ಹಾಸನ

9, 10ನೇ ವಾರ್ಡಿನಲ್ಲಿ ಬಿಜೆಪಿ ಪ್ರಚಾರ ಶುರು

Published On :

ಬೇಲೂರು: ಪಟ್ಟಣದ ಪುರಸಭೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸ್ವಚ್ಛ, ಪಾರದರ್ಶಕ ಆಡಳಿತ,ದಿನದ 24 ಗಂಟೆಯೂ ಕುಡಿಯಲು ಶುದ್ಧ ನೀರು ಪೂರೈಸುವುದಾಗಿ ತಾ.ಬಿಜೆಪಿ ಅಧ್ಯಕ್ಷ ಬೆಣ್ಣೂರು ರೇಣುಕುಮಾರ್ ಹೇಳಿದರು.
ಪಟ್ಟಣದ ಶ್ರೀ ಚನ್ನಕೇಶವಸ್ವಾಮಿ ದೇಗುಲ ಮುಂಭಾಗ 9 ಮತ್ತು 10 ನೇ ವಾರ್ಡಿನ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಳೆದ 5 ವರ್ಷದ ಬಿಜೆಪಿ ಆಡಳಿತದಲ್ಲಿ ಕರ್ನಾಟಕ ಹಿಂದೆಂದೂ ಕಾಣದಂತಹ  ಅಭಿವೃದ್ಧಿ ಕಂಡಿರುವುದು ರಾಜ್ಯದ ಜನತೆಗೆ ತಿಳಿದಿದೆ. ಪಟ್ಟಣದಲ್ಲಿ ಹಲವಾರು ವರ್ಷಗಳಿಂದ ಜೆಡಿಎಸ್, ಕಾಂಗ್ರೆಸ್ ಆಡಳಿತ ನಡೆಸಿದ್ದು ಪ್ರವಾಸಿ ಕೇಂದ್ರದ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎಂದರು. ಚನ್ನಕೇಶವಸ್ವಾಮಿ ದೇಗುಲದ 300 ಮೀ. ಹಾಗೂ 100 ಮೀ. ಸಮಸ್ಯೆ ಕಳೆದೆರಡು ದಶಕಗಳಿಂದ ಇದ್ದು ಇಲ್ಲಿ ವಾಸಿಸುತ್ತಿರುವ ಜನತೆ ಭಯದ ನೆರಳಲ್ಲೇ ಜೀವನ ದೂಡುತ್ತಿದ್ದು ಇದುವರೆವಿಗೂ ಶಾಶ್ವತ ಪರಿಹಾರ ರೂಪಿಸುವಲ್ಲಿ ಪುರಸಭೆಯಲ್ಲಿ ಆಡಳಿತ ನಡೆಸಿದ ಪಕ್ಷಗಳು ವಿಫಲವಾಗಿದೆ. ಬಿಜೆಪಿಯನ್ನು ಪುರಸಭೆಯಲ್ಲಿ ಅಧಿಕಾರಕ್ಕೆ ತಂದರೆ ದೇಗುಲ ಜಾಗದ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.
ಎಪಿಎಂಸಿ ಅಧ್ಯಕ್ಷ, ಜಿಪಂ ಸದಸ್ಯ ಈಚಲಹಳ್ಳಿ ಲಕ್ಷ್ಮಣ್ ಮಾತನಾಡಿ, ಈ ಬಾರಿ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಮಹತ್ವವಾದ ಪಾತ್ರವನ್ನು ವಹಿಸಲಿದ್ದು ಅಚ್ಚರಿಯ ಫಲಿತಾಂಶವನ್ನು ನೀಡುತ್ತದೆ. ಪಟ್ಟಣದಲ್ಲಿ ಉದ್ಯಾನವನ ಅಭಿವೃದ್ಧಿ ಪಡಿಸುವುದು, ಹಿಂದೂ ರುದ್ರಭೂಮಿ ಅಭಿವೃದ್ಧಿ, ಪಟ್ಟಣದ ಮುಖ್ಯ ರಸ್ತೆಯಲ್ಲಿ ಶೌಚಾಲಯಗಳ ನಿರ್ಮಾಣ ಸೇರಿದಂತೆ  ಇತರೆ ನಾಗರೀಕ ಸೌಲಭ್ಯ ನೀಡುವುದಾಗಿ ತಿಳಸಿದರು. ತಾ. ಬಿಜೆಪಿ ಉಪಾಧ್ಯಕ್ಷ ಕೋಟೆ ಶ್ರೀನಿವಾಸ್, ದೇವಪ್ರಸಾದ್, ಕಾರ್ಯದರ್ಶಿ ಚಂದ್ರಶೇಖರ್, 9 ನೇ ವಾರ್ಡಿನ ಬಿಜೆಪಿ ಅಭ್ಯರ್ಥಿ ಸಿನಿಮಾ ರಾಮಸ್ವಾಮಿ ಪುತ್ರ ವಿಜಯಕೇಶವ, 10 ನೇ ವಾರ್ಡಿನ ವಿಶಾಲಾಶ್ರಿ, 14 ನೇ ವಾರ್ಡಿನ ರಾಜಶೇಖರ್, 20 ನೇ ವಾರ್ಡ್ ಚಂದ್ರಶೇಖರ್, 2 ನೇ ವಾರ್ಡು ರಾಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.