ದಾಂಪತ್ಯಕ್ಕೆ ಕಾಲಿಟ್ಟ ವಸತಿ ನಿಲಯದ ನಿವಾಸಿ ದಾನಮ್ಮ
ಗುಲ್ಬರ್ಗ: ನಗರದ ಆಳಂದ ರಸ್ತೆಯಲ್ಲಿರುವ ರಾಜ್ಯ ಮಹಿಳಾ ನಿಲಯದಲ್ಲಿ ರಾಜ್ಯ ಮಹಿಳಾ ನಿಲಯದ ನಿವಾಸಿ ದಾನಮ್ಮ(ಸಂಗೀತಾ) ಬೆಳಗಾವಿ ಜಿಲ್ಲೆ ಅಥಣಿಯ ಅನಂತರಾವ ವಾಳ್ವೆಕರ್ ಮತ್ತು ಮಂಗಳಾಬಾಯಿಯವರ ಸುಪುತ್ರ ಗುರುರಾಜ ಅವರೊಂದಿಗೆ ಶುಕ್ರವಾರ ದಾಂಪತ್ಯಕ್ಕೆ ಕಾಲಿಟ್ಟರು.
ಸಂಗೀತಾ ಮತ್ತು ಗುರುರಾಜ ಪರಸ್ಪರ ಹೂಮಾಲೆ ವಿನಿಮಯ ಮಾಡಿಕೊಳ್ಳುವುದರೊಂದಿಗೆ ವಿವಾಹ ಬಂಧನಕ್ಕೊಳಪಟ್ಟರು. ರಾಜ್ಯ ಮಹಿಳಾ ನಿಲಯದ ಅಧಿಕಾರಿಗಳು ಮತ್ತು ನಿಲಯದ ಸಿಬ್ಬಂದಿ, ವಾಳೆಕರ ಬಂಧು ಬಳಗ ಹಾಗೂ ಇತರ ಸಂಬಂಧಿಕರು ಹಾಜರಿದ್ದು, ನವ ದಂಪತಿಗಳನ್ನು ಶುಭ ಹಾರೈಸಿದರು.
ಜಿಲ್ಲೆಯ ಆಳಂದ ತಾಲೂಕಿನ ಯಳಸಂಗಿ ಗ್ರಾಮದ ಸಂಗೀತಾ 19 ವರ್ಷದವಳಿದ್ದು, ನಿಜಗುಣಪ್ಪ ಅವರ ಪುತ್ರಿ. 2009ರ ಜೂ.17ರಂದು ರಾಜ್ಯ ಮಹಿಳಾ ನಿಲಯದಲ್ಲಿ ದಾಖಲಾಗಿದ್ದಾಳೆ. ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿರುವ ಸಂಗೀತಾ ಅವರ ನಡತೆ ಉತ್ತಮವಾಗಿದೆ. ಎಲ್ಲ ನಿವಾಸಿಗಳೊಂದಿಗೆ ಚೆನ್ನಾಗಿ ಹೊಂದಿಕೊಂಡಿರುತ್ತಾಳೆ. ಸ್ವ-ಇಚ್ಛೆಯಿಂದ ಗುರುರಾಜ ಅವರನ್ನು ಮದುವೆಯಾಗುವುದಾಗಿ ಒಪ್ಪಿಕೊಂಡಿದ್ದರಿಂದ ಅವಳ ಮುಂದಿನ ಭವಿಷ್ಯ ಹಾಗೂ ಪುನರ್ವಸತಿಯ ಹಿತದೃಷ್ಟಿಯಿಂದ ಈ ಮದುವೆ ಮಾಡಲಾಗಿದೆ.
ಎಂಕಾಂ ಪದವೀಧರರಾಗಿರುವ 35 ವರ್ಷದ ಗುರುರಾಜ ಪ್ರಸ್ತುತ ಬಿಜಾಪುರ ಜಿಲ್ಲೆ ಸಿಂದಗಿ ತಾಲೂಕಿನ ಆಲ್‌ಮೇಲ್‌ನ ಕೆಪಿಆರ್ ಶುಗರ್‌ಮಿಲ್ ಕಾರ್ಖಾನೆಯಲ್ಲಿ ಲೆಕ್ಕಪತ್ರ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಈ ವೇಳೆ ರಾಜ್ಯ ಮಹಿಳಾ ನಿಲಯದ ಅಧೀಕ್ಷಕಿ ದ್ರೌಪದಿ, ಶರಣಮ್ಮ, ಬುದ್ಧಿಮಾಂದ್ಯ ಮಕ್ಕಳ ನಿಲಯದ ಅಧೀಕ್ಷಕಿ ರಾಧಾಬಾಯಿ, ಅಮೂಲ್ಯ ಶಿಶು ಗೃಹ ಹಾಗೂ ಬಾಲಕಿಯರ ಬಾಲಮಂದಿರದ ಅಧೀಕ್ಷಕಿ ಶಿಲ್ಪಾ ಹಿರೇಮಠ, ಜ್ಞಾನ ಗಾಯತ್ರಿ ಸೇವಾ ಸಂಸ್ಥೆಯ ಅಧ್ಯಕ್ಷೆ ನರ್ಮದಾ ರೆಡ್ಡಿ ಪಾಟೀಲ್ ಸೇರಿದಂತೆ ವಸತಿ ನಿಲಯದ ಸಿಬ್ಬಂದಿ ಹಾಗೂ ನಿವಾಸಿಗಳು ನವ ವಧು-ವರರಿಗೆ ಆಶೀರ್ವದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

