ಅರ್ಹರಿಗೇ ಮತ ನೀಡಿ: ಸಾಣೇಹಳ್ಳಿ ಶ್ರೀ ಕಿವಿಮಾತು
ಕ.ಪ್ರ. ವಾರ್ತೆ ಅರಸೀಕೆರೆ ಏ.7
ಮತದಾನ ಮಾಡುವಾಗ ಅರ್ಹರು, ಉತ್ತಮರು, ಸಜ್ಜನಿಕೆ ಹೊಂದಿರುವ ಸುಸಂಸ್ಕೃತರು, ಸುಶಿಕ್ಷಿತರಿಗೆ ಮತ ನೀಡಬೇಕೆಂದು ಸಾಣೇಹಳ್ಳಿ ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಕಿವಿಮಾತು ಹೇಳಿದರು.
ಪಟ್ಟಣದ ಹೊಯ್ಸಳೇಶ್ವರ ಕಾಲೇಜು ಆವರಣದಲ್ಲಿ ಶಿವಕುಮಾರ ಬಳಗ ಹಾಗೂ ವೀರಶೈವ ಯುವ ವೇದಿಕೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿರುವ ಶಿವಸಂಚಾರ ನಾಟಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಭ್ರಷ್ಟರು, ನಯವಂಚಕರು, ಕಳ್ಳರು, ಸುಳ್ಳರು ಹಾಗೂ ಲೂಟಿಕೋರರಿಗೆ ಯಾವುದೋ ಆಮಿಷಕ್ಕೆ ಬಲಿಯಾಗಿ ಮತ ನೀಡಿದರೆ ಮುಂದೆ ನೀವು ಗುಲಾಮರಾಗಿ ಅವರು ದಿವಾನರಾಗಿ ಮೆರೆಯಲು ಅವಕಾಶ ಕಲ್ಪಿಸಿಕೊಟ್ಟಂತಾಗುತ್ತದೆ ಎಂದು ಹೇಳಿದರು. ಇತ್ತೀಚಿನ ದಿನಗಳಲ್ಲಿ ರಾಜಕಾರಣ, ಮೋಸ, ಸುಳ್ಳು, ವಂಚನೆ, ಗೋಮುಖ ವ್ಯಾಘ್ರದಂತೆ ವರ್ತಿಸುವವರಿಗೆ ಎನ್ನುವಂತಾಗಿದೆ.
ಇಂತಹ ಕಲುಷಿತ ವ್ಯವಸ್ಥೆಯ ನಡುವೆ ಮತದಾನ ಮಾಡುವವರು ಆಮಿಷಕ್ಕೆ ಒಳಗಾಗದೆ ಕಣದಲ್ಲಿರುವ ಅಭ್ಯರ್ಥಿಗಳಲ್ಲಿ ಯಾರು ಅರ್ಹರು ಅಂತಹವರನ್ನೇ ಪರಿಗಣಿಸಿ ಮತ ನೀಡಬೇಕೆಂದರು.
ಸೀರೆ, ಹಣ, ಹೆಂಡ ಹಂಚುವ ಪ್ರವೃತ್ತಿಗೆ ಕಡಿವಾಣ ಬೀಳಲೇಬೇಕಿದೆ. ಇದು ಮತದಾರ ಜಾಗೃತನಾದರೆ ಮಾತ್ರ ಸಾಧ್ಯ. ಮತವನ್ನು ಯೋಗ್ಯರಿಗೆ ನೀಡಬೇಕೆಂಬುದೇ ನಮ್ಮ ಸಲಹೆ. ಜಾತಿ ಹೆಸರಲ್ಲಿ ಇನ್ನಿತರೆ ವಿಷಯಗಳಲ್ಲಿ ಕೆಲ ನಯವಂಚಕರು ಲಾಭ ಪಡೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಮತದಾನವೆಂಬುದು ಪವಿತ್ರ ಕಾರ್ಯವೆಂದು ತಿಳಿದು ಪ್ರತಿಯೊಬ್ಬರೂ ಮತಗಟ್ಟೆಗೆ ತೆರಳಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

