂಪಿಸಿದ್ದರು. ಇಬ್ಬರು ಉಪಾಯ ಹೂಡಿ ಸೇಂದಿ ಕುಡಿಯೋಣ ಬಾ ಎಂದು ಧೂಳಪ್ಪನನ್ನು ಆಹ್ವಾನಿಸಿ ವಿವಿ ಕ್ಯಾಂಪಸ್ಸಿನಲ್ಲಿ ಕರೆದೊಯ್ದು, ಅಲ್ಲೇ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತಮ್ಮ ನಡುವಿದ್ದ ಅನೈತಿಕ ಸಂಬಂಧದ ಬಗ್ಗೆ ಭಾವನ ಮಗ ಧೂಳಪ್ಪ ಕುಂಬಾರ ಅರಿತಿದ್ದಾನೆ ಎಂದು ಭಯಭೀತರಾಗಿದ್ದ ಹಾಗೂ ತಮ್ಮ ಸಂಬಂಧದ ಬಗ್ಗೆ ರಹಸ್ಯ ಕಾಪಾಡುವ, ಮುಚ್ಚಿಹಾಕುವ ಉದ್ದೇಶದಿಂದ ವಿಜಯ ಕುಮಾರ ಕಾಳೆ ಹಾಗೂ ಆತನ ಪ್ರೇಯಸಿ ಲಕ್ಷ್ಮೀಬಾಯಿ ಕುಂಬಾರ ಇಬ್ಬರೂ ಸೇರಿ ಈ ಭೀಕರ ಕೊಲೆ ಮಾಡಿದ್ದಾರೆ ಎಂಬುದನ್ನು ಪೊಲೀಸರು ತನಿಖೆಯಲ್ಲಿ ನಡೆಸಿದ ವಿಚಾರಣೆಯಿಂದ ಸಾಬೀತಾಗಿದೆ.
ಶ್ಲಾಘನೆ: ಆರೋಪಿಗಳನ್ನು ಬಂಧಿಸಿರುವ ಪೊಲೀಸ್ ತಂಡದ ಕೆಲಸವನ್ನು ಜಿಲ್ಲಾ ಎಸ್ಪಿ ಅಮಿತ್ಸಿಂಗ್, ಹೆಚ್ಚುವರಿ ಎಸ್ಪಿ ಕಾಶೀನಾಥ ತಳಕೇರಿ, ಡಿವೈಎಸ್ಪಿ ಸಂತೋಷ ಬಾಬು ಶ್ಲಾಘಿಸಿದ್ದಾರೆ.
ಪೊಲೀಸ್ ಅಧಿಕಾರಿಗಳಾದ ಬಸವರಾಜ ತೇಲಿ, ಗಜಾನನ ನಾಯ್ಕ, ಹಸನ ಬಾಷಾ, ಸಿಬ್ಬಂದಿ ಶಂಕರ, ಮೋಯಿಜುದ್ದೀನ್, ಮಲ್ಲಿಕಾರ್ಜುನ, ಅಶೋಕ ಹಳಿಗೋಧಿ ಮಣ್ಣೂರ, ಚನ್ನಬಸವಯ್ಯ ಸ್ವಾಮಿ, ಬಲರಾಮ, ಸುಧಾ ಇವರಿದ್ದ ಪೊಲೀಸ್ ತಂಡ ಕೊಲೆ ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

