ಹಾಸನ

ಭೂ ಸೇನೆಯಲ್ಲಿ ನೇಮಕಾತಿ ರ್ಯಾಲಿ

Published On :

ಕನ್ನಡಪ್ರಭ ವಾರ್ತೆ೤ ಹಾಸನ೤ ಏ.6
ಚಿಕ್ಕಮಗಳೂರು ಜ್ಯೋತಿನಗರದ ಶತಮಾನೋತ್ಸವ ಕ್ರೀಡಾಂಗಣದಲ್ಲಿ ಏ. 16 ರಿಂದ 25 ರವರೆಗೆ ಭೂ ಸೇನೆಯಲ್ಲಿ ಟೆಕ್ನಿಕಲ್, ನರ್ಸಿಂಗ್, ಕ್ಲರ್ಕ್ ಸ್ಟೋರ್ ಕೀಪರ್, ಜಿ.ಡಿ. ಟ್ರೇಡ್ಮೆನ್ ಸಿಪಾಯಿಗಳ ನೇಮಕಾತಿ  ಮೇಳ ನಡೆಯಲಿದೆ.
  ಟೆಕ್ನಿಕಲ್ ನರ್ಸಿಂಗ್ಗೆ ವಿಜ್ಞಾನ ವಿಷಯದಲ್ಲಿ ಪಿಯುಸಿ, ಕ್ಲರ್ಕ ಸ್ಟೋರ್ಸ್ ಕೀಪರ್ಸ್ಗೆ ಯಾವುದೇ ವಿಷಯದಲ್ಲಿ ಪಿಯುಸಿಯಲ್ಲಿ ಕನಿಷ್ಠ ಶೇ. 50 ಅಂಕಗಳೊಂದಿಗೆ ಪಾಸಾಗಿರಬೇಕು. ಪ್ರತಿ ವಿಷಯದಲ್ಲಿ ಕನಿಷ್ಠ ಶೇ. 40 ಅಂಕ ಪಡೆದಿರಬೇಕು. 16-4-90 ರಿಂದ 16-10-95ರ ನಡುವೆ ಜನಿಸಿದವರಾಗಿರ ಬೇಕು.
 ಸಿಪಾಯಿ ಜಿಡಿಗೆ ಹತ್ತನೇ ತರಗತಿಯಲ್ಲಿ ಕನಿಷ್ಠ ಶೇ. 45 ಅಂಕಗಳೊಂದಿಗೆ ಪಾಸಾಗಿದ್ದು, ಪ್ರತಿ ವಿಷಯದಲ್ಲಿ   ಕನಿಷ್ಠ ಶೇ. 32 ಅಂಕ  ಪಡೆದಿರಬೇಕು. ದಿ. 16-4-1992 ರಿಂದ 15-10-1995ರ ನಡುವೆ ಜನಿಸಿರಬೇಕು. ಸಿಪಾಯಿ ಟ್ರೇಡ್ ಮೆನ್ಗೆ ಕನಿಷ್ಠ 10ನೇ ತರಗತಿ ಪಾಸಾಗಿರಬೇಕು.
  16-4-1990 ರಿಂದ 16-10-1995 ರ ನಡುವೆ ಜನಿಸಿರ ಬೇಕು. ದೇಹದಾರ್ಢ್ಯತೆ, ಸಿಪಾಯಿ ಜಿಡಿ ಎತ್ತರ 166 ಸೆಂ.ಮೀ. ಎದೆ ಸುತ್ತಳತೆ 77-82 ಸೆಂ.ಮೀ. ಟೆಕ್ನಿಕಲ್-165 ಸೆಂ.ಮೀ., 77-82 ಸೆಂ.ಮೀ., ಕ್ಲರ್ಕ್-162 ಸೆಂ.ಮೀ., 77-82 ಸೆಂ.ಮೀ.,  ಟ್ರೇಡ್ಮೆನ್ -166 ಸೆಂ.ಮೀ., 76-81 ಸೆಂ.ಮೀ. 1 6 ಕಿ.ಮೀ. ಓಟ 5 ನಿಮಿಷ 40 ಸೆಕೆಂಡುಗಳೊಳಗೆ, ಫುಲ್ ಆಪ್ಸ್ ಕನಿಷ್ಠ 6, ಬ್ಯಾಲೆನ್ಸ್ ಓಟ, 9 ಅಡಿ ಜಿಗಿತ ಇದೆ. ದೇಹದಾರ್ಢ್ಯತೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವೈದ್ಯಕೀಯ ಪರೀಕ್ಷೆಯಲ್ಲಿ ತೇರ್ಗಡೆ ಆದವರಿಗೆ ಮಂಗಳೂರಿನಲ್ಲಿ ಲಿಖಿತ ಪರೀಕ್ಷೆ ಇರುತ್ತದೆ.
 ಪಿಯುಸಿ ಪಾಸಾಗಿರುವ ಹಾಸನ ಜಿಲ್ಲೆಯ ಅಭ್ಯರ್ಥಿಗಳು ಏ. 16 ರಂದು ಹಾಗೂ ಎಸ್ಎಸ್ಎಲ್ಸಿ ಪಾಸಾ ಗಿರುವವರು ಏ. 20 ರಂದು ಮಧ್ಯಾಹ್ನ 3 ಗಂಟೆಗೆ ಹಾಜರಾಗಿ ಟೋಕನ್ ಪಡೆದು ಕೊಳ್ಳಬೇಕು. ಆಯ್ಕೆ ಪ್ರಕ್ರಿಯೆ ಮರುದಿನ ಇದೆ.
 ಹಾಸನ ಜಿಲ್ಲೆಯ ಅಭ್ಯರ್ಥಿಗಳು ರ್ಯಾಲಿಯಲ್ಲಿ  ಭಾಗವಹಿಸಲೆಂದೇ ಕೃಷಿಕ್ ಸರ್ವೋದಯ ಫೌಂಡೇಷನ್ನಿನ ಸದಾಶಯ. ರ್ಯಾಲಿಯಲ್ಲಿ ಭಾಗವಹಿಸಿ ಲಿಖಿತ ಪರೀಕ್ಷೆಗೆ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಹಾಸನದ ಕೆಎಸ್ಎಫ್ ಉಚಿತವಾಗಿ ತರಬೇತಿ ವ್ಯವಸ್ಥೆ ಮಾಡಿ ಎಲ್ಲರೂ ಲಿಖಿತ ಪರೀಕ್ಷೆ ಪಾಸು ಮಾಡುವಂತೆ ಸಿದ್ಧಪಡಿಸಲಿದೆ. ಈ ಸೌಲಭ್ಯ ಅಭ್ಯರ್ಥಿಗಳು ಸದುಪಯೋಗ ಮಾಡಿ ಕೊಳ್ಳಬೇಕೆಂದು ಮೋಹನ್ ತಿಳಿಸಿದ್ದಾರೆ.
 ಎಸ್ಸೆಸ್ಸೆಲ್ಸಿ, ಪಿಯುಸಿ  ಮೂಲ ಅಂಕಪಟ್ಟಿಗಳು, ವಾಸಸ್ಥಳ ದೃಢೀಕರಣ ಪತ್ರ, 15 ಪಾಸ್ಪೋರ್ಟ್ ಫೋಟೊಗಳು, ನಡತೆ ಪ್ರಮಾಣ ಪತ್ರಗಳೊಂದಿಗೆ ಹಾಜರಾಗುವಂತೆ ತಿಳಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.