ಹಾಸನ

ಮುತುಗದಹೊಸೂರು: # 2.19 ಕೋಟಿ ಕಾಮಗಾರಿಗೆ ಚಾಲನೆ

Published On :

ರಾಮನಾಥಪುರ: ಸಮೀಪದ ದೊಡ್ಡಮಗ್ಗೆ ಹೋಬಳಿಯ ವಿವಿಧ ಗ್ರಾಮಗಳ ಎಸ್‌ಸಿ ಕಾಲೋನಿಗಳ ಚರಂಡಿ ಹಾಗೂ ರಸ್ತೆ ಎಸ್‌ಸಿಪಿ ಹಾಗೂ ಟಿಎಸ್‌ಪಿ ಯೋಜನೆ ಕಾಮಗಾರಿಗಳಿಗೆ 2.19 ಕೋಟಿ ರು. ವೆಚ್ಚದ ಕಾಮಗಾರಿಗಳಿಗೆ ಗುರುವಾರ ಚಾಲನೆ ಶಾಸಕ ಎ. ಮಂಜು ನೀಡಿದರು.
ಮುತಗದಹೊಸೂರು ಕಾಲೋನಿಯಲ್ಲಿ 15 ಲಕ್ಷ ರು. ವೆಚ್ಚದಲ್ಲಿ ಎಸ್‌ಪಿ ರಸ್ತೆ ಹಾಗೂ ಸಿಸಿ ಚರಂಡಿಗಳ ಯೋಜನೆಗಳ ನಾನಾ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ  ಅವರು ಮಾತನಾಡಿದರು.
ಅಗ್ರಹಾರ ಗ್ರಾಮದ ಕಾಲೋನಿಯ ಚರಂಡಿ ಹಾಗೂ ರಸ್ತೆಗೆ 8 ಲಕ್ಷ ರು, ಬೇಲಿಕರ್ಪೂರವಳ್ಳಿ ಕಾಲೋನಿಯ ಚರಂಡಿ ಹಾಗೂ ರಸ್ತೆಗೆ 18 ಲಕ್ಷ ರು, ಕೋಟೆಕಪೂರವಳ್ಳಿ ಗ್ರಾಮದ ಕಾಲೋನಿಗೆ 20 ಲಕ್ಷ ರು, ಅಂಕನಹಳ್ಳಿ ಗ್ರಾಮದ ಎಸ್.ಸಿ. ಬೀದಿಗೆ ಚರಂಡಿ ಹಾಗೂ ರಸ್ತೆ ಕಾಮಗಾರಿಗೆ 9.98 ಲಕ್ಷ ರು, ಇಬ್ಬಡಿ ಗ್ರಾಮದ ಎಸ್.ಸಿ. ಚರಂಡಿ ಹಾಗೂ ರಸ್ತೆಗೆ 15 ಲಕ್ಷ ರು, ಇಬ್ಬಡಿ ಕೆರೆ ಅಭಿವೃದ್ಧಿ ಕಾಮಗಾರಿಗೆ 40 ಲಕ್ಷ ರು, ವಡ್ಡರಹಳ್ಳಿ ಗ್ರಾಮದ ಎಸ್.ಸಿ. ಬೀದಿಗೆ 15 ಲಕ್ಷ ರು, ಯಲಕತವಳ್ಳಿ ಚರಂಡಿ ಹಾಗೂ ರಸ್ತಯ ಕಾಮಗಾರಿಗೆ 14 ಲಕ್ಷ ರು. ಅಜ್ಜೂರು ಬಾರೆಯ ಎಸ್.ಸಿ. ಬೀದಿಗೆ 11 ಲಕ್ಷ ರು, ಅಜ್ಜೂರು ಕೆರೆ ಅಭಿವೃದ್ಧಿಗೆ 30.57ಲಕ್ಷ ರು, ಇಳ್ಳಳ್ಳಿ ಗ್ರಾಮದ ಶಾಲೆಗೆ 4.6ಲಕ್ಷ ರು, ಶಾನುಬೋಗನಹಳ್ಳಿ ಶಾಲೆಗೆ 4.6 ಲಕ್ಷ ರು, ಕಾರಹಳ್ಳಿ ಶಾಲೆಗೆ 4.6 ಲಕ್ಷ ರು ಶಾಲೆಗಳ ಉದ್ಘಾಟನೆಗೆ ಶಾಸಕರು ಚಾಲನೆ ನೀಡಿದರು.
ಕಾಮಗಾರಿಗಳನ್ನು ಉತ್ತಮ ರೀತಿಯಲ್ಲಿ ನಡೆಸುವಂತೆ ಗುತ್ತಿಗೆದಾರರಿಗೆ ತಿಳಿಸಿ, ಗ್ರಾಮಸ್ಥರು ಸಹ ಉತ್ತಮ ರೀತಿ ಕಾಮಗಾರಿಗಳ ಬಗ್ಗೆ ಎಚ್ಚರ ವಹಿಸಿ ಎಂದು ಶಾಸಕ ಮಂಜು ಹೇಳಿದರು. ಗ್ರಾಪಂ ಸದಸ್ಯ ವೀರಚಾರ್, ಮುಖಂಡ ನಾಗರಾಜು, ರಂಗರಾಜ್, ಚನ್ನೇಗೌಡ, ನಾಗರಾಜು, ಪುರುಷೋತ್ತಮ್, ಬಸವರಾಜ್, ಬಸವಯ್ಯ, ರಾಮಯ್ಯ ನೀರಾವರಿ ಅಧಿಕಾರಿ ಮಲ್ಲಿಕಾರ್ಜುನಸ್ವಾಮಿ ಮುಂತಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.