ಹಾಸನ

ಒಳ್ಳೆಯ ಚಿಂತನೆಯಿಂದ ಜೀವನ ಸಾರ್ಥಕ: ಸುಧಾಕರ ಶರ್ಮ

Published On :

ಕನ್ನಡಪ್ರಭ ವಾರ್ತೆ ಹಾಸನ ಆ. 26
 ಮಾನವನಲ್ಲಿ ಒಳ್ಳೆಯ ಚಿಂತನೆ, ಮಾತಿನ ಶುದ್ಧಿಕರಣ ಬಂದರೆ ಆತನ ಜೀವನ ಸಾರ್ಥಕವಾಗುತ್ತದೆ. ಕೆಟ್ಟ ಮಾತುಗಳಿಂದ ಯಾರಿಗೂ ಹಿತವಲ್ಲ ಎಂದು ಬೆಂಗಳೂರಿನ ವೇದಾಧ್ಯಾಯೀ ಸುಧಾಕರಶರ್ಮಾ ತಿಳಿಸಿದರು.
 ನಗರದ ಶಂಕರ ಮಠದ ಆವರಣದಲ್ಲಿ ವೇದಭಾರತಿ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ವೇದೋಕ್ತಜೀವನ ಶಿಬಿರದಲ್ಲಿ ನಡೆದ ಉಪನಯನ ಕುರಿತು ಮಾತನಾಡಿದರು.
 ಜೀವನ ಎಂದರೆ ಹೇಗೆ ಇತರೆ ಜೀವಿಗಳೊಂದಿಗೆ ಹೇಗೆ ಸಹಬಾಳ್ವೆ ನಡೆಯಬೇಕು ಎಲ್ಲಾ ತಿಳಿಸಲಾಗುತ್ತದೆ. ಮನುಷ್ಯ ಸಂತೋಷವಾಗಿ ಜೀವನ ನಡೆಸಬೇಕಾದರೆ ಮೊದಲು ಅದರ ಅರ್ಥ ತಿಳಿಯುವುದು ಮುಖ್ಯ ಎಂದು ಕಿವಿಮಾತು ಹೇಳಿದರು.  ಇದೆ ವೇಳೆ ಮಹಿಳೆಯರು ಹಾಕಿಕೊಂಡ ಮೂರು ಎಳೆಯ ದಾರದ ಬಗ್ಗೆ ವಿವರಿಸಿದರು. ಮೊದಲನೆ ದಾರದ ಎಳೆಯಾಗಿ ಋಣ, ಸೂರ್ಯ ಚಂದ್ರ, ಪ್ರಕೃತಿ ಎಲ್ಲಾ ನೀಡಿರುವ ದೇವರ ಋಣವಾಗಿ ನಾವು ಋಣಿಗಳಾಗಿದ್ದೇವೆ.  ತೀರಿಸುವ ಬಗ್ಗೆ ಭಗವಂತ ಕೊಟ್ಟಿರುವ ಕೊಡುಗೆಯನ್ನು ರಕ್ಷಿಸಿ ಮುಂದಿನ ಪೀಳಿಗೆಗೂ ಉಳಿಸಬೇಕು.
  ಎರಡನೇ ದಾರದ ಎಳೆ ಪಿತೃಋಣವಾಗಿದೆ. ಜನ್ಮ ನೀಡಿದ ತಂದೆ ತಾಯಿ ಇವರನ್ನು ಯಾವ ವೃದ್ಧಾಶ್ರಮಕ್ಕೂ ಕಳುಹಿಸದೆ ಮನೆಯಲ್ಲಿಯೆ ಮಕ್ಕಳು ಇಟ್ಟುಕೊಂಡು ನೋಡಿಕೊಳ್ಳಬೇಕು ಇದೆ ಇವರ ಮೇಲೆ ಇರುವ ಋಣ ಎಂದರು.
 ಮೂರನೆಯ ದಾರದ ಅರ್ಥ ಚಾರ್ಯ ಋಣ. ಹುಟ್ಟಿದಾಗ ನಮಗೆ ಏನು ತಿಳಿದಿರುವುದಿಲ್ಲ. ನಂತರದ ದಿನಗಳಲ್ಲಿ ಗುರುಗಳು ನೀಡಿದ ಋಣವು ಬರುತ್ತದೆ ಎಂದ ಅವರು, ಹೇಗೆ ಇದನ್ನು ತೀರಿಸಬೇಕು ಎಂಬುದನ್ನು ವೇದಗಳಲ್ಲಿ ಉತ್ತಮ ಮಾರ್ಗದರ್ಶನ ನೀಡುತ್ತದೆ. ಮನುಷ್ಯ ಗುರುದಕ್ಷಣೆಯನ್ನು ಆಚಾರ್ಯರಿಗೆ ನೀಡದೆ ಕಲಿತುದನ್ನು ಇತರರಿಗೆ ಹಂಚುವ ಮೂಲಕ ತೀರಿಸಿದರೆ ಅದೆ ಆಚಾರ್ಯರಿಗೆ ನೀಡುವ ಋಣ ಎಂದು ತಿಳಿಸಿದರು.
 ವಿಶ್ವನಾಥ ಶರ್ಮ, ಆಕಾಶವಾಣಿಯ ಶ್ರೀನಿವಾಸ್, ಕಾರ್ಯಕ್ರಮದ ಸಂಯೋಜಕರು ವೇದಭಾರತೀ ಹರಿಹರಪುರ ಶ್ರೀಧರ್ ಇತರರು ಪಾಲ್ಗೊಂಡಿದ್ದರು.

