ಉತ್ತಮ ಸೇವೆಯಿಂದ ಎಸ್ಬಿಎಂಗೆ ಜನಮನ್ನಣೆ: ಭುವನೇಂದ್ರ
ಅರಸೀಕೆರೆ: ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ರಾಷ್ಟ್ರದಲ್ಲಿಯೇ ಮುಂಚೂಣಿಯಲ್ಲಿದೆ ಎಂದು ಮೈಸೂರು ಬ್ಯಾಂಕ್ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಭುವನೇಂದ್ರ ಠಾಕೂರ್ ತಿಳಿಸಿದರು.
ಪಟ್ಟಣದ ಮೈಸೂರು ಬ್ಯಾಂಕ್ ಶಾಖೆಯ ಆವರಣದಲ್ಲಿ ಏರ್ಪಡಿಸಿದ್ದ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಮೈಸೂರು ದಿವಾನರಾಗಿದ್ದ ಸರ್.ಎಂ. ವಿಶ್ವೇಶ್ವರಯ್ಯನವರ ಕನಸಿನ ಕೂಸಾಗಿ 1913ರಲ್ಲಿ ಹೊರಬಂದ ಈ ಬ್ಯಾಂಕ್ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಜನಮನ್ನಣೆಗೆ ಪಾತ್ರವಾಗಿದೆ. ಇದಕ್ಕೆ ಬ್ಯಾಂಕ್ ಸಿಬ್ಬಂದಿ ಪರಿಶ್ರಮವೇ ಕಾರಣವಾಗಿದೆ ಎಂದರು.
ಸಹಾಯಕ ವ್ಯವಸ್ಥಾಪಕ ಚಂದ್ರಶೇಖರ್ ಮಾತನಾಡಿ, ಬ್ಯಾಂಕ್ ಆರಂಭಗೊಂಡ 100 ವರ್ಷಗಳಲ್ಲಿ ಅತ್ಯುತ್ತಮ ಸೇವೆ ನೀಡಿದೆ. ರಾಜ್ಯಾದ್ಯಂತ 1 ಮುಖ್ಯ ಕಚೇರಿ, 6 ವಿಭಾಗೀಯ ಕಚೇರಿ, 33 ಪ್ರಾದೇಶಿಕ ಕಚೇರಿಗಳು, ಅಲ್ಲದೇ 792 ಶಾಖೆಗಳನ್ನು ಹೊಂದಿದೆ. 1913-2013ರವರೆಗೆ ವಾರ್ಷಿಕ 75,538 ಸಾವಿರ ಕೋಟಿ ರೂ. ಸ್ಥಿರ ಠೇವಣಿ ಹೊಂದಿದ್ದು 43,358ಸಾವಿರ ಕೋಟಿ ರು ಸಾಲದ ರೂಪದಲ್ಲಿ ನೀಡಿದೆ. ರಾಜ್ಯಾದ್ಯಂತ 917 ಎ.ಟಿ.ಎಂ.ಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ವಿವರಿಸಿದರು.
ಬ್ಯಾಂಕ್ ವ್ಯವಸ್ಥಾಪಕ ಕೆ.ಹೆಚ್.ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. “ÈÚßßOÚ¡ ÈÚßßOÚ¡’ ಖ್ಯಾತಿಯ ಶಿವಕೃಷ್ಣ ದೇಸಾಯಿ(ಶ್ರೀನಿವಾಸಮೂರ್ತಿ) ವಿಶೇಷ ಆಹ್ವಾನಿತರಾಗಿದ್ದರು. ಮುಖ್ಯ ಅತಿಥಿಗಳಾಗಿ ಶಾಂತರಾಂ, ಚಿದಂಬರಂ ಮಾತನಾಡಿದರು.
ಖ್ಯಾತ ಹಾಸ್ಯ ಕಲಾವಿದರಾದ ಎಂ.ಎಸ್.ನರಸಿಂಹಮೂರ್ತಿ, ದಂಡಿರಾಜ್, ಅಸಾದುಲ್ಲಾ ಬೇಗ್, ಗುಂಡುರಾವ್ ಹಾಸ್ಯಸಂಜೆಯಲ್ಲಿ ನೆರೆದಿದ್ದ ಗ್ರಾಹಕರನ್ನು ನಗೆಗಡಲಲ್ಲಿ ಮುಳುಗಿಸಿದರು. ಕ್ರೀಡಾಚಟುವಟಿಕೆಗಳಲ್ಲಿ ವಿಜೇತರಿಗೆ ಎಸ್.ಬಿ.ಎಂ.ಯೂನಿಯನ್ ಕಾರ್ಯದರ್ಶಿ ವಿ.ರಮೇಶ್ ಬಹುಮಾನ ವಿತರಿಸಿದರೆ ಚಂದ್ರಶೇಖರ್ ನಿರೂಪಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

