ನ್ಯಾಯಬೆಲೆ ಅಂಗಡಿಯವರಿಗೆ ಸೂಚನೆ
ಕ.ಪ್ರ.ವಾರ್ತೆ , ಹಾಸನ , ಆ.18
ಆಗಸ್ಟ್ನಿಂದ ಸರ್ಕಾರ ಅನ್ನಭಾಗ್ಯ ಯೋಜನೆಯಡಿಯಲ್ಲಿ ಪ್ರತಿ ಬಿಪಿಎಲ್ ಕಾರ್ಡ್ದಾರರಿಗೆ ಒಬ್ಬರಿಗೆ 10 ಕೆಜಿ ಇಬ್ಬರಿಗೆ 20 ಕೆಜಿ ಹಾಗೂ 3ಕ್ಕಿಂತ ಮೇಲ್ಪಟ್ಟ ಜನರಿರುವ ಕುಟುಂಬಕ್ಕೆ 30 ಕೆಜಿ ಅಕ್ಕಿಯನ್ನು ಪ್ರತಿ ಕೆ.ಜಿ.ಗೆ ಒಂದು ರು.ನಂತೆ ಹಾಗೂ ಅಂತ್ಯೋದಯ ಅನ್ನ ಯೋಜನೆಯ ಪ್ರತಿ ಕಾರ್ಡ್ಗೆ ತಲಾ 29 ಕೆಜಿ ಅಕ್ಕಿ ಪ್ರತಿ ಕೆಜಿಗೆ ಒಂದು ರು.ನಂತೆ 6 ಕೆಜಿ ಗೋಧಿಯನ್ನು ಪ್ರತಿ ಕೆಜಿಗೆ ಎರಡು ರು.ನಂತೆ ವಿತರಿಸಲು ಆದೇಶಿಸಲಾಗಿದೆ.
ಪ್ರತಿ ಬಿಪಿಎಲ್ ಹಾಗೂ ಅಂತ್ಯೋದಯ ಅನ್ನ ಕಾರ್ಡ್ಗೆ 1 ಕೆಜಿ ಸಕ್ಕರೆ ಪ್ರತಿ ಕೆಜಿಗೆ ರು.13.50 ರಂತೆ ಹಾಗೂ ಜಿಲ್ಲೆಯ ಹೊಳೆನರಸೀಪುರ, ಅರಕಲಗೂಡು, ಚನ್ನರಾಯಪಟ್ಟಣ, ಸಕಲೇಶಪುರ, ಬೇಲೂರು, ಆಲೂರು ಪಟ್ಟಣ ಪ್ರದೇಶಗಳು ಹಾಗೂ ಜಿಲ್ಲೆಯ ಎಲ್ಲಾ ಗ್ರಾಮಾಂತರ ಪ್ರದೇಶದ ಬಿಪಿಎಲ್, ಎಎವೈ ಮತ್ತು ಎಪಿಎಲ್ ಅನಿಲ ರಹಿತ ಕಾರ್ಡ್ದಾರರಿಗೆ 5 ಲೀಟರ್ನಂತೆ ಹಾಗೂ ಹಾಸನ ನಗರ ಅ.ಪ. ಪ್ರದೇಶದ ಎಎವೈ ಮತ್ತು ಬಿಪಿಎಲ್ ಅನಿಲ ರಹಿತ ಕಾರ್ಡ್ದಾರರಿಗೆ 5 ಲೀಟರ್ನಂತೆ, ಹಾಸನ ನಗರದ ಎಪಿಎಲ್ ಪಡಿತರ ಚೀಟಿದಾರರಿಗೆ ಮಾತ್ರ 3 ಲೀಟರ್ನಂತೆ ಸೀಮೆಎಣ್ಣೆಯನ್ನು ಪ್ರತಿ ಲೀಟರ್ಗೆ ರು.16.20 ರಂತೆ ವಿತರಿಸಲು ಸೂಚಿಸಲಾಗಿದೆ.
ಜಿಲ್ಲೆಯ ನ್ಯಾಯಬೆಲೆ ಅಂಗಡಿಯವರು ಆಹಾರ ಧಾನ್ಯ ಮತ್ತು ಸೀಮೆಎಣ್ಣೆಯನ್ನು ಸರ್ಕಾರ ನಿಗದಿಪಡಿಸಿದ ಪ್ರಮಾಣ ಮತ್ತು ಬೆಲೆಯಲ್ಲಿ ವಿತರಿಸಬೇಕು. ನ್ಯಾಯಬೆಲೆ ಅಂಗಡಿಗಳಿಗೆ ನಿಗದಿಪಡಿಸಿದ ದಿನಾಂಕದಲ್ಲಿ ಎತ್ತುವಳಿ ಮಾಡಿ ತಿಂಗಳ ಪೂರ್ತಿ ವಿತರಿಸಬೇಕು. ಪ್ರತಿ ನ್ಯಾಯಬೆಲೆ ಅಂಗಡಿಗೆ ಹಂಚಿಕೆ ನೀಡಿರುವ ಪಡಿತರ ದಾಸ್ತಾನು ಮತ್ತು ಪ್ರತಿ ಕಾರ್ಡ್ದಾರರಿಗೆ ವಿತರಿಸುವ ಪ್ರಮಾಣವನ್ನು ನೋಟಿಸ್ ಬೋರ್ಡ್ನಲ್ಲಿ ಪ್ರಕಟಿಸಬೇಕು ಹಾಗೂ ಕಾರ್ಡ್ದಾರರಿಗೆ ಬಿಲ್ಲು ನೀಡಬೇಕು ಎಂದು ತಿಳಿಸಲಾಗಿದೆ.
ಕೇಂದ್ರ ಕಚೇರಿಯ ಕಂಟ್ರೋಲ್ ರೂಂ ನಂಬರ್ 1800-425-9339 ನ್ಯಾಯಬೆಲೆ ಅಂಗಡಿ ಮುಂದೆ ಪ್ರಕಟಿಸಬೇಕು. ಯಾವುದೇ ನ್ಯಾಯಬೆಲೆ ಅಂಗಡಿಯವರು ಇದಕ್ಕೆ ವಿರುದ್ಧವಾಗಿ ನಡೆದುಕೊಂಡಲ್ಲಿ ಗ್ರಾಮ ಪಂಚಾಯಿತಿ, ಪುರಸಭೆ, ಗ್ರಾಮ ಪಂಚಾಯತ್ ಕಾರ್ಯದರ್ಶಿ, ಜಾಗೃತ ಸಮಿತಿ ಸದಸ್ಯರು ನ್ಯಾಯಬೆಲೆ ಅಂಗಡಿ ವಿರುದ್ಧ ಕ್ರಮ ಜರುಗಿಸಲು ವರದಿ ಮಾಡಲು ತಿಳಿಸಿದೆ.
ಅಂತಹ ನ್ಯಾಯಬೆಲೆ ಅಂಗಡಿಗಳ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ 1955 ರ ಅಡಿಯಲ್ಲಿ ಕ್ರಮ ಜರುಗಿಸಲಾಗುವುದೆಂದು ಎಚ್ಚರಿಕೆ ನೀಡಿದೆ. ತಿಂಗಳ ಪಡಿತರ ವಸ್ತುಗಳು ಯಾವುದೇ ಕಾರ್ಡ್ದಾರರಿಗೆ ದೊರಕದಿದ್ದರೆ ಅಂತಹವರು ದೂರು ಸಲ್ಲಿಸಲು ಕೋರಿದೆ.
ಸಾರ್ವಜನಿಕರಿಗೆ ಯಾವುದೇ ರೀತಿಯ ಅನಾನುಕೂಲಗಳಾದಲ್ಲಿ ಸಂಬಂಧಿಸಿದ ಗ್ರಾಮ ಪಂಚಾಯ್ತಿ, ಪುರಸಭೆ ಮತ್ತು ತಹಸೀಲ್ದಾರ್ ಅಥವಾ ತಾಲೂಕು ಪಂಚಾಯ್ತಿ ಕಾರ್ಯ ನಿರ್ವಾಹಣಾಧಿಕಾರಿಗಳಿಗೆ ದೂರು ನೀಡಬೇಕೆಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ ಡಾ. ಕಾ.ರಾಮೇಶ್ವರಪ್ಪ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

