ನಗರಸಭೆ 4ನೇ ವಾರ್ಡ್ನಲ್ಲೇ ಅತಿ ಹೆಚ್ಚು ಮತದಾರರು...
ಹಾಸನ: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಪ್ರಚಾರದ ರಂಗು ಏರುತ್ತಿದ್ದು, ನಾಮಪತ್ರ ಸಲ್ಲಿಕೆ ಬಿರುಸಿನಿಂದ ಸಾಗುತ್ತಿದೆ. ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿನ ಮತದಾರರನ್ನು ಭೇಟಿ ಮಾಡುವ ಕಾರ್ಯವೂ ಜೋರಾಗಿ ನಡೆಯುತ್ತಿದೆ.
ನಗರದ ವಾರ್ಡ್ ನಂ.4 ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳ ವಾರ್ಡ್ಗಳಿಗಿಂತ ಅತಿ ಹೆಚ್ಚು ಮತದಾರರನ್ನು ಹೊಂದಿದೆ. ಈ ವಾರ್ಡ್ನಲ್ಲಿರುವ ಮತದಾರರ ಸಂಖ್ಯೆ ಆಲೂರು ಪಟ್ಟಣ ಪಂಚಾಯತಿಯ ಅಷ್ಟೂ ವಾರ್ಡ್ಗಳ ಒಟ್ಟಾರೆ ಮತದಾರರ ಸಂಖ್ಯೆಗಿಂತ ಅಧಿಕ.
2012ರ ಡಿಸೆಂಬರ್ 12ಕ್ಕೆ ಅಂತಿಮಗೊಂಡಂತೆ ಮತದಾರರ ವಿವರದಂತೆ ಹಾಸನದ ವಾರ್ಡ್ ನಂ.4ರಲ್ಲಿ 2554 ಪುರುಷ ಹಾಗೂ 2530 ಮಹಿಳಾ ಮತದಾರರು ಸೇರಿದಂತೆ ಒಟ್ಟು 5084 ಮತದಾರರಿದ್ದಾರೆ. 7 ಮತಗಟ್ಟೆ ಸ್ಥಾಪಿಸಲಾಗಿದೆ.
ಆಲೂರಿನ 11 ವಾರ್ಡ್ಗಳಲ್ಲಿ ಇರುವುದು 2065 ಪುರುಷ ಹಾಗೂ 2044 ಮಹಿಳಾ ಅಭ್ಯರ್ಥಿಗಳು ಸೇರಿದಂತೆ ಕೇವಲ 4109 ಮಂದಿ ಮತದಾರರು ಇದ್ದಾರೆ. ಇಲ್ಲಿ ಪ್ರತಿ ವಾರ್ಡ್ಗೊಂದರಂತೆ ಒಟ್ಟು 11 ಮತಗಟ್ಟೆ ಸ್ಥಾಪಿಸಲಾಗಿದೆ.
ವಾರ್ಡ್ವಾರು ಮತದಾರರ ವಿವರ:
ವಾರ್ಡ್ ನಂ.1 ರಲ್ಲಿ 1389 ಪುರುಷ, 1375 ಮಹಿಳಾ ಅಭ್ಯರ್ಥಿಗಳು ಸೇರಿದಂತೆ ಒಟ್ಟು 2764 ಮತದಾರರಿದ್ದಾರೆ. ಸ್ಥಾಪಿಸಲಾಗಿರುವ ಮತಗಟ್ಟೆಗಳ ಸಂಖ್ಯೆ (3). ವಾರ್ಡ್ ನಂ.2ರಲ್ಲಿ ಪುರುಷ ಮತದಾರರ ಸಂಖ್ಯೆ 930, ಮಹಿಳಾ ಮತದಾರರ ಸಂಖ್ಯೆ 980 ಒಟ್ಟು 1910 ಮತದಾರರಿದ್ದು 2 ಮತಗಟ್ಟೆ ಸ್ಥಾಪಿಸಲಾಗಿದೆ.
