ಹಾಸನ

ಹೊಸ ಮತದಾರರ ಪೂರಕ ಪಟ್ಟಿಯಲ್ಲಿ ಅವ್ಯವಹಾರ: ದೂರು

Published On :

ಆಲೂರು: ಹೊಸ ಮತದಾರರ 6ನೇ ಪೂರಕ ಪಟ್ಟಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ತಾಲೂಕು ಜನತಾದಳ(ಎಸ್) ಅಧ್ಯಕ್ಷ  ಕೆ.ಎಸ್.ಮಂಜೇಗೌಡ ತಹಸೀಲ್ದಾರ್ಗೆ ದೂರು ನೀಡಿದ್ದಾರೆ.
  ದೂರಿನಲ್ಲಿ 26-02-2013 ರಂದು ಮತದಾರರ ಹೊಸ ಪಟ್ಟಿ ಪರಿಶೀಲಿಸಲಾಗಿ ಅವ್ಯವಹಾರ ಕಂಡು ಬಂದಿದ್ದು 1ನೇ ವಾರ್ಡಿನಿಂದ 11 ನೇ ವಾರ್ಡಿನ ಪೂರಕ ಪಟ್ಟಿಯಲ್ಲಿ ಲೋಪಗಳಿವೆ. ಕಾನೂನು ವಿರುದ್ದವಾಗಿ ಅವ್ಯವಹಾರ ನಡೆದಿದೆ ಎಂದು ತಿಳಿಸಿದ್ದಾರೆ.
 ಲೋಪ ದೋಷ ಕಂಡುಬಂದತಹ ಮತದಾರರ ಪಟ್ಟಿಯನ್ನು ಕೈ ಬಿಟ್ಟು ಕ್ರಮಬಧ್ದವಾಗಿದ್ದರೆ ಅಂತಹವನ್ನು ಸೇರಿಸಿಕೊಳ್ಳಲು ನಮ್ಮ ಅಭ್ಯಂತರವಿಲ್ಲ. ಕಾನೂನಿಗೆ ವಿರುದ್ಧವಾಗಿ ಮತದಾರರ ಪಟ್ಟಿ ತಯಾರಾಗಿದ್ದಲ್ಲಿ ಇದರ ವಿರುದ್ದ ಕಾನೂನು ಬದ್ಧ ಹೋರಾಟ ನಡೆಸುತ್ತೇವೆ. ಈಗಿನ ಚುನಾವಣೆಯನ್ನು ಚುನಾವಣಾ ನೀತಿ ಸಂಹಿತೆ ಜಾರಿ ಹಿಂದಿನ ಪಟ್ಟಿಯಂತೆಯೇ ಮತದಾರರ ಗುರುತಿನ ಚೀಟಿಯಂತೆ ನಡೆಸಬೇಕೆಂದು ಮನವಿ ಪತ್ರ ಸಲ್ಲಿಸಿದ್ದಾರೆ.
  ನಂತರ ತಹಶೀಲ್ದಾರರ ಬಳಿ  ವಾಗ್ವಾದ ನಡೆಸಿ, ಪ.ಪಂ.ಅಧ್ಯಕ್ಷರಿಗೆ ವಾಸಸ್ಥಳ ದೃಢೀಕರಣ ಪತ್ರ ನೀಡಲು ಸಹಿ ಮಾಡುವ ಅಧಿಕಾರವಿಲ್ಲ, ಮುಖ್ಯಾಧಿಕಾರಿಗಳಿಗೆ ಮಾತ್ರ ಈ ಅಧಿಕಾರವಿದ್ದು, ಪಪಂ ಕೆಲವು ಅಧಿಕಾರಿಗಳ ಸಹಿಯನ್ನು ಪೋರ್ಜರಿ ಮಾಡಿ ವಾಸ ಸ್ಥಳ ದೃಢೀಢೀಕರಣ ಪತ್ರವನ್ನು ನೀಡಲಾಗಿದೆ.ಈ ಸಹಿ ಪೋರ್ಜರಿಯೆಂದು ಕಂಡುಬಂದಲ್ಲಿ ಅಂತಹವರ ವಿರುಧ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕು.
  ಕಣತೂರು ಗ್ರಾ.ಪಂ.ವ್ಯಾಪ್ತಿಯ ಮರಸು ಹೊಸಳ್ಳಿ ಗ್ರಾಮಗಳ ಕೆಲವು ಮತದಾರರನ್ನು, ಹಾಗೆಯೇ ಕೆಲವು ಬೇರೆ ಊರುಗಳ ಕಾಲೇಜು ಮಕ್ಕಳನ್ನು ಪಟ್ಟಣ ಪಂಚಾಯ್ತಿಯ ಮತದಾರರ ಪಟ್ಟಿಗೆ ಸೇರಿಸಲಾಗಿದೆ.ಪಟ್ಟಣ ಪಂಚಾಯ್ತಿಯ ವ್ಯಾಪ್ತಿಯಲ್ಲಿ ವಾಸವಿರುವವರಿಗೆ ಕಾನೂನು ಬದ್ದವಾಗಿ ಮತದಾನದ ಹಕ್ಕನ್ನು ನೀಡಬೇಕು.
 ತಹಸೀಲ್ದಾರರು ಆಯೋಗದ ನಿರ್ದೇಶನದಂತೆ 16-01-2013 ರಿಂದ 23-02-2013 ರವರೆಗೆ ಈ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅವಕಾಶವಿತ್ತು.
 ಈಗಲೂ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಾಗಿನಿಂದಲೂ 6-7-8-8ಎ ಅರ್ಜಿಸಲ್ಲಿಸಲು ಅವಕಾಶವಿದ್ದು ಅವರ ಖಚಿತ ಮಾಹಿತಿ ಪಡೆದು ವಿಳಾಸ ಪರಿಶೀಲಿಸಿ ರಾಜಕೀಯ ಪಕ್ಷಗಳ ಒಪ್ಪಿಗೆ ಪಡೆದು ಅದನ್ನು ಎ.ಸಿ.ಯವರಿಗೆ ಅನುಮೋದನೆಗೆ ಕಳುಹಿಸಲಾಗುವುದು, ನಕಲಿ ಪೋರ್ಜರಿ ಸಹಿಕಂಡು ಬಂದಲ್ಲಿ ಕ್ರಮ ಕೈಗೊಳ್ಳಲಾಗುವುದೆಂದು ಅವರು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.