ಸಿಲ್ಕ್ ಇಂಡಿಯಾ ರೇಷ್ಮೆ ಸೀರೆ ಪ್ರದರ್ಶನ
ಕ.ಪ್ರ.ವಾರ್ತೆ ಮೈಸೂರು ಆ. 27

ಅಭಿವೃದ್ಧಿ ಸಂಸ್ಥೆಯು ಸಿಲ್ಕ್ ಇಂಡಿಯಾ- 2013 ಪರಿಶುದ್ಧ ರೇಷ್ಮೆ ಸೀರೆಗಳ ಬೃಹತ್ ಪ್ರದರ್ಶನವನ್ನು ಆ. 29 ರಿಂದ ಸೆ. 3 ರವರೆಗೆ ನಗರದ ಹೋಟೆಲ್ ರಿಗಾಲಿಸ್‌ನಲ್ಲಿ ಆಯೋಜಿಸಿದೆ.
ಆ. 29ರ ಸಂಜೆ 4.30ಕ್ಕೆ ಶಾಸಕ ಎಂ.ಕೆ. ಸೋಮಶೇಖರ್ ಉದ್ಘಾಟಿಸಲಿದ್ದು, ಕರ್ನಾಟಕ ಪೊಲೀಸ್ ಅಕಾಡೆಮಿ ಉಪನಿರ್ದೇಶಕಿ ಡಾ. ಧರಣಿದೇವಿ ಮಾಲಗತ್ತಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಗೌರಿ- ಗಣೇಶ ಹಬ್ಬದ ಪ್ರಯುಕ್ತ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿದೆ.
ಈ ಪ್ರದರ್ಶನದಲ್ಲಿ ಕಾಶ್ಮೀರದಿಂದ ಕಾಂಚಿಪುರಂನವರೆಗಿನ ರೇಷ್ಮೆ ಸೀರೆ ಉತ್ಪಾದಕರು, ವಿನ್ಯಾಸಗಾರರು, ರೇಷ್ಮೆ ಸಹಕಾರ ಸಂಘಗಳು ಸೇರಿದಂತೆ 40ಕ್ಕೂ ಹೆಚ್ಚಿನ ಮಳಿಗೆಗಳು ಪಾಲ್ಗೊಳ್ಳುತ್ತಿವೆ ಎಂದು ಸಿಲ್ಕ್ ಇಂಡಿಯಾ ಸಂಯೋಜಕ ಟಿ. ಅಭಿನಂದ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.