ತಮ್ಮ ಸೋಲಿಗೆ ಕಾಂಗ್ರೆಸ್ಸಿಗರೇ ಕಾರಣ: ಅನುಪಮ
ಹೊಳೆನರಸೀಪುರ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಾವು ಪರಾಭವಗೊಳ್ಳಲು ಬೇರೆಯವರಿಗಿಂತಲೂ ಹೆಚ್ಚಾಗಿ ಕಾಂಗ್ರೆಸಿಗರೇ ಕಾರಣ. ಮುಂದಿನ ದಿನಗಳಲ್ಲಿ ಒಗ್ಗಟ್ಟನ್ನು ಪ್ರದರ್ಶಿಸಬೇಕು ಎಂದು ತಾಲೂಕು ಕಾಂಗ್ರೆಸ್ ನಾಯಕಿ ಅನುಪಮ ಹೇಳಿದರು.
ಇಲ್ಲಿ ನಡೆದ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ತಮ್ಮ ಭಾಷಣದ ಮೊದಲಿನಲ್ಲಿಯೇ ಸೂಚ್ಯವಾಗಿ ಕಳೆದ ಚುನಾವಣೆಯಲ್ಲಿ ಅನುಭವಕ್ಕೆ ಬಂದುದನ್ನು ನೇರವಾಗಿ ಹೇಳಿದರು.
ಎಲ್ಲ ನಾಯಕರು ತಮ್ಮ ತಪ್ಪುಗಳ ಅರಿವು ಮಾಡಿಕೊಂಡು ಮುಂದಿನ ದಿನಗಳಲ್ಲಿ ಒಗ್ಗಟ್ಟನ್ನು ಪ್ರದರ್ಶಿಸುವ ಜೊತೆಗೆ ಕಾರ್ಯಕರ್ತರಲ್ಲಿ ಧೈರ್ಯ ಮತ್ತು ಹುಮ್ಮಸ್ಸನ್ನು ತುಂಬುವ ಕೆಲಸಕ್ಕೆ ಮುಂದಾಗಲಿರುವ ಭರವಸೆಅನುಪಮಾ ನೀಡಿದ್ದು ಅಪಾರ ಸಂಖ್ಯೆಯ ಕಾರ್ಯಕರ್ತರಲ್ಲಿ ಹರ್ಷ ಉಂಟುಮಾಡಿತು.
ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯುವಕ ಎಚ್.ಕೆ.ಹರೀಶ್, ದುದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಸೇರಿ ಕಡೆಗೂ ಎಲ್ಲ ನಾಯಕರು ಹಾಗೂ ನೂತನವಾಗಿ ಪಕ್ಷ ಸೇರಿದ ನಾಯಕರುಗಳೆಲ್ಲರನ್ನೂ ಒಂದೇ ವೇದಿಕೆಗೆ ಕರೆತರುವ ಯತ್ನ ಈ ಸಭೆಯ ಮೂಲಕ ಯಶಸ್ವಿಯಾಯಿತು.
ಜೆಡಿಎಸ್ಗೆ ತಕ್ಕ ಪಾಠ ಕಲಿಸುವ ಸುವರ್ಣಾವಕಾಶ: ಜೆಡಿಎಸ್ಗೆ ತಕ್ಕ ಪಾಠ ಕಲಿಸುವ ಸುವರ್ಣಾವಕಾಶ ಈಗ ಒದಗಿ ಬಂದಿದ್ದು, ದುಷ್ಟಶಕ್ತಿಗಳನ್ನು ಬಗ್ಗುಬಡಿಯುವ ಶಕ್ತಿ ಕಾಂಗ್ರೆಸ್ಗಿದೆ ಎಂಬುದನ್ನು ಈ ಚುನಾವಣೆಯ ಮೂಲಕ ಸಾಬೀತುಪಡಿಸಬೇಕಿದೆ ಎಂದ ಅವರು, ಈ ಚುನಾವಣೆಯಲ್ಲಿ ಪಟ್ಟಣದ ಎಲ್ಲಾ 23 ವಾರ್ಡ್ಳಿಗೂ ಎಲ್ಲರೂ ಚರ್ಚಿಸಿ ಒಗ್ಗಟ್ಟಿನಿಂದ ಚುನಾವಣೆ ಎದುರಿಸಿದಲ್ಲಿ ಈ ಬಾರಿ ಪುರಸಭೆಯು ಖಂಡಿತ ಕಾಂಗ್ರೆಸ್ ವಶವಾಗಲಿದೆ ಎಂದು ಅನುಪಮ ಹೇಳಿದರು.
