ಹಾಸನ

ರಾಜ್ಯದಲ್ಲಿ ಶೇ. 87 ಮಂದಿ ಅಂತರ್ಜಲ ಅವಲಂಬಿತರು: ರವಿಕುಮಾರ್

Published On :

ಹಾಸನ: ಕರ್ನಾಟಕದ ಶೇ.87 ಜನತೆ ತಮ್ಮ ನೀರಿನ ಅಗತ್ಯಕ್ಕಾಗಿ ಅಂತರ್ಜಲವನ್ನೇ ಅವಲಂಬಿಸುವಂತಾಗಿದೆ. ಮುಂದಿನ ವರ್ಷಗಳಲ್ಲಿ ರಾಜ್ಯ ಆಹಾರದ ಕ್ಷಾಮಕ್ಕಿಂತ ನೀರಿನ ಕ್ಷಾಮದ ಭೀಕರತೆ ಎದುರಿಸಲಿದೆ ಎಂದು ವಿಜ್ಞಾನ ಲೇಖಕ ಕೆ.ಎಸ್.ರವಿಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ.
ಶಾಂತಿನಗರ ಘಟಕ ಭಾರತ ಜ್ಞಾನ ವಿಜ್ಞಾನ ಸಮಿತಿ ಶಾಂತಿನಗರದ ಪದ್ಮ ವೆಂಕಟೇಶ್ ಮನೆಯಲ್ಲಿ ಆಯೋಜಿಸಿದ್ದ ಅನಿಸಿಕೆ-ಅಭಿವ್ಯಕ್ತಿ 2ನೇ ಮಾಸಿಕ ಕಾರ್ಯಕ್ರಮದಲ್ಲಿ ನೀರು ಮತ್ತು ಅಭಾವ ಕುರಿತು ವಿಚಾರ ಮಂಡಿಸಿ ಅವರು ಮಾತನಾಡಿದರು.
ಭಾರತದಲ್ಲಿ ರಾಜಸ್ಥಾನ ಬಿಟ್ಟರೆ ನಂತರದ ಸ್ಥಾನದಲ್ಲಿ ಕರ್ನಾಟಕ ರಾಜ್ಯವು  ನೀರಿನ ಅಭಾವ ಎದುರಿಸುತ್ತಿರುವ ರಾಜ್ಯವಾಗಿದೆ ಎಂದ ಅವರು, ಜಗದ ಬಡತನವನ್ನು ಆ ದೇಶದ ಮೂಲಭೂತ ಸೌಕರ್ಯಗಳ ಜೊತೆಗೆ ನೀರಿನ ಬಡತನದ ಸೂಚ್ಯಂಕದ ಆಧಾರದಲ್ಲೂ ಗುರುತಿಸುವ ಪದ್ಧತಿ ಕೂಡ ಆರಂಭಿಸಲಾಗಿದೆ.
ಬಳಕೆಯ ಶುದ್ಧ ಜ್ಞಾನ:  ಈ ಹಿನ್ನಲೆಯಲ್ಲಿ ಜಲಸಂಪನ್ಮೂಲ ಹಾಗೂ ಅದರ ಬಳಕೆಯ ಶುದ್ಧ ಜ್ಞಾನ ಹೇರಳವಾಗಿರುವ ದೇಶ ನ್ಯೂಜಿಲ್ಯಾಂಡ್ ಆಗಿದೆ. ಜಲ ಸಂಪನ್ಮೂಲ ಕಡಿಮೆ, ಆದರೆ ನೀರಿನ ಸದ್ಬಳಕೆಯ ಜ್ಞಾನ ಹೇರಳವಾಗಿರುವ ಅಗ್ರ ರಾಷ್ಟ್ರ ದಕ್ಷಿಣ ಆಫ್ರಿಕ, ನೀರಿನ ಸಂಪನ್ಮೂಲ ಹೇರಳವಾಗಿದ್ದು ಸದ್ಬಳಕೆ ಮಾಡುವ ಕನಿಷ್ಠ ಜ್ಞಾನ ಹೊಂದಿರುವ ದೇಶ ಅಮೆರಿಕ ಆಗಿದ್ದರೆ, ಸಂಪನ್ಮೂಲದ ಹೇರಳ ಕೊರತೆ ಭಾರತ ಎದುರಿಸುತ್ತಿದ್ದೂ ಇರುವ ಸಂಪನ್ಮೂಲ ಬಳಸಿಕೊಳ್ಳುವ ಜ್ಞಾನದ ಕೊರತೆ ಎದುರಿಸುತ್ತಿರುವ ದೇಶ ಭಾರತ ಆಗಿದೆ ಎಂದು ವಿವರಿಸಿದರು.
ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ವೈಜ್ಞಾನಿಕ ತಿಳಿವಳಿಕೆ ತೀರಾ ನಗಣ್ಯವಾಗಿರುವ ಕಾರಣ ಅಭಿವೃದ್ಧಿಯ ಮಾನದಂಡಗಳು ಅವೈಜ್ಞಾನಿಕ ಹಾಗೂ ಜನಪರ ಮತ್ತು ಜೀವ ಪರವಾಗಿಲ್ಲ ಹಾಗಾಗಿ ಮುಂುದಿನ ದಶಕಗಳು ನಗರ ಪ್ರದೇಶದ ಜನ ನೀರಿನ ಅಭಾವದ ಕಾರಣಕ್ಕಾಗಿ ಮತ್ತೆ ಹಳ್ಳಿಯ ಕಡೆ ವಲಸೆಹೋಗುವಂತಹ ಪರಿಸ್ಥಿತಿ ನಿರ್ಮಾಣ ಮಾಡಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ದೈನಂದಿನ ಅಗತ್ಯಗಳಿಗೆ ಕನಿಷ್ಠ 70 