ಹಾಸನ

ಎಚ್ ಡಿಕೆ ನೇತೃತ್ವದ ಸರ್ಕಾರ: ದೇವೇಗೌಡ ಭವಿಷ್ಯ

Published On :

ಕ.ಪ್ರ. ವಾರ್ತೆ   ಹೊಳೆನರಸೀಪುರ   ಏ 20
ರಾಜ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಪ್ರಧಾನಿ ದೇವೇಗೌಡ ಭವಿಷ್ಯ ನುಡಿದರು.
ತಾಲೂಕಿನ ದೊಡ್ಡಕಾಡನೂರು ಗ್ರಾಮದಲ್ಲಿ ಶನಿವಾರ ನಡೆದ ಹೋಬಳಿ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ತಾವು ಕಾವೇರಿ ವಿಚಾರದಲ್ಲಿ ಕೇಂದ್ರ ಸರಕಾರಕ್ಕೆ ಮೊರೆ ಹೋಗಿ, ನಮ್ಮ ರೈತರ ಭೂಮಿಗೆ ನೀರು ಇಲ್ಲದೆ ಹೋದರೂ ಪರವಾಗಿಲ್ಲ ನಮ್ಮಲ್ಲಿನ ಜನ ಜಾನುವಾರುಗಳಿಗೆ ಬೇಕಾಗುವಷ್ಟು ನೀರು ನಮಗೆ ಬೇಕೆಬೇಕೆಂದು ಪ್ರಧಾನಿ ಅವರಲ್ಲಿ ಭಿಕ್ಷೆ ಬೇಡುತ್ತಿದ್ದರೂ ರಾಷ್ಟ್ರೀಯ ಪಕ್ಷಗಳ ನಾಯಕರೆನಿಸಿ ಕೊಂಡವರು ರಾಜ್ಯ ರೈತರ ಹಿತಾಸಕ್ತಿಗೆ ಬೆನ್ನಲುಬಾಗಿ ನಿಲ್ಲದೆ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಸಲುವಾಗಿ ತಮ್ಮನ್ನ ಏಕಾಂಗಿಯಾಗಿ ನಿಲ್ಲಿಸಿದರೆಂದು ಬೇಸರ ವ್ಯಕ್ತಪಡಿಸಿದರು.
ಅರಕಲಗೂಡು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಜ್ಜನ ವ್ಯಕ್ತಿ ಎ.ಟಿ.ರಾಮಸ್ವಾಮಿ ಅವರನ್ನು ಅತ್ಯಧಿಕ ಮತಗಳ ಅಂತರದಲ್ಲಿ ಜಯಶಾಲಿಯನ್ನಾಗಿ ಮಾಡಬೇಕೆಂದು ಮನವಿ ಮಾಡಿದರು. ಅಭ್ಯರ್ಥಿ ಎ.ಟಿ.ರಾಮಸ್ವಾಮಿ, ತಮ್ಮನ್ನು ಈ ಚುನಾವಣೆಯಲ್ಲಿ ಮತ ನೀಡುವ ಮೂಲಕ ಜಯಶೀಲರನ್ನಾಗಿಸುವಲ್ಲಿ ಸಹಕರಿಸಬೇಕೆಂದು ಮನವಿ ಮಾಡಿದರು. ಮಾಜಿ ಪ್ರಧಾನಿ ದೇವೇಗೌಡರ ಆಪ್ತರಾದ ಮಾರಗೋಡನಹಳ್ಳಿ ಬಸವರಾಜು ಮಾತನಾಡಿದರು. ತಾಪಂ ಅಧ್ಯಕ್ಷೆ ಚಂದ್ರಮತಿ, ಜಿಪಂ ಸದಸ್ಯ ಎಚ್.ಎನ್.ದೇವೇಗೌಡ, ಅರಕಲಗೂಡು ಜೆಡಿಎಸ್ ಅಧ್ಯಕ್ಷ ರಂಗಸ್ವಾಮಿ, ಮುಖಂಡರು, ಕಾರ್ಯಕರ್ತರು ಇದ್ದರು.
ಲವಲವಿಕೆ ಕಾಣದ ಗೌಡರು:  ಮಾಜಿ ಪ್ರಧಾನಿ ದೇವೇಗೌಡರು ಸಭೆಗೆ ಆಗಮಿಸುವಾಗ ಗೌಡರು ಸುಸ್ತಾಗಿದ್ದರಿಂದ ಅವರಲ್ಲಿ ಲವಲವಿಕೆ ಇರಲಿಲ್ಲ. ಆದರೂ ವೇದಿಕೆಯಲ್ಲಿ ಕಣ್ಣುಮುಚ್ಚಿಕೊಂಡು ಕುಳಿತು ಎ.ಟಿ.ರಾಮಸ್ವಾಮಿ ಅವರ ಮಾತುಗಳನ್ನು ಆಲಿಸುತ್ತಿದ್ದರು. ರಾಮಸ್ವಾಮಿ ಭಾಷಣ ಮುಗಿಯುತ್ತಿದ್ದಂತೆ ಮೇಲೆದ್ದ ಗೌಡರು ಭಾಷಣ ಆರಂಭಿಸಿದರಾದರೂ   ಗೌಡರು ಸ್ಪಲ್ಪ ಸುಸ್ತಾದಂತೆ ಕಾಣುತ್ತಿದ್ದರು. ಕಾರ್ಯಕರ್ತರು ತಮ್ಮ ನಾಯಕನ ಮಾತುಗಳನ್ನು ಆಲಿಸಿ ಚಪ್ಪಾಳೆ ತಟ್ಟುತ್ತಾ ಸಂತಸ ಪಡುತ್ತಿದ್ದರು.
ಬೈಕ್ ರ್ಯಾಲಿ:  ಸಭೆಗೆ ಮೊದಲು ಕಾರ್ಯಕರ್ತರು ಹೊಳೆನರಸೀಪುರದಿಂದ ಬೈಕ್  ರ್ಯಾಲಿಯನ್ನು ನಡೆಸಿ ದೊಡ್ಡಕಾಡನೂರು ಗ್ರಾಮದ ವೇದಿಕೆ ಆಗಮಿಸಿದರು. ದಾರಿಯುದ್ದಕ್ಕೂ ಗೌಡರಿಗಾಗಿ  ಜನತೆ ಕಾದು ನಿಂತಿದ್ದರು. ಎಚ್.ಎಸ್.ಪುಟ್ಟಸೊಮಪ್ಪ ಸ್ವಾಗತಿಸಿದರು. ತಾಲೂಕು ಜೆಡಿಎಸ್ ಅಧ್ಯಕ್ಷ ಪಿ.ಎನ್.ಮಲ್ಲೇಶ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.