ವಾರ್ಡ್ ನಂ.3ರಲ್ಲಿ 1415 ಪುರುಷ, 1391 ಮಹಿಳೆಯರು ಸೇರಿದಂತೆ ಒಟ್ಟು 2806 ಮತದಾರರಿದ್ದಾರೆ. ನಾಲ್ಕು ಮತಗಟ್ಟೆಗಳನ್ನು,. ವಾರ್ಡ್ ನಂ.4ರಲ್ಲಿ 2554 ಪುರುಷ, 2530 ಮಹಿಳೆಯರು ಸೇರಿದಂತೆ ಒಟ್ಟು 5084 ಮತದಾರರಿದ್ದಾರೆ. 7 ಮತಗಟ್ಟೆಗಳನ್ನು, ವಾರ್ಡ್ನಂ.5 ರಲ್ಲಿ 1213 ಪುರುಷ, 1142 ಮಹಿಳೆಯರು ಸೇರಿದಂತೆ ಒಟ್ಟು 2355 ಮತದಾರರಿದ್ದಾರೆ. 4 ಮತಗಟ್ಟೆ ಸ್ಥಾಪಿಸಲಾಗಿದೆ.
ವಾರ್ಡ್ ನಂ.6ರಲ್ಲಿ 878 ಪುರುಷ, 865 ಮಹಿಳೆಯರು ಸೇರಿದಂತೆ ಒಟ್ಟು 1743 ಮತದಾರರಿದ್ದಾರೆ. 3 ಮತಗಟ್ಟೆಗಳನ್ನು, ವಾರ್ಡ್ ನಂ.7ರಲ್ಲಿ 1055 ಪುರುಷ, 1085 ಮಹಿಳೆಯರು ಸೇರಿದಂತೆ ಒಟ್ಟು 2140 ಮತದಾರರು. 5 ಮತಗಟ್ಟೆಗಳನ್ನು ,. ವಾರ್ಡ್ ನಂ.8ರಲ್ಲಿ 817 ಪುರುಷ, 836 ಮಹಿಳೆಯರು ಸೇರಿದಂತೆ ಒಟ್ಟು 1653 ಮತದಾರರಿದ್ದಾರೆ. 3 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ವಾರ್ರ್ಡ್ ನಂ.9ರಲ್ಲಿ 1154 ಪುರುಷ, 1148 ಮಹಿಳೆಯರು ಸೇರಿದಂತೆ ಒಟ್ಟು 2302 ಮತದಾರರಿದ್ದಾರೆ. 4 ಮತಗಟ್ಟೆಗಳನ್ನು ತೆರೆಯಲಾಗಿದೆ. ವಾರ್ಡ್ ನಂ.10ರಲ್ಲಿ 800 ಪುರುಷ, 822 ಮಹಿಳೆಯರು ಸೇರಿದಂತೆ ಒಟ್ಟು 1622 ಮತದಾರರಿದ್ದಾರೆ. 2 ಮತಗಟ್ಟೆ ಸ್ಥಾಪಿಸಲಾಗಿದೆ.
ವಾರ್ಡ್ ನಂ.11ರಲ್ಲಿ 1032 ಪುರುಷ, 1070 ಮಹಿಳೆಯರು ಸೇರಿದಂತೆ ಒಟ್ಟು 2102 ಮತದಾರರು. 2 ಮತಗಟ್ಟೆಗಳನ್ನು,. ವಾರ್ಡ್ ನಂ.12ರಲ್ಲಿ 1354 ಪುರುಷ, 1306 ಮಹಿಳೆಯರು ಸೇರಿದಂತೆ ಒಟ್ಟು 2660 ಮತದಾರರಿದ್ದಾರೆ. 4 ಮತಗಟ್ಟೆಗಳನ್ನು ತೆರೆಯಲಾಗಿದೆ. ವಾರ್ಡ್ ನಂ.13ರಲ್ಲಿ 1139 ಪುರುಷ, 1149 ಮಹಿಳೆಯರು ಸೇರಿದಂತೆ ಒಟ್ಟು 2288 ಮತದಾರರಿದ್ದಾರೆ. 7 ಮತಗಟ್ಟೆಗಳನ್ನು, ವಾರ್ಡ್ ನಂ.14ರಲ್ಲಿ 1054 ಪುರುಷ, 1070 ಮಹಿಳೆಯರು ಸೇರಿದಂತೆ ಒಟ್ಟು 2124 ಮತದಾರರಿದ್ದಾರೆ. 4 ಮತಗಟ್ಟೆಗಳನ್ನು ಮತ್ತು ವಾರ್ಡ್ ನಂ.15ರಲ್ಲಿ 1319 ಪುರುಷ, 1352 ಮಹಿಳೆಯರು ಸೇರಿದಂತೆ ಒಟ್ಟು2671 ಮತದಾರರಿದ್ದಾರೆ. 5 ಮತಗಟ್ಟೆಗಳನ್ನು ತೆರೆಯಲಾಗಿದೆ.
ವಾರ್ಡ್ ನಂ.16 ರಲ್ಲಿ 1736 ಪುರುಷ, 1686 ಮಹಿಳೆಯರು ಸೇರಿದಂತೆ ಒಟ್ಟು 3422 ಮತದಾರರಿದ್ದಾರೆ. 5 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.ವಾರ್ಡ್ ನಂ. 17ರಲ್ಲಿ 1207 ಪುರುಷ, 1138 ಮಹಿಳೆಯರು ಸೇರಿದಂತೆ ಒಟ್ಟು 2345 ಮತದಾರರಿದ್ದಾರೆ. 3 ಮತಗಟ್ಟೆಗಳನ್ನು, ವಾರ್ಡ್ ನಂ.18ರಲ್ಲಿ 1259 ಪುರುಷ, 1229 ಮಹಿಳೆಯರು ಸೇರಿದಂತೆ ಒಟ್ಟು 2488 ಮತದಾರರಿದ್ದಾರೆ. 5 ಮತಗಟ್ಟೆಗಳನ್ನು , ವಾರ್ಡ್ ನಂ.19ರಲ್ಲಿ 1204 ಪುರುಷ, 1143 ಮಹಿಳೆಯರು ಸೇರಿದಂತೆ ಒಟ್ಟು 2347 ಮತದಾರರಿದ್ದಾರೆ. 3 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ವಾರ್ಡ್ ನಂ.20ರಲ್ಲಿ 1003 ಪುರುಷ, 1017 ಮಹಿಳೆಯರು ಸೇರಿದಂತೆ ಒಟ್ಟು 2020 ಮತದಾರರಿದ್ದಾರೆ. 4 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ವಾರ್ಡ್ ನಂ.21ರಲ್ಲಿ 1011 ಪುರುಷ, 1036 ಮಹಿಳೆಯರು ಸೇರಿದಂತೆ ಒಟ್ಟು 2047 ಮತದಾರರಿದ್ದಾರೆ. 3 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.ವಾರ್ಡ್ ನಂ.22ರಲ್ಲಿ 1178 ಪುರುಷ, 1184 ಮಹಿಳೆಯರು ಸೇರಿದಂತೆ ಒಟ್ಟು 2362 ಮತದಾರರಿದ್ದಾರೆ. 4 ಮತಗಟ್ಟೆಗಳನ್ನು ತೆರೆಯಲಾಗಿದೆ. ವಾರ್ಡ್ ನಂ.23ರಲ್ಲಿ 709 ಪುರುಷ, 719 ಮಹಿಳೆಯರು ಸೇರಿದಂತೆ ಒಟ್ಟು 1428 ಮತದಾರರಿದ್ದಾರೆ. ವಾರ್ಡ್ ನಂ.24ರಲ್ಲಿ 820 ಪುರುಷ, 762 ಮಹಿಳೆಯರು ಸೇರಿದಂತೆ ಒಟ್ಟು 1582 ಮತದಾರರಿದ್ದು, 3 ಮತಗಟ್ಟೆ ಸ್ಥಾಪಿಸಲಾಗಿದೆ.
ವಾರ್ಡ್ ನಂ.25ರಲ್ಲಿ 1018 ಪುರುಷ, 1048ಮಹಿಳೆಯರು ಸೇರಿದಂತೆ ಒಟ್ಟು 2066 ಮತದಾರರಿದ್ದಾರೆ. 4 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ವಾರ್ಡ್ ನಂ. 26ರಲ್ಲಿ 847 ಪುರುಷ, 817 ಮಹಿಳೆಯರು ಸೇರಿದಂತೆ ಒಟ್ಟು 1664 ಮತದಾರರಿದ್ದಾರೆ. 4 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ವಾರ್ಡ್ ನಂ.27ರಲ್ಲಿ 1113 ಪುರುಷ, 1160 ಮಹಿಳೆಯರು ಸೇರಿದಂತೆ ಒಟ್ಟು 2273 ಮತದಾರರಿದ್ದಾರೆ. 3 ಮತಗಟ್ಟೆಗಳನ್ನು ತೆರೆಯಲಾಗಿದೆ.
ವಾರ್ಡ್ ನಂ.28ರಲ್ಲಿ 1158 ಪುರುಷ, 1087 ಮಹಿಳೆಯರು ಸೇರಿದಂತೆ ಒಟ್ಟು 2245 ಮತದಾರರಿದ್ದಾರೆ. 4. ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ವಾರ್ಡ್ ನಂ.29ರಲ್ಲಿ 1086 ಪುರುಷ, 1050 ಮಹಿಳೆಯರು ಸೇರಿದಂತೆ ಒಟ್ಟು 2136 ಮತದಾರರಿದ್ದಾರೆ. 3 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ವಾರ್ಡ್ ನಂ.30ರಲ್ಲಿ 975 ಪುರುಷ, 1045 ಮಹಿಳೆಯರು ಸೇರಿದಂತೆ ಒಟ್ಟು 2020 ಮತದಾರರಿದ್ದಾರೆ. 3 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ವಾರ್ಡ್ ನಂ.31ರಲ್ಲಿ 1353 ಪುರುಷ, 1449 ಮಹಿಳೆಯರು ಸೇರಿದಂತೆ ಒಟ್ಟು 2802 ಮತದಾರರಿದ್ದಾರೆ. 5.ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ವಾರ್ಡ್ ನಂ.32ರಲ್ಲಿ 864 ಪುರುಷ, 831 ಮಹಿಳೆಯರು ಸೇರಿದಂತೆ ಒಟ್ಟು 1695 ಮತದಾರರಿದ್ದಾರೆ. 2 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.ವಾರ್ಡ್ ನಂ.33ರಲ್ಲಿ 826 ಪುರುಷ, 835 ಮಹಿಳೆಯರು ಸೇರಿದಂತೆ ಒಟ್ಟು 1661 ಮತದಾರರಿದ್ದಾರೆ. 2 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ವಾರ್ಡ್ ನಂ. 34ರಲ್ಲಿ 1642 ಪುರುಷ, 1768 ಮಹಿಳೆಯರು ಸೇರಿದಂತೆ ಒಟ್ಟು 3410 ಮತದಾರರಿದ್ದಾರೆ. 4 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ವಾರ್ಡ್ ನಂ.35ರಲ್ಲಿ 1254 ಪುರುಷ, 1280 ಮಹಿಳೆಯರು ಸೇರಿದಂತೆ ಒಟ್ಟು 2534 ಮತದಾರರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

