ಕನ್ನಡದಲ್ಲಿ ಲಯನ್ಸ್ನ ಎಲ್ಲಾ ಕಾರ್ಯಕ್ರಮ: ಎಂ.ಬಿ. ಸದಾಶಿವ
ಸಕಲೇಶಪುರ: ಮಾತೃಭಾಷೆಯಲ್ಲಿ ಅಕ್ಷರ ಕಲಿಸುವ ಮೂಲಕ ಸಮಾಜದಲ್ಲಿ ಅನಕ್ಷರತೆ ತೊಡೆದು ಹಾಕಿ ಸಮಾಜ ಸೇವೆ ಮಾಡುವ ನಿಟ್ಟಿನಲ್ಲಿ ಲಯನ್ಸ್ ಈ ವರ್ಷ ಸಂಸ್ಧೆಯ ಎಲ್ಲಾ ಕ್ಲಬ್ಗಳಲ್ಲಿ ಕನ್ನಡದಲ್ಲಿಯೇ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಸಂಸ್ಥೆಯ ಗೌರ್ವನರ್ ಎಂ.ಬಿ.ಸದಾಶಿವ ತಿಳಿಸಿದ್ದಾರೆ.
ಸ್ಧಳೀಯ ಲಯನ್ಸ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅರ್ಹ ಫಲಾನುಭವಿಗಳಿಗೆ ಸೇವೆ ತಲುಪಿದಾಗ ಮಾತ್ರ ಸಾರ್ಥಕವಾಗುವುದು ಎಂದರು. ಸ್ಧಳೀಯ ಲಯನ್ಸ್ ಸಂಸ್ಧೆ ಅಧ್ಯಕ್ಷ ದಿನೇಶ್ ಮಾತನಾಡಿ ಸಕಲೇಶಪುರ ಸುತ್ತಮುತ್ತಲಿನ ಗ್ರಾಮೀಣ ವಿದ್ಯಾಲಯ ಗಳಿಗೆ ಬಿಸಿಯೂಟ ಕಾರ್ಯಕ್ರಮಗಳಿಗೆ ನೆರವಾಗಿ ತಟ್ಟೆ, ಲೋಟ ವಿತರಿಸಲಾಗಿದೆ ಎಂದರು. ಉಚಿತ ಆರೋಗ್ಯ ಶಿಬಿರ, ಆಯುಷ್ ಚಿಕಿತ್ಸಾ ಶಿಬಿರ,ಮತ್ತು ರಕ್ತದಾನ ಶಿಬಿರ ಈ ವರ್ಷದಲ್ಲಿ ನಡೆಸಲಾಗಿದೆ ಎಂದರು. ಜಿಲ್ಲಾ ಸಮಿತಿ ಸದಸ್ಯ ತಿಮ್ಮಪ್ಪ ರೈ, ಶಿವಪ್ರಸನ್ನ ಇದ್ದರು.
ಬೈಕ್ ಡಿಕ್ಕಿ: ಪಾದಚಾರಿ ಮಹಿಳೆ ಸಾವು
ಸಕಲೇಶಪುರ: ಬೈಕ್ ಡಿಕ್ಕಿ ಪರಿಣಾಮ ಪಾದಚಾರಿ ಮಹಿಳೆ ಸಾವನ್ನಪ್ಪಿರುವ ಘಟನೆ ಪಟ್ಟಣದಲ್ಲಿ ಸೋಮವಾರ ನಡೆದಿದೆ. ಪಟ್ಟಣ, ಚಂಪಕನಗರ ವಾಸಿ ಸುನಂದ (42) ಸಾವನ್ನಪ್ಪಿದ ದುರ್ದೈವಿ.
ಸುನಂದ ಅವರು ಬಿ.ಎಂ.ರಸ್ತೆ ರಂಗನಾಥ ಸ್ಟೋರ್ ಬಳಿ ರಸ್ತೆಯ ಎಡಭಾಗದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹೊಂಡಾ ಆಕ್ಟೀವಾ ಬೈಕ್ನ ಚಾಲಕಿ ನಿರ್ಲಕ್ಷ್ಯತೆಯಿಂದ ಡಿಕ್ಕಿ ಮಾಡಿದ ಪರಿಣಾಮ ತೀವ್ರ ಗಾಯವಾಗಿದ್ದು, ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರ ಸಲಹೆ ಮೇರೆಗೆ ಹಾಸನ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸುನಂದ ಸಾವನ್ನಪ್ಪಿದ್ದಾರೆ.
ಅಶೋಕ ರವರು ಸಕಲೇಶಪುರ ನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ವ್ಯಕ್ತಿ ನಾಪತ್ತೆ
ಹಾಸನ: ತಾಲೂಕಿನ ಕಸಬಾ ಹೋಬಳಿ, ಮಗ್ಗನಹಳ್ಳಿ ಗ್ರಾಮದ ಶಕುನಿಗೌಡ (76) ಮನೆಯಿಂದ ಆಸ್ಪತ್ರೆಗೆ ಹೋಗುವುದಾಗಿ ಹೇಳಿ ಹೋದವರು ವಾಪಸ್ ಮನೆಗೆ ಬಾರದೆ ಕಾಣೆಯಾಗಿದ್ದಾರೆ.ಚಹರೆ 5.6 ಅಡಿ ಎತ್ತರ, ಕನ್ನಡ ಮಾತನಾಡುತ್ತಾರೆ, ಮನೆಯಿಂದ ಹೋಗುವಾಗ ತುಂಬು ತೋಳಿನ ಬಿಳಿ ಶರ್ಟ್ ಧರಿಸಿದ್ದರು.ಪುತ್ರ ವಾಸು ಹಾಸನ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಮೂವರು ಯುವತಿಯರು ನಾಪತ್ತೆ
ಹಾಸನ: ತಾಲೂಕಿನ ಕಟ್ಟಾಯ ಹೋಬಳಿ, ಬನವಾಸೆ ಗ್ರಾಮದ ಸಣ್ಣಪ್ಪ ರವರ ಪುತ್ರಿ ಚೈತ್ರ(19) ಮನೆಯಿಂದ ಹೊರಗೆ ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿದ್ದಾಳೆ. ಚಹರೆ 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಮನೆಯಿಂದ ಹೋಗುವಾಗ ಕೆಂಪು ಬಣ್ಣದ ಚೂಡಿದಾರ ಧರಿಸಿರುತ್ತಾಳೆ.ತಂದೆ ಸಣ್ಣಪ್ಪ ರವರು ಗೊರೂರು ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಹೊಳೆನರಸೀಪುರ ತಾಲೂಕಿನ ದೊಡ್ಡಕಾಡನೂರು ಗ್ರಾಮದ ಶ್ರೀನಿವಾಸಮೂರ್ತಿ ರವರ ಪುತ್ರಿ ವಿನುತಾ(21) ಮನೆಯಿಂದ ಕಾಲೇಜಿಗೆ ಹೋಗುವುದಾಗಿ ಹೇಳಿ ಹೋದವಳು ವಾಪಸ್ಮ್ನೆಗೆ ಬಾರದೆ ಕಾಣೆಯಾಗಿದ್ದಾಳೆ.ಚಹರೆ 5 ಅಡಿ ಎತ್ತರ, ದುಂಡು ಮುಖ, ಸಾಧಾರಣ ಮೈ ಕಟ್ಟು, ಮನೆಯಿಂದ ಹೋಗುವಾಗ ಬಿಳಿ ಬಣ್ಣದ ಚೂಡಿದಾರ ಧರಿಸಿರುತ್ತಾಳೆ.ತಂದೆ ಶ್ರೀನಿವಾಸ ಮೂರ್ತಿ ಹೊಳೆನರಸೀಪುರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಚಿಕ್ಕಮಗಳೂರು ತಾಲೂಕಿನ ಅಂಬಳೆ ಹೋಬಳಿ, ತಗಡೂರು ಗ್ರಾಮದ ನಿಂಗೇಗೌಡ ರವರ ಪುತ್ರಿ ಆಶಾ(22) ಮನೆಯಿಂದ ಸಂಬಂಧಿಕರ ಮನೆಗೆ ಹಬ್ಬಕ್ಕೆ ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿದ್ದಾಳೆ.ಚಹರೆ 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣ ಮೈಕಟ್ಟು, ಕನ್ನಡ ಮತ್ತು ಇಂಗ್ಲೀಷ್ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ಬಿಳಿ ಬಣ್ಣದ ಚೂಡಿದಾರ ಧರಿಸಿರುತ್ತಾಳೆ. ತಮ್ಮ ಅಶೋಕ ಬೇಲೂರು ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ವ್ಯಕ್ತಿ ನಾಪತ್ತೆ
ಹಾಸನ: ತಾಲೂಕಿನ ಶಾಂತಿಗ್ರಾಮ ಹೋಬಳಿ, ಸಾತೇನಹಳ್ಳಿ ಗ್ರಾಮದ ಕರಿಗೌಡ (55) ಮನೆಯಿಂದ ಹೊರಗೆ ಹೋದವರು ವಾಪಸ್ ಮನೆಗೆ ಬಾರದೆ ಕಾಣೆಯಾಗಿದ್ದಾರೆ.ಚಹರೆ ಎಣ್ಣೆಗೆಂಪು ಬಣ್ಣ, ಕನ್ನಡ ಮಾತನಾಡುತ್ತಾರೆ.
ಮನೆಯಿಂದ ಹೋಗುವಾಗ ತುಂಬು ತೋಳಿನ ಬಿಳಿ ಶರ್ಟ್ ಲುಂಗಿ ಪಂಚೆ, ಹಸಿರು ಬಣ್ಣದ ಟರ್ಕಿ ಟವೆಲ್ಹೊದ್ದಿದ್ದರು. ಪುತ್ರ ಕುಮಾರಸ್ವಾಮಿ ಶಾಂತಿಗ್ರಾಮ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಬಾಲಕ ನಾಪತ್ತೆ
ಚನ್ನರಾಯಪಟ್ಟಣ: ತಾಲೂಕಿನ ಮಟ್ಟನವಿಲೆ ಅಂಚೆ, ಮಾದಿಹಳ್ಳಿ ಗ್ರಾಮದ ರಾಮೇಗೌಡ ರವರ ಪುತ್ರ ಕಿರಣ್(17) ಚನ್ನರಾಯಪಟ್ಟಣ ನಗರದ ಆದಿಚುಂಚನಗಿರಿ ಐಟಿಐ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಕಾಲೇಜಿನಿಂದ ಹೋದವನು ವಾಪಸ್ ಮನೆಗೆ ಬಾರದೆ ಕಾಣೆಯಾಗಿದ್ದಾನೆ.
ಚಹರೆ 5 ಅಡಿ ಎತ್ತರ, ಗೋದಿ ಮೈ ಬಣ್ಣ, ಉದ್ದ ಮುಖ, ಸಾದಾರಣ ಮೈ ಕಟ್ಟು, ಮನೆಯಿಂದ ಹೋಗುವಾಗ ಸಿಮೆಂಟ್ ಬಣ್ಮದ ಕಾಲೇಜಿನ ಸಮವಸ್ತ್ರ ಧರಿಸಿದ್ದರು. ತಂದೆ ರಾಮೇಗೌಡ ಚನ್ನರಾಯಪಟ್ಟಣ ನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಸೇವಾ ಮನೋಭಾವ ಬೆಳೆಸಿಕೊಳ್ಳಲು ಸಲಹೆ
ಆಲೂರು: ವಿದ್ಯಾರ್ಥಿಗಳು ಮಾನವೀಯ ಗುಣಗಳನ್ನು ಬೆಳೆಸಿ ಕೊಳ್ಳಬೇಕು ಎಂದು ಪಟ್ಟಣದ ಪ್ರಥಮ ದರ್ಜೆಕಾಲೇಜಿನ ಪ್ರಾಂಶುಪಾಲ ಸಿ.ಬಿ.ಚಂದ್ರಪ್ಪ ಹೇಳಿದರು.
ತಾಲೂಕಿನ ಸಿಂಗಾಪುರದಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೇವಾ ಮನೋಭಾವನೆ ರೂಢಿಸುವಲ್ಲಿ ಎನ್ಎಸ್ಎಸ್ ಸಹಕಾರಿ ಎಂದರು. ತಾಲ್ಲೂಕು ನಾಗರಿಕ ಹಿತರಕ್ಷಣೆ ವೇದಿಕೆ ಅಧ್ಯಕ್ಷ ಕೆ.ಎಸ್.ಮಂಜೇಗೌಡ ಮಾತನಾಡಿ ರಾಷ್ಟ್ರೀಯ ಸೇವಾ ಯೋಜ ನೆಯು ವಿದ್ಯಾರ್ಥಿಗಳಲ್ಲಿ ಸಮಯಪ್ರಜ್ಞೆ ನಾಯಕತ್ವ, ಸಹಬಾಳ್ವೆ,ಭಾವೈಕ್ಯ ಗುಣಗಳನ್ನು ಬಿತ್ತುತ್ತದೆ ಎಂದು ತಿಳಿಸಿದರು. ಜಿಪಂ ಸದಸ್ಯ ಪುರುಷೋತ್ತಮ್, ತಾಪಂ ಅಧ್ಯಕ್ಷೆ ಯಶೋಧಹರೀಶ್, ತಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಎಸ್.ಸಿ.ಕಾಂತರಾಜ್, ಗ್ರಾಪಂ ಸದಸ್ಯ ಡಿ.ಆರ್.ನಾಗರಾಜೇಗೌಡ, ಕಸಾಪ ತಾ. ಸದಸ್ಯ ಕೆ.ಕೆ.ಸಿದ್ದೇಗೌಡ ಮಾತಾಡಿದರು. ಎನ್ಎಸ್ಎಸ್ ಯೋಜನಾಧಿಕಾರಿ ಡಿ.ಕೆ.ಮಂಜಯ್ಯ, ಎಚ್.ಡಿ.ದೇವರಾಜ್ ಇದ್ದರು.
ತಂಬಾಕು ಮಾರುಕಟ್ಟೆ ಹರಾಜು ಅಧೀಕ್ಷಕರಿಗೆ ಬೀಳ್ಕೊಡುಗೆ
ರಾಮನಾಥಪುರ: ಇಲ್ಲಿನ ತಂಬಾಕು ಮಂಡಳಿಯ ಪ್ಲಾಟ್ ಫಾರಂ ನಂ 63 ಹರಾಜು ಅಧೀಕ್ಷಕ ಉಮಾ ಮಹೇಶ್ವರರಾವ್ ಇಲ್ಲಿಂದ ಆಂಧ್ರಕ್ಕೆ ವರ್ಗಾವಣೆಗೊಂಡಿದ್ದು, ಅವರನ್ನು ಸನ್ಮಾನಿಸಿ, ಬೀಳ್ಕೊಡುಗೆ ನೀಡಲಾಯಿತು.
ರಾಜ್ಯ ರೈತ ಸಂಘ ತಾಲೂಕು ಮುಖಂಡ ಹೊ.ತಿ.ಹುಚ್ಚಪ್ಪ ಮಾತನಾಡಿ, ತಂಬಾಕು ಮಂಡಳಿ ಪ್ಲಾಟ್ ಫಾರಂ ನಂ 63 ಅಧೀಕ್ಷಕರಾಗಿ ಉಮಾ ಮಹೇಶ್ವರರಾವ್ ಬಂದಾಗಿನಿಂದಲೂ ತಂಬಾಕು ಬೆಲೆಯಲ್ಲಿ ನೊಂದ ಎಷ್ಟೋ ರೈತರಿಗೆ ಉತ್ತಮ ಬೆಲೆ ದೊರಕುವಂತೆ ಮಾಡಿ ಸಹಕರಿಸುತ್ತಾ ರೈತರಿಗೆ ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹ ನೀಡಿ, ಒಳ್ಳೆಯ ಅಧಿಕಾರಿ ಎನಿಸಿಕೊಂಡಿದ್ದರೆ. ಅವರ ವರ್ಗಾವಣೆಯಿಂದ ರೈತರಿಗೆ ಬೇಸರ ಉಂಟಾಗಿದೆ ಎಂದ ಅವರು ರಾವ್ ಅವರ ಕಾರ್ಯ ದಕ್ಷತೆ ಬಗ್ಗೆ ಪ್ರಶಂಸಿಸಿ ಗೌರವಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ತಾಲೂಕು ಕಾರ್ಯಾದ್ಯಕ್ಷ ಹೆಚ್.ಇ.ಜಗದೀಶ್, ಸ್ವಾಮಿ, ಗೋವಿಂದರಾಜು, ಸೋಮೇಶ್, ಕರಿಯಪ್ಪ, ಬಿಳಗುಲಿ ರಾಜು, ರಮೇಶ್, ಸುದರ್ಶನ್ ಲಕ್ಷಣರಾವ್, ಉಮೇಶ್, ರಂಗೇಗೌಡ, ಅನೀಫ್ ಇತರರು ಇದ್ದರು.
ಸಕಲೇಶ್ವರಸ್ವಾಮಿ ವೈಭವದ ಬ್ರಹ್ಮರಥೋತ್ಸವ
ಸಕಲೇಶಪುರ: ಗ್ರಾಮ ದೇವತೆ ಸಕಲೇಶ್ವರಸ್ವಾಮಿಯ ದಿವ್ಯ ಬ್ರಹ್ಮ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ಅದ್ಧೂರಿಯಾಗಿ ಜರುಗಿತು.
ಸಕಲೇಶ್ವರಸ್ವಾಮಿಗೆ ಮಂಜಾನೆ 8.30 ರಿಂದ ಆರಂಭವಾದ ಪಂಚಾಮಣತ ಅಭಿಷೇಕ ಹಾಗೂ ಪೂಜಾ ವಿಧಿ-ವಿಧಾನ ಶಾಸ್ತ್ರೋಕ್ತವಾಗಿ ಜರುಗಿದ ನಂತರ 11 ಕ್ಕೆ ಪಟ್ಟಣದ ಬ್ರಾಹ್ಮಣರ ಬೀದಿಯಿಂದ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಪಟ್ಟಣದ ಮುಖ್ಯಬೀದಿಯಲ್ಲಿ ಸಾಗಿದ ಪುಷ್ಪಕಣಂತ ರಥೋತ್ಸವಕ್ಕೆ ಸಾವಿರಾರು ಜನ ಹಣ್ಣುಕಾಯಿ ಸಮರ್ಪಿಸಿ ಕಣರ್ತತರಾದರು ಸಂಜೆ 4 ಕ್ಕೆ ಪಟ್ಟಣದ ಪುರಭವನದ ಸಮೀಪದವರಗೆ ಎಳೆದು ತರಲಾದ ರಥವನ್ನು ಸಾವಿರಾರರು ಜನರು ಕಣ್ತುಂಬಿಕೊಂಡರು.
ರಥೋತ್ಸವದಲ್ಲಿ ಕೊಂಬು ಕಹಳೆ, ನಂದಿದ್ವಜ, ಜನರ ಮನಸೊರೆಗೊಂಡವು. ರಥೋತ್ಸವದ ಅಂಗವಾಗಿ ಪಟ್ಟಣದಲ್ಲಿ ಹಬ್ಬದ ಕಳೆ ಮೂಡಿತ್ತು, ಮುಖ್ಯ ಬೀದಿಗೆ ಪುರಸಭೆ ನೀರು ಹಾಕಿದ್ದರೆ ಭಕ್ತರು ರಂಗೋಲಿ ಬಿಡಿಸುವ ಮೂಲಕ ತಳಿರು ತೊರಣ ಕಟ್ಟುವ ಮೂಲಕ ಶಣಂಗರಿಸಿದ್ದರು,ಪಟ್ಟಣದ ವಿವಿಧ ಸಂಘ,ಸಂಸ್ಥೆಗಳು ಹಾಗೂ ವರ್ತಕರು ಉಚಿತ ಮಜ್ಜಿಗೆ ವ್ಯವಸ್ಥೆ ಹಾಗೂ ಪ್ರಸಾದ ವ್ಯವಸ್ಥೆ ಮಾಡಿದ್ದರು.
ರಥೋತ್ಸವ ಮುಖ್ಯಬೀದಿಯಲ್ಲಿ ಸಾಗಿದ್ದರಿಂದ ಪಟ್ಟಣದಲ್ಲಿ ಮುಂಜಾನೆಯಿಂದ ಸಂಜೆವರಗೆ ವಿದ್ಯುತತ್ನಿಲುಗಡೆಮಾಡಲಾಗಿತ್ತು. ಹಾಗೂ ವಾಹನ ಸಂಚಾರ ವ್ಯವಸ್ಥೆಯನ್ನು ಅಜಾದ್ ರಸ್ತೆ ಹಾಗೂ ಅಶೋಕ ರಸ್ತೆಯ ಮೂಲಕ ಕಲ್ಪಿಸಲಾಗಿತ್ತು. ರಥೋತ್ಸವದ ನೇತೃತ್ವವನ್ನು ನಂದಿ ಕೃಪರಾಜು, ಟಿಂಬರ್ ಸುರೇಶ್, ಎಸ್.ಡಿ ಸುರೇಶ್, ರವಿಕುಮಾರ್, ಮುಡ್ಲ ಮಹೇಶ್ ವಹಿಸಿದ್ದರು.
ವಿದ್ಯಾರ್ಥಿಗಳ ಸಮಸ್ಯೆ ಕುರಿತು ಸಂವಾದ
ಹಾಸನ: ನಗರದ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು ಹಾಗೂ ಹಾಸನ ಹೇಮಾವತಿ ಮಹಿಳಾ ಸಂಘದ ಆಶ್ರಯದಲ್ಲಿ ಫೆ. 27 ರಂದು ಬೆಳಗ್ಗೆ 10 ಕ್ಕೆ ಕಾಲೇಜು ಸಭಾಂಗಣದಲ್ಲಿ ವಿದ್ಯಾರ್ಥಿಗಳ ಸಮಸ್ಯೆ ಕುರಿತು ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಸುಧಾ ವಾರಪತ್ರಿಕೆಯ ಸಹ ಸಂಪಾದಕ ಬಿ.ಎಂ. ಹನೀಫ್ ಉದ್ಘಾಟಿಸುವರು. ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲ ಡಾ ಐ.ಎಂ.ಮೋಹನ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಯಾಗಿ ಸಾಹಿತಿ ಬಾನುಮುಷ್ತಾಕ್, ಡಾ.ಅಶೋಕಗೌಡ, ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ.ಎ.ಎಲ್. ಮುರುಳೀಧರ್, ಮೈತ್ರೇಯ ಮಹಿಳಾ ವೇದಿಕೆಯ ಪ್ರೊ. ಲಲಿತಾದೇವಿ, ಪ್ರೊ. ಲೀಲಾವತಿ ಭಾಗವಹಿಸುವರು.
ಮೂಢನಂಬಿಕೆ ಕುರಿತು ಉಪನ್ಯಾಸ ಇಂದು
ಗಂಡಸಿ: ಹಾಸನ ತಾಲೂಕಿನ ಗಂಡಸಿಯ ಪುಷ್ಪರವಿ ಕೈಗಾರಿಕಾ ತರಬೇತಿ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಅಂಗವಾಗಿ ದುದ್ದ ಹೋಬಳಿ ಅರಸೀಹಳ್ಳಿಯಲ್ಲಿ ಫೆ. ಬುಧವಾರ ಸಂಜೆ 6 ಗಂಟೆಗೆ ಮೂಢನಂಬಿಕೆ ಮತ್ತು ವೈಜ್ಞಾನಿಕ ಮನೋಧರ್ಮ ಕುರಿತು ವಿಶೇಷ ಉಪನ್ಯಾಸ ಏರ್ಪಡಿಸಲಾಗಿದೆ.
ಕಿರಿಯ ತರಬೇತಿ ಅಧಿಕಾರಿ ಅಹಮದ್ ಉದ್ಘಾಟಿಸುವರು. ಕಿರಿಯ ತರಬೇತಿ ಅಧಿಕಾರಿ ಶಿವಣ್ಣ ಅಧ್ಯಕ್ಷತೆ ವಹಿಸುವರು.
ಗ್ರಾಮದ ಮುಖಂಡರಾದ ಧರ್ಮಪ್ಪ, ಪ್ರಕಾಶ್, ವಾಸು, ರಮೇಶ, ವಾಸು ಮೊದಲಾದ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಶಿಬಿರದ ಸಂಚಾಲಕರು ತಿಳಿಸಿದ್ದಾರೆ.
ಸಕಲೇಶ್ವರ ಸ್ವಾಮಿ ದಿವ್ಯ ರಥೋತ್ಸವ
ಸಕಲೇಶಪುರ: ಸರ್ವೈಶ್ವರ್ಯ ಪ್ರದಾಯಕ ಗ್ರಾಮದೇವತೆ ಶ್ರೀ ಸಕಲೇಶ್ವರ ಸ್ವಾಮಿಯ ದಿವ್ಯ ರಥೋತ್ಸವಕ್ಕೆ ಸೋಮವಾರ ನಾನಾ ಪೂಜಾ ವಿಧಿ ವಿದಾನಗಳೊಂದಿಗೆ ಚಾಲನೆ ನೀಡಲಾಯಿತು.
ಉತ್ಸವದ ಅಂಗವಾಗಿ ಶನಿವಾರದಿಂದಲೇ ನಾನಾ ಧಾರ್ಮಿಕ ಪೂಜೆಗಳು ದೇವರಿಗೆ ಅಲಂಕಾರ ಹೋಮ ಹವಿಸ್ಸು ಅರ್ಪಣೆ ನಡೆಯುತ್ತಿದೆ. ಸೋಮವಾರ ಬೆಳಗ್ಗೆ ಅರ್ಚಕರಿಂದ ವೇದ ಪಾರಾಯಣ, ಪೂರ್ವ ಪುಷ್ಪ ಗಂಧೋತ್ಸವದ ನಂತರ ರಥ ಸನ್ನಿಧಿ ಪೂಜೆ ನೆರವೇರಿಸಲಾಯಿತು.
ನಂತರ ಅಲಂಕರಿಸಿದ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿಯನ್ನು ಪೂಜಾ ವಿಧಿಗಳೊಂದಿಗೆ ಪ್ರತಿಷ್ಠಾಪಿಸಿ ದೇವಸ್ಧಾನಕ್ಕೆ ಪ್ರದಕ್ಷಿಣೆ ನಡೆಸಿ ಮ 12 ಗಂಟೆಗೆ ಅಭಿಜಿತ್ ಲಗ್ನದಲ್ಲಿ ಮೂರ್ತಿಯನ್ನು ಸರ್ವಾಲಂಕೃತ ದಿವ್ಯ ರಥದಲ್ಲಿ ಕುಳ್ಳಿರಿಸಿ ಸಾವಿರಾರು ಭಕ್ತರು ಭಕ್ತಿ ಪೂರ್ವಕವಾಗಿ ರಥ ಎಳೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.
ಶಾಸಕ ಎಚ್.ಕೆ ಕುಮಾರಸ್ವಾಮಿ, ತಹಸೀಲ್ದಾರ್ ಮಂಜುನಾಥ್, ಭಕ್ತ ಮಂಡಳಿ ಅಧ್ಯಕ್ಷ ನಂದಿ ಕೃಪ ರಾಜು ಪೂಜೆ ಸಲ್ಲಿಸಿದರು.
ಬೇಡನ್ ಪಾವೆಲ್ ಜನ್ಮದಿನಾಚರಣೆ
ಹೊಳೆನರಸೀಪುರ: ಪಟ್ಟಣದ ಚಿಟ್ಟನಹಳ್ಳಿ ಬಡಾವಣೆಯಲ್ಲಿನ ವೆಂಕಟೇಶ್ವರ ಎಜುಕೇಷನ್ ಟ್ರಸ್ಟಿನ ಶಾಲೆಯಲ್ಲಿ ಲಾರ್ಡ್ ಬೇಡನ್ ಪಾವೆಲ್ರ 156ನೇ ಹಾಗೂ ಅಲೇವ್ಲೇಡಿ ಪಾವೆಲ್ರ 124ನೇ ಜನ್ಮದಿನಾಚರಣೆ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಆರಕ್ಷ ವೃತ್ತ ನಿರೀಕ್ಷಕ ಗೋಪಾಲನಾಯಕ್ ಮಕ್ಕಳಲ್ಲಿ ಧೈರ್ಯ, ಸಾಹಸ ಮತ್ತು ಶೌರ್ಯಗಳ ಬಗ್ಗೆ ಮಕ್ಕಳಲ್ಲಿ ಸ್ಫೂರ್ತಿ ಉದಯಿಸಬೇಕಾದ ಅನಿವಾರ್ಯತೆ ವಿವರಿಸಿದರು. ಶೌರ್ಯವಂತ ವಿಚಾರವಂತ ಮತ್ತು ಸಾಹಸದಲ್ಲಿ ಭಾಗಿಯಾದ ಮಕ್ಕಳಿಗೆ ಸರ್ಕಾರ ನೀಡುವ ಪುರಸ್ಕಾರಗಳ ಬಗ್ಗೆ ಮಕ್ಕಳಿಗೆ ವಿವರಿಸಿದರು.
ಇದೇ ಸಂದರ್ಭದಲ್ಲಿ 6ಮಕ್ಕಳಿಗೆ ಸ್ಕೌಟ್ಸ್ ದೀಕ್ಷೆ ನೀಡಲಾಯಿತು. ಸ್ಕೌಟ್ಸ್ ತಾಲೂಕು ಕಾರ್ಯದರ್ಶಿ ನಾರಾಯಣಶೆಟ್ಟಿ ಸ್ಕೌಟ್ಸ್ ಮಹತ್ವ ಹಾಗೂ ಧ್ಯೇಯೋದ್ದೇಶಗಳ ಬಗ್ಗೆ ಮಾಹಿತಿ ನೀಡಿದರು. ಮುಖ್ಯೋಪಾಧ್ಯಾಯ ಚಂದ್ರಶೇಖರ್ ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲೆಯಲ್ಲಿ ಸ್ಕೌಟ್ಸ್ ಘಟಕವನ್ನು ಆರಂಭಿಸುವುದಾಗಿ ತಿಳಿಸಿದರು.
ಶಾಲೆಯ ಸ್ಕೌಟ್ಸ್ನ ಗೈಡ್ ಕ್ಯಾಪ್ಟನ್ ಆರ್.ಕುಮುದ ಮಕ್ಕಳಿಗೆ ಸ್ಕೌಟ್ಸ್ನ ಉಗಮ ಹಾಗೂ ನಡೆದು ಬಂದ ದಾರಿಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

