ಹಾಸನ

ಸುದ್ದಿ ಸಂಕ್ಷೇಪ

Published On :

ಸಿಹಿ ತಿಂಡಿಗಳ ತಯಾರಿಕೆ ಪ್ರಾತ್ಯಕ್ಷಿಕೆ
ಹಾಸನ: ದಿನನಿತ್ಯದ ಬದುಕಿನಲ್ಲಿ ಬಳಸುವ ಸಿಹಿ ತಿಂಡಿಗಳನ್ನು ಮನೆಗಳಲ್ಲಿ ಹೇಗೆ ತಯಾರು ಮಾಡ ಬಹುದು ಎಂಬುದನ್ನು ಪಾರ್ವತಿ ಚಂದ್ರಶೇಖರ್ ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಟ್ಟರು. ನಗರದ ಶಾಂತಿನಗರ ಬಡಾವಣೆಯ ಸ್ಫೂರ್ತಿ ಮಹಿಳಾ ಕಲಾ ಸಮಾಜ ಹಾಗೂ ಮುಕ್ತ ಮಹಿಳಾ ಕಲಾ ಯುವತಿ ಮಂಡಳಿ ಆಶ್ರಯದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂಘದ ಸದಸ್ಯರು ಮನೆಯಲ್ಲಿಯೇ ಕುಳಿತು ಸಮಯ ವ್ಯರ್ಥಮಾಡದೆ ಇಂತಹ ಶಿಬಿರಗಳಲ್ಲಿ ಭಾಗವಹಿಸುವುದರಿಂದ ಹೊಸ ಹೊಸ ತಿಂಡಿಗಳ ಪರಿಚಯವಾಗುತ್ತದೆ ಎಂದು ಹೇಳಿದರು.  ನಮಗೆ ಬೇಕಾದ ತಿಂಡಿ ತಿನಿಸುಗಳನ್ನು ಮನೆಯಲ್ಲಿಯೇ ತಯಾರು ಮಾಡುವುದರಿಂದ ಹಣ ಉಳಿತಾಯ ಜೊತೆಗೆ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕಲಾವಿದೆ ಮಂಗಳಾ ವೆಂಕಟೇಶ್, ಸ್ಕೌಟ್ಸ್ ಗೈಡ್ಸ್‌ನ ಜಿಲ್ಲಾ ತರಬೇತಿ ಆಯುಕ್ತೆ ಕಾಂಚನಮಾಲ, ಮಹಿಳಾ ಸಮಾಜದ ಪದ್ಮಮಂಜುನಾಥ್, ವೇದಶ್ರೀ ರಾಜು, ಆರ್.ಜಿ. ಗಿರೀಶ್  ಭಾಗವಹಿಸಿದ್ದರು
ಜೈವಿಕ ಡೀಸೆಲ್ ದಿನಾಚರಣೆ
ಹಾಸನ: ತಾಲೂಕಿನ ಮಡೇನೂರಿನಲ್ಲಿರುವ ಜೈವಿಕ ಇಂಧನ ಉದ್ಯಾನದಲ್ಲಿ ಜೈವಿಕ ಡೀಸೆಲ್ ದಿನಾಚರಣೆ ನಡೆಯಿತು. ಅಂತಾರಾಷ್ಟ್ರೀಯ ಕೃಷಿ ಅರಣ್ಯ ಕಾರ್ಯಕಾರಿ ಸಮಿತಿ ಅಧ್ಯಕ್ಷರು, ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜೈವಿಕ ಇಂಧನ ಉದ್ಯಾನದ ಪ್ರಗತಿಯನ್ನು ಪರಿಶೀಲಿಸಿ ಯೋಜನಾ ಸಂಯೋಜಕ ಡಾ. ಬಾಲಕೃಷ್ಣಗೌಡರ ಕೆಲಸವನ್ನು ಶ್ಲಾಘಿಸಿದರು. ಉಪ ಪ್ರಧಾನ ನಿರ್ದೇಶಕ ರವಿವಿಪ್ರಭು ಕೃಷಿ ವಿವಿಗೆ ಒಡಂಬಡಿಕೆಗೆ ಪ್ರಸ್ತಾವನೆ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.