ಪಪೂ ಕಾಲೇಜು ಕ್ರೀಡಾಕೂಟ: ವಿಜೇತರಿಗೆ ಪ್ರಶಸ್ತಿ ಪತ್ರ
ಕ.ಪ್ರ.ವಾರ್ತೆ ಸಕಲೇಶಪುರ ಆ.31
ಆರೋಗ್ಯಕರ ಜೀವನಕ್ಕೆ ಕ್ರೀಡೆ ಸಹಾಯಕ ಎಂದು ಸೆಂಟ್ ಅಗ್ನೇಸ್ ಶಾಲೆ ಕಾರ್ಯದರ್ಶಿ ಪ್ರಕಾಶ್ ಗ್ರೇಗೋರಿ ಫರ್ನಾಂಡೀಸ್ ಹೇಳಿದರು.
ಪಟ್ಟಣದ ಸುಭಾಷ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯ ಸದಾ ಕ್ರಿಯಾಶೀಲನಾಗಿರಲು ಕ್ರೀಡೆ ಅತ್ಯವಶ್ಯಕ ಎಂದರು.
ಇಂದು ಕ್ರೀಡೆಯಲ್ಲಿ ಹಲವು ಅವಕಾಶಗಳಿದ್ದು ಕಠಿಣ ಪರಿಶ್ರಮವಿದ್ದರೆ ಅದ್ಭುತವಾದುದನ್ನು ಸಾಧಿಸಬಹುದು. ಕ್ರೀಡೆಯಲ್ಲಿ ಸೋತ ವಿದ್ಯಾರ್ಥಿಗಳು ಕೀಳರಿಮೆಗೆ ತುತ್ತಾಗದೆ ಸತತ ಅಭ್ಯಾಸದ ಮೂಲಕ ಮತ್ತೊಮ್ಮೆ ಗೆಲುವಿಗೆ ಯತ್ನಿಸ ಬೇಕು ಎಂದು ತಿಳಿಸಿದರು.
ಅಥ್ಲೆಟಿಕ್ಸ್ನಲ್ಲಿ ಬಾಲಕರ ವಿಭಾಗದಲ್ಲಿ ಹೆತ್ತೂರು ಕಾಲೇಜಿನ ಸೌರಭ ಚಾಂಪಿಯನ್ಶಿಪ್ ಗಳಿಸಿದರೆ, ಬಾಲಕಿಯರ ವಿಭಾಗದಲ್ಲಿ ಪಟ್ಟಣದ ಜೂನಿಯರ್ ಕಾಲೇಜಿನ ಶಿಲ್ಪಾ ಅವರಿಗೆ ಲಭಿಸಿದೆ. ವಿಜೇತರಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಎನ್. ರಾಜಮ್ಮ ಪ್ರಶಸ್ತಿ ವಿತರಿಸಿದರು.
ಪುರಸಭೆ ಮುಖ್ಯಾಧಿಕಾರಿ ವೀರಭದ್ರಯ್ಯ, ಸೆಂಟ್ ಆಗ್ನೇಶ್ ಪದವಿ ಪೂರ್ವ ಕಾಲೇಜಿನ ಪ್ರಾಶಂಪಾಲ ರಂಗೇಗೌಡ, ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶಿವಣ್ಣ, ಸುರೇಶ್, ಪುಟ್ಟಸ್ವಾಮಿ ಇತರರು ಇದ್ದರು. ಕ್ರೀಡಾಕೂಟದಲ್ಲಿ ತಾಲೂಕಿನ ಸುಮಾರು 10 ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವಿಜೇತರ ವಿವರ: ಬಾಲಕರ 5000 ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಸರಕಾರಿ ಪದವಿ ಪೂರ್ವ ಕಾಲೇಜಿನ ಸಂದೀಪ್ ಹಾಗೂ ಗುರುರಾಜ್ ಪಡೆದರು. 3000 ಮೀಟರ್ ಓಟದ ಸ್ಪರ್ಧೆಯಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜಿನ ಭರತ್ ಪ್ರಥಮ ಸ್ಥಾನ, ದ್ವಿತೀಯ ಸ್ಥಾನವನ್ನು ಮಾನಸ ಕಾಲೇಜಿನ ಯೋಗೇಶ್ ಗಳಿಸಿದ್ದಾರೆ. 1500 ಮೀಟರ್ ಓಟದ ಸ್ಪರ್ಧೆಯಲ್ಲಿ ಯಸಳೂರು ಸರಕಾರಿ ಜೂನಿಯರ್ ಕಾಲೇಜಿನ ಎಂ.ಆರ್. ರಕ್ಷಿತ್, ದ್ವಿತೀಯ ಸ್ಥಾನವನ್ನು ಪಟ್ಟಣದ ಸರಕಾರಿ ಜೂನಿಯರ್ ಕಾಲೇಜಿನ ಮಲ್ಲಿಕಾರ್ಜುನ್ ಪಡೆದುಕೊಂಡರು.
