ಉನ್ನತ ಶಿಕ್ಷಣದಿಂದ ಉತ್ತಮ ಭವಿಷ್ಯ: ನಿರ್ಮಲಾನಂದಶ್ರೀ
ಅರಸೀಕೆರೆ: ಮಕ್ಕಳು ವಿದ್ಯೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ಸಂಸ್ಕಾರವಂತ ಉನ್ನತಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ ಸಂಸ್ಥೆಗೆ ಒಳ್ಳೆಯ ಹೆಸರನ್ನು ತಂದುಕೊಡಬೇಕೆಂದು ಆದಿಚುಂಚನಗಿರಿ ಮಠಾಧೀಶರಾದ ನಿರ್ಮಲಾನಂದ ಸ್ವಾಮೀಜಿ ತಿಳಿಸಿದರು.
ಶ್ರೀಕ್ಷೇತ್ರದಿಂದ ಬುಧವಾರ ಶಿವಮೊಗ್ಗಕ್ಕೆ ತೆರಳುವ ಮಾರ್ಗಮಧ್ಯೆ ಪಟ್ಟಣದ ಆದಿಚುಂಚನಗಿರಿ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದ ಅವರು, ವಿದ್ಯಾರ್ಥಿ ಜೀವನ ಚಿನ್ನದ ಜೀವನ ಅದನ್ನು ನಿಜ ಮಾಡಬೇಕಾಗಿದೆ. ಬೇರೆ ಎಲ್ಲಾ ಚಟುವಟಿಕೆಗಳನ್ನು ದೂರವಿಟ್ಟು ಶ್ರದ್ಧೆಯಿಂದ ಶಿಕ್ಷಣದಲ್ಲಿ ಹೆಚ್ಚಿನ ಶ್ರಮ ವಹಿಸಿ ಉತ್ತಮ ಅಂಕಗಳಿಸಿದರೆ ಒಳ್ಳೆಯ ಜೀವನ ರೂಪಿಸಿಕೊಳ್ಳಲು ಸಾಧ್ಯ ಎಂದರು.
ಇದು ಸ್ಪರ್ಧಾಯುಗ ಕೇವಲ ಓದಿ ತರಗತಿ ತೇರ್ಗಡೆ ಹೊಂದಿದರೆ ಸಾಲದು ಓದಿನಲ್ಲಿ ಪ್ರತಿಭೆ ತೋರುವುದರ ಅಗತ್ಯ ಇಂದಿನ ಆಧುನಿಕ ಜೀವನದಲ್ಲಿ ಅಗತ್ಯವಿದೆ. ನಿಮ್ಮ ಭವಿಷ್ಯ ಉಜ್ವಲವಾಗಿ ರೂಪಿಸಿಕೊಳ್ಳಲು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಹೇಳಿದರು. ಹಿರಿಯ ಗುರುಗಳಿಗೆ ಅರಸೀಕೆರೆ ಎಂದರೆ ಬಹಳ ಅಭಿಮಾನವಿತ್ತು. ಇದರಿಂದಾಗಿಯೇ ಇಲ್ಲಿ ಶಿಕ್ಷಣ ಸಂಸ್ಥೆ ಪ್ರಾರಂಭಿಸಲು ಕಾರಣ ಎಂದ ಶ್ರೀಗಳು ವಿದ್ಯಾರ್ಥಿಗಳು ಸೌಲಭ್ಯಗಳನ್ನು ಉಪಯೋಗಿಸಿಕೊಂಡು ತಮ್ಮ ಜೀವನ ಭವಿಷ್ಯದ ಗುರಿಯನ್ನು ಸಾಧಿಸಬೇಕೆಂದರು. ಶಂಭುನಾಥ ಸ್ವಾಮೀಜಿ. ಶಿವಪುತ್ರ ಸ್ವಾಮೀಜಿ, ಪುರಸಭಾ ಸದಸ್ಯರು ಮತ್ತಿತರರು ಇದ್ದರು.
'ಧಾರ್ಮಿಕತೆಗೆ ಧಕ್ಕೆ ತರುವ ಸಾಹಿತ್ಯ ಧಿಕ್ಕರಿಸಿ'
ಹಾಸನ: ಹಿಂದೂಗಳ ಆರಾಧ್ಯ ದೈವ್ಯ ಗಣೇಶನ ಬಗೆ ಅವಹೇಳನಕಾರಿ ಪುಸ್ತಕ ಪ್ರಕಟಿಸಿರುವುದು ಸರಿಯಲ್ಲ. ಹಿಂದುಗಳ ಧಾರ್ಮಿಕ ಶ್ರದ್ಧೆಗೆ ಧಕ್ಕೆ ತರುವಂತಹ ಸಾಹಿತ್ಯ ಧಿಕ್ಕರಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಘಟಕ ಅಭಿಪ್ರಾಯಪಟ್ಟಿದೆ. ಧರ್ಮ ಹಾಗೂ ಜನರ ಭಕ್ತಿ-ಶ್ರದ್ಧೆಗೆ ಅಪಮಾನ ಇದಾಗಿದ್ದು, ಇದನ್ನು ಎಲ್ಲಾ ಜಾತಿ, ಧರ್ಮ, ಸಮಾಜ ಬಾಂಧವರು ಖಂಡಿಸಬೇಕಾಗಿದೆ. ಇಂತಹ ಕೃತಿಗಳು ಪ್ರಕಟವಾಗದಂತೆ ಕಡಿವಾಣ ಹಾಕಬೇಕಾಗಿದ್ದು, ಭಾರತದಲ್ಲಿ ಎಲ್ಲಾ ದೇವರನ್ನು ಪೂಜ್ಯ ಭಾವನೆಯಿಂದಲೆ ನೋಡಲಾಗುತ್ತಿದೆ. ಈಶ್ವರನನ್ನು ಎಲ್ಲರು ಆರಾಧಿಸುತ್ತಾರೆ. ಅದರಂತೆ ವಿಘ್ನ ನಿವಾರಕ ಗಣೇಶನನ್ನು, ವಿಷ್ಣು, ಶ್ರೀರಾಮ, ಹನುಮಂತ ಒಳಗಂಡಂತೆ ಎಲ್ಲಾ ದೇವಾನು ದೇವತೆಗಳನ್ನು ಯಾವುದೇ ಭಿನ್ನಾಭಿಪ್ರಾಯವಿಲ್ಲದೆ ಎಲ್ಲರೂ ಪೂಜಿಸುತ್ತಾರೆ ಎಂದು ಪರಿಷತ್ ಜಿಲ್ಲಾ ಕಾರ್ಯದರ್ಶಿ ಕಟ್ಟಾ. ಶಿವಕುಮಾರ್ ತಿಳಿಸಿದ್ದಾರೆ. ಇತ್ತೀಚೆಗೆ ಹಿಂದೂ ಧರ್ಮವನ್ನು ಅವಹೇಳನ ಮಾಡುವುದೇ ಕೆಲವರ ಕಾಯಕವಾಗಿದೆ. ಇಂತಹ ಕೆಲಸ ಮಾಡುವವರ ಬಗ್ಗೆ ಸರ್ಕಾರ ಸೂಕ್ತ ಕಡಿವಾಣ ಹಾಕಬೇಕಾಗಿದೆ ಹಾಗೂ ಕಠಿಣ ಕಾನೂನು ಕ್ರಮ ಕೈಗೊಳ್ಳುವುದು ಅವಶ್ಯಕ ಎಂದು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