ಲೀ. ನೀರು:  ಪ್ರತಿಯೊಬ್ಬ ಮನುಷ್ಯನ ದೈನಂದಿನ ಅಗತ್ಯಗಳಿಗೆ ಕನಿಷ್ಠ 70 ಲೀ. ನೀರಿನ ಅಗತ್ಯ ಇದ್ದು, ಪೂರೈಕೆ 40 ಲೀಟರಿಗೂ ಕಡಿಮೆ ಇದೆ. ಅಮೆರಿಕದ ಜನ ದಿನವೊಂದಕ್ಕೆ 160 ಲೀ. ಬಳಸಿ ಜಗತ್ತಿನ ಅತ್ಯಂತ ದುಬಾರಿ ನೀರಿನ ವೆಚ್ಚಗಾರರಾಗಿದ್ದಾರೆ ಎಂದರು. ನೀರಿನ ಮಹತ್ವ ಮತ್ತು ಮಿತವ್ಯಯವನ್ನು ನಾವು ಯಾವುದೇ ಸರ್ಕಾರವನ್ನು ಅವಲಂಬಿಸದೆ ಮಾಡಬಹುದು ಎಂದು ಸುಮದರ ಲೆಕ್ಕಾಚಾರದ ಮುಖಾಂತರ ತಿಳಿಸಿದರು.
ಬಟ್ಟೆ ತೊಳೆದ ನೀರನ್ನು ಚರಂಡಿಗೆ ಚೆಲ್ಲದೆ ಹಟ್ಟಿ ತೊಳೆಯಲು ಬಳಸಲು, ಬಟ್ಟೆಯನ್ನು ನೆನೆಹಾಕುವುದರಿಂದ ಕೊಳೆಯ ಜೊತೆಗೆ ನೀರು ಮತ್ತು ಬಟ್ಟೆಯ ಬಾಳಿಕೆಯೂ ದುಬಾರಿಯಾಗಲಿದೆ. ಹಾಗಾಗಿ ಸೋಪು ಹಚ್ಚಿ ತೊಳೆಯುವುದರಿಂದ ಅಷ್ಟೇ ಶುಭ್ರ ಹಾಗೂ ಕಡಿಮೆ ಪ್ರಮಾಣದ ನೀರು ಬಳಕೆಯಾಗುತ್ತದೆ. ಸ್ನಾನದ ಮನೆಯಲ್ಲಿ ಅರ್ಧ ಲೀಟರಿಗಿಂತಲೂ ಕಡಿಮೆ ಪ್ರಮಾಣದ ಜಗ್ ಬಳಸುವ ಮೂಲಕ ನಾವೀಗ ಸ್ನಾನ ಮಾಡುವಾಗ ಅನಗತ್ಯ ಪೋಲು ಮಾಡುತ್ತಿರುವ 52 ಶೇಖಡ ನೀರನ್ನು ಉಳಿಸಬಹುದು ಎಂದರು.
ಪಾತ್ರೆ ತೊಳೆಯುವಾಗ ನೀರಿನ ಟ್ಯಾಪನ್ನು ಕಾಲು ಭಾಗ ತಿರುಗಿಸಿ ತೊಳೆಯುವುದರಿಂದ ಶೇ.65 ರಷ್ಟು  ನೀರನ್ನು ಉಳಿಸಬಹುದು ಎಂದು ಕಿವಿಮಾತು  ಹೇಳಿ,  ನೀರು ಉಳಿಸಿ ಜಲಸಂರಕ್ಷಿಸುವ ಸರಳ ವಿಧಾನವನ್ನು ಪ್ರಾತ್ಯಕಿಕೆವಾಗಿ ತೋರಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರತಿನಿಧಿಗಳು ನೀರಿನ ಸದ್ಬಳಕೆ, ಉಳಿಕೆ, ಜಲಸಂರಕ್ಷಣೆ, ನೀರಿನ ನಾನಾ ಆಯಾಮಗಳು ಹಾಗೂ ನೀರಿನ ವಿಶೇಷತೆಗಳನ್ನು ಹೇಳುವ ಗಾದೆ, ಒಗಟು, ಹಾಡುಗಳ ಮೂಲಕ ವಿಚಾರ ವಿನಿಮಯ ಮಾಡಿಕೊಂಡರು.
ಇದೇ ಸಂದರ್ಭದಲ್ಲಿ ಶಾಂತಿನಗರದ ಯುವ ಪ್ರತಿಭೆ ಅಮೃತವರ್ಷಿಣಿ ರಾಗದಲ್ಲಿ ನೀರಿನ ಮೌಲ್ಯ ವಿವರಿಸುವ ಕೊಳಲುವಾದನ ನಡೆಸಿಕೊಟ್ಟರು. ಚೂಡಾಮಣಿ, ಕವಿತ, ವೇದಶ್ರಿ, ಪದ್ಮ ಮಂಜುನಾಥ್, ಪದ್ಮಾವತಿ ವೆಂಕಟೇಶ್, ಮತ್ತು ಇತರರು ಸ್ವರಚಿತ ಕವನ ವಾಚಿಸಿದರು. ಬಿಜಿವಿಎಸ್ ಘಟಕ ಅಧ್ಯಕ್ಷ ಹಾಗೂ ಶಿಕ್ಷಕ ಸಾಹಿತಿ ದೇವರಾಜೇಗೌಡ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಕವನ ವಿಮರ್ಶೆ ಮಾಡಿದರು.
ಪದ್ಮಾವತಿ ವೆಂಕಟೇಶ್ ಸ್ವಾಗತಿಸಿದರು. ದೇವರಾಜೇಗೌಡ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.