800 ಮೀಟರ್ ಓಟದ ಸ್ವರ್ಧೆಯಲ್ಲಿ ಪಟ್ಟಣದ ಸರ್ಕಾರಿ ಕಾಲೇಜಿನ ಭರತ್ ಹಾಗೂ ದ್ವಿತೀಯ ಸ್ಥಾನವನ್ನು ಹಾನುಬಾಳ್ ಸರ್ಕಾರಿ ಕಾಲೇಜಿನ ಪೂರ್ಣೇಶ್ ಗಳಿಸಿದರು. 400 ಮೀಟರ್ ಓಟದ ಸ್ವರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಹಾನುಬಾಳ್ ಸರ್ಕಾರಿ ಕಾಲೇಜಿನ ಶಶಿ ಹಾಗೂ ದ್ವೀತಿಯ ಸ್ಥಾನವನ್ನು ಪಟ್ಟಣದ ಸರ್ಕಾರಿ ಕಾಲೇಜಿನ ಕಾರ್ತೀಕ್ ಪಡೆದರು.
ಹಾನುಬಾಳ್ ಜೂನಿಯರ್ ಕಾಲೇಜು: 200 ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಹಾನುಬಾಳ್ ಜೂನಿಯರ್ ಕಾಲೇಜಿನ ಸೋಮಶೇಖರ್ ಹಾಗೂ ರವಿ ಪಡೆದುಕೊಂಡರು. 100 ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಹಾನುಬಾಳ್ ಜೂನಿಯರ್ ಕಾಲೇಜಿನ ಸೋಮಶೇಖರ್, ದ್ವಿತೀಯ ಸ್ಥಾನವನ್ನು ಯಸಳೂರು ಜೂನಿಯರ್ ಕಾಲೇಜಿನ ರಕ್ಷಿತ್ ಪಡೆದುಕೊಂಡರು.
ಬಾಲಕಿಯರ ವಿಭಾಗದ 3000 ಸಾವಿರ ಮೀಟರ್ ಓಟದ ಸ್ಪರ್ಧೆಯಲ್ಲಿ ಚಂಗಡಿಹಳ್ಳಿ ಜೂನಿಯರ್ ಕಾಲೇಜಿನ ಕೃಪಾ ಪ್ರಥಮ ಸ್ಥಾನ, ದ್ವಿತೀಯ ಸ್ಥಾನವನ್ನು ಯಸಳೂರು ಜೂನಿಯರ್ ಕಾಲೇಜಿನ ಯಶಸ್ವಿನಿ ಪಡೆದು ಕೊಂಡರು. 1500 ಮೀಟರ್ ಓಟದ ಸ್ಪರ್ಧೆಯಲ್ಲಿ ಹೆತ್ತೂರು ಜೂನಿಯರ್ ಕಾಲೇಜಿನ ಸೌರಭ್ ಪ್ರಥಮ ಸ್ಥಾನ ಹಾಗೂ ದ್ವಿತೀಯ ಸ್ಥಾನವನ್ನು ವಣಗೂರು ಜೂನಿಯರ್ ಕಾಲೇಜಿನ ಸ್ವಾತಿ ಪಡೆದುಕೊಂಡರು.
800 ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹೆತ್ತೂರು ಜೂನಿಯರ್ ಕಾಲೇಜಿನ ಸುಮತಿ ಹಾಗೂ ದ್ವಿತೀಯ ಸ್ಥಾನವನ್ನು ವಣಗೂರು ಕಾಲೇಜಿನ ಸ್ವಾತಿ ಪಡೆದುಕೊಂಡರು.
400 ಮೀಟರ್ ಓಟದ ಸ್ಪರ್ಧೆಯಲ್ಲಿ ವಣಗೂರು ಕಾಲೇಜಿನ ಕಾವೇರಿ ಪ್ರಥಮ ಸ್ಥಾನ ಹಾಗೂ ದ್ವಿತೀಯ ಸ್ಥಾನವನ್ನು ಹೆತ್ತೂರು ಕಾಲೇಜಿನ ಸುಮತಿ ಪಡೆದುಕೊಂಡರು. 200 ಮೀಟರ್ ಓಟದ ಸ್ಪರ್ಧೆಯಲ್ಲಿ ಹೆತ್ತೂರು ಕಾಲೇಜಿನ ಸೌರಭ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಯಸಳೂರು ಕಾಲೇಜಿನ ಇಂದಿರಾ ಪಡೆದುಕೊಂಡಿದ್ದಾರೆ. 100 ಮೀಟರ್ ಓಟದ ಸ್ಪರ್ಧೆಯಲ್ಲಿ ಹೆತ್ತೂರು ಕಾಲೇಜಿನ ಸೌರಭ ಹಾಗೂ ಅಮೃತ ಪ್ರಥಮ ಹಾಗೂ ದ್ವಿತೀಯ ಬಹುಮಾನ ಪಡೆದುಕೊಂಡರು. ವಾಲಿಬಾಲ್ ಪಂದ್ಯದಲ್ಲಿ ಪಟ್ಟಣದ ಸರಕಾರಿ ಜೂನಿಯರ್ ಕಾಲೇಜಿನ ತಂಡ ಪ್ರಥಮ ಸ್ಥಾನ, ದ್ವಿತೀಯ ಸ್ಥಾನವನ್ನು ಸೆಂಟ್ ಆಗ್ನೇಸ್ ಕಾಲೇಜು ತಂಡ ಪಡೆದುಕೊಂಡಿದೆ. ಕೋಕೋದಲ್ಲಿ ಹೆತ್ತೂರು ಕಾಲೇಜಿನ ತಂಡ ಪ್ರಥಮ ಹಾಗೂ ಯಸಳೂರು ಜೂನಿಯರ್ ಕಾಲೇಜು ತಂಡ ದ್ವೀತಿಯ ಸ್ಥಾನಗಳಿಸಿದೆ.
ಕಬಡ್ಡಿ ಪಂದ್ಯಾವಳಿಯಲ್ಲಿ ವಣಗೂರು ಕಾಲೇಜಿನ ಜೂನಿಯರ್ ಕಾಲೇಜಿನ ತಂಡ ಪ್ರಥಮ ಸ್ಥಾನ, ದ್ವಿತೀಯ ಸ್ಥಾನವನ್ನು ಪಟ್ಟಣದ ಸೆಂಟ್ ಆಗ್ನೇಸ್ ಕಾಲೇಜು ತಂಡ ಪಡೆದುಕೊಂಡಿದೆ.
ವಣಗೂರು ಕಾಲೇಜು ತಂಡ: ಥ್ರೋಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಸೆಂಟ್ ಆಗ್ನೇಶ್ ಕಾಲೇಜಿನ ತಂಡ ಹಾಗೂ ದ್ವಿತೀಯ ಸ್ಥಾನವನ್ನು ವಣಗೂರು ಕಾಲೇಜು ತಂಡ ಗಳಿಸಿದೆ. ವಾಲಿಬಾಲ್ನಲ್ಲಿ ಪಟ್ಟಣದ ಜೂನಿಯರ್ ಕಾಲೇಜು ಪ್ರಥಮ ಸ್ಥಾನ ಹಾಗೂ ಸೆಂಟ್ ಆಗ್ನೇಸ್ ಕಾಲೇಜು ತಂಡ ಗಳಿಸಿದೆ. ರಿಲೇಯಲ್ಲಿ ಹಾನುಬಾಳ್ ಜೂನಿಯರ್ ಕಾಲೇಜು ಪ್ರಥಮ ಸ್ಥಾನಗಳಿಸಿದೆ.
ಜಾವಲಿನ್ ಎಸೆತದಲ್ಲಿ ಪ್ರಥಮಸ್ಥಾನವನ್ನು ಪಟ್ಟಣದ ಜೂನಿಯರ್ ಕಾಲೇಜಿನ ದುರ್ಗಾಪ್ರಸಾದ್ ಪಡೆದು ಕೊಂಡರು. ಎತ್ತರ ಜಿಗಿತದಲ್ಲಿ ಹಾನುಬಾಳ್ ಕಾಲೇಜಿನ ಶಶಿ ಪ್ರಥಮ ಸ್ಥಾನ, ಗುಂಡು ಎಸೆತದಲ್ಲಿ ಪ್ರಥಮ ಸ್ಥಾನವನ್ನು ಪಟ್ಟಣದ ಜೂನಿಯರ್ ಕಾಲೇಜಿನ ಆಸೀಫ್ ಪಡೆದರು. ಡಿಸ್ಕಸ್ ಥ್ರೋ ಎಸೆತದಲ್ಲಿ ಪಟ್ಟಣದ ಜೂನಿಯರ್ ಕಾಲೇಜಿನ ಅಪ್ರೀದ್ ಪ್ರಥಮ ಸ್ಥಾನ ಗಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