ಜಿಪಂ ಮಾಜಿ ಅಧ್ಯಕ್ಷ ಹೆರಗು ವಾಸು ಮಾತನಾಡಿ, ಕಾಂಗ್ರೆಸ್ ಎಂದಿಗೂ ತನ್ನ ಕಾರ್ಯಕರ್ತರ ಒಗ್ಗಟ್ಟಿನ ಹೋರಾಟದಲ್ಲಿ ನಂಬಿಕೆಯಿರಿಸಿದೆಯೇ ಹೊರತು ನಾಯಕರ ಮೇಲಲ್ಲ. ಆದ್ದರಿಂದ ಕಾರ್ಯಕರ್ತರು ಮಾತ್ರವೇ ಪಕ್ಷವನ್ನು ಉಳಿಸಲು ಸಾಧ್ಯ ಎಂಬ ಅಂಶವನ್ನು ನೆನಪಿನಲ್ಲಿಟ್ಟುಕೊಂಡು ಮುಖಂಡರು ಎಲ್ಲ ಭಿನ್ನಾಭಿಪ್ರಾಯ ಹಾಗೂ ಗೊಂದಲ ಬದಿಗಿಟ್ಟು ಹೋರಾಡಿದಲ್ಲಿ ಈ ಬಾರಿ ಕಾಂಗ್ರೆಸ್ ಅಧಿಕಾರ ಹಿಡಿಯುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಸಂಘಟಿತ ಹೋರಾಟದ ಕೊರತೆ: ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ನಾಯಕ ಕೆ.ಎಂ.ಶ್ರೀನಿವಾಸ್ ಅವರು 1994ರಿಂದಲೂ ತಾಲೂಕಿನಲ್ಲಿ ಕಾಂಗ್ರೆಸ್ ಯಾವುದೇ ಅಧಿಕಾರ ಪಡೆಯಲು ಸಾಧ್ಯವಾಗಿಲ್ಲ. ಇದಕ್ಕೆ ಕಾರಣಗಳು ಹಾಗೂ ನಡೆದ ತಪ್ಪುಗಳು ತಮ್ಮೆಲ್ಲರಿಗೂ ಅರಿವಿಗೆ ಬಂದಿದ್ದು, ಕಾಂಗ್ರೆಸ್ ಸಂಘಟಿತ ಹೋರಾಟದ ಕೊರತೆಯಿಂದಾಗಿ ಹಾಗೂ ಜೆಡಿಎಸ್ ಈ ಹಿಂದಿನ ಚುನಾವಣೆಗಳಲ್ಲಿ ವ್ಯಾಪಕ ನಡೆಸಿದ ನಕಲಿ ಮತದಾನ, ಮತಗಟ್ಟೆ ಏಜೆಂಟರನ್ನು ಬೆದರಿಸುವುದಲ್ಲದೇ ಚುನಾವಣೆ ಆಕ್ರಮಗಳನ್ನು ಈ ಬಾರಿ ಎಲ್ಲರೂ ಒಗ್ಗಟ್ಟಿನಿಂದ ಎದುರಿಸಲು ತಾವುಗಳು ಎಲ್ಲ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ ಮಾಜಿ ನಿರ್ದೇಶಕ ಹಾಗೂ ಪುರಸಭೆ ಮಾಜಿ ಸದಸ್ಯ ಕೆ.ರಾಜೇಗೌಡ ಮಾತನಾಡಿ, ಜೆಡಿಎಸ್ ಕಾಲ ಮುಗಿದಿದೆ. ಕಾಂಗ್ರೆಸ್ ಈ ಬಾರಿ ಎಲ್ಲಾ ವಾರ್ಡ್ಗಳಲ್ಲಿಯೂ ಜಯಭೇರಿ ಬಾರಿಸುವ ದಿನ ದೂರವಿಲ್ಲ ಎಂದರು.
ಇದೇ ಸಂದರ್ಭದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಕೆ.ಹರೀಶ್, ದುದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಸಭೆಯ ಅಭೂತಪೂರ್ವ ಯಶಸ್ಸಿಗೆ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ವಳಂಬಿಗೆ ನಾರಾಯಣ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಮಿತ್ರಾ, ತಾಪಂ ಮಾಜಿ ಅಧ್ಯಕ್ಷ ಕೆಂಗೇಗೌಡ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನಾರಾಯಣಗೌಡ, ಕೆ.ಎಚ್.ಹೊನ್ನೇಗೌಡ, ಪುರಸಭೆ ನಾಮನಿರ್ದೇಶಿತ ಸದಸ್ಯ ಉನ್ನಿಕೊಪ್ಪಲು ಮಂಜುನಾಥ್, ಎಚ್.ಟಿ.ಲಕ್ಷ್ಮಣ್, ವಕೀಲ ಮಂಜುನಾಥ್, ಕೆ.ಆರ್.ಸುನಿಲ್ಕುಮಾರ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

