ಹಾಸನ

ಮಾಂಗಲ್ಯ ಕಳವು

Published On :

ಅರಸೀಕೆರೆ:  ಮಹಿಳೆಯೊಬ್ಬರ ಮಾಂಗಲ್ಯ ಸರವನ್ನು ಕಳವು ಮಾಡಿರುವ ಘಟನೆ ಪಟ್ಟಣದ ಬಸ್ನಿಲ್ದಾಣದಲ್ಲಿ ಇತ್ತೀಚೆಗೆ ನಡೆದಿದೆ. ಜಾವಗಲ್ ಹೋಬಳಿ, ಹಂದ್ರಾಳು ಗ್ರಾಮದ ವಾಸಿ ಶೋಭಾ ಎಂಬುವರು ಅರಸೀಕೆರೆ ಪಟ್ಟಣಕ್ಕೆ ಬಂದು ಬಟ್ಟೆ ಕೊಂಡು ವಾಪಸ್ ಊರಿಗೆ ಹೋಗಲು ಮದ್ಯಾಹ್ನ 2-15 ಗಂಟೆಯ ಸಮಯದಲ್ಲಿ ಅರಸೀಕೆರೆ ಬಸ್ ನಿಲ್ದಾಣದಲ್ಲಿ ಅರಸೀಕೆರೆ ನಾಗೇನಹಳ್ಳಿ ಮಾರ್ಗವಾಗಿ ಕಲ್ಯಾಡಿಗೆ ಹೋಗುವ ಬಸ್ಸಿಗೆ ಹತ್ತಿ ನಾಗೇನಹಳ್ಳಿಗೆ ಹೋಗಲು ಅರಸೀಕೆರೆಯಲ್ಲಿ ಬಸ್ ಹತ್ತುವ ಸಮಯದಲ್ಲಿ ಶೋಭಾ ಅವರಿಗೆ ತಿಳಿಯದಂತೆ ಕೊರಳಿನಲ್ಲಿದ್ದ ರು.95,000  ಮೌಲ್ಯದ   38 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಕಳವು ಮಾಡಿದ್ದಾರೆ. ಈ ಬಗ್ಗೆ ಶೋಭಾ ಪಟ್ಟಣ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.



ಅಕ್ರಮ ಮದ್ಯ ವಶ
ಬೇಲೂರು: ತಾಲೂಕಿನ ನರಸೀಪುರ ಗ್ರಾಮದಲ್ಲಿ ಮನಿಯಾಬೋವಿ ಎಂಬುವರು ಅಕ್ರಮವಾಗಿ ಮಧ್ಯಮಾರಾಟ ಮಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಅಕ್ರಮ ಮದ್ಯ ವಶಪಡಿಸಿಕೊಂಡಿರುವ ಘಟನೆ ಇತ್ತೀಚೆಗೆ ನಡೆದಿದೆ. ಹಳೇಬೀಡು ಠಾಣೆಯ ಪಿಎಸ್ಐ ಎಂ.ರವಿಕುಮಾರ್ ಅವರು ಖಚಿತ ಮಾಹಿತಿ ಮೇರೆಗೆ  ಸಿಬ್ಬಂದಿಯೊಂದಿಗೆ  ಸ್ಥಳಕ್ಕೆ ತೆರಳಿ ದಾಳಿ ನಡೆಸಿದಾಗ ಆರೋಪಿ ಮನಿಯಾ ಬೋವಿ  ಪರಾರಿಯಾಗಿದ್ದಾನೆ.ಸ್ಥಳದಲ್ಲಿ ಮಾರಾಟಕ್ಕೆ ಇಟ್ಟಿದ್ದ  ರು. 7974  ಬೆಲೆಯ 90 ಎಂಎಲ್ನ ಒರಿಜಿನಲ್ ಲ್ಚಾಯ್ಸ್ ಡೀಲಕ್ಸ್ 86 ಸ್ಯಾಚೇಟ್ಗಳನ್ನು ವಶಪಡಿಸಿಕೊಂಡಿರುವ  ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.