ಹಾಸನ

ಕಾಫಿ ವ್ಯವಸಾಯದಲ್ಲಿ ಯಾಂತ್ರೀಕರಣಕ್ಕೆ ಬೆಂಬಲ ಯೋಜನೆ ಜಾರಿ

Published On :

ಹಾಸನ: ಕಾಫಿ ತೋಟಗಳ ನಿರ್ವಹಣೆಯ ಕಾರ್ಯಶಕ್ತಿ ಹೆಚ್ಚಿಸುವ ಹಾಗೂ ನಿರ್ವಹಣ ವೆಚ್ಚ ಕಡಿಮೆ ಮಾಡಲು ಕಾಫಿ ವ್ಯವಸಾಯದಲ್ಲಿ ಯಾಂತ್ರೀಕರಣಕ್ಕೆ ಬೆಂಬಲ ಎಂಬ ಯೋಜನೆ ಜಾರಿಗೆ ತರಲಾಗಿದೆ ಎಂದು ಕಾಫಿ ಮಂಡಳಿಯ ಜಂಟಿ ನಿರ್ದೇಶಕ ಎಂ.ಸಿ.ಪೊನ್ನಣ್ಣ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಫಿ ವ್ಯವಸಾಯದಲ್ಲಿ ಯಂತ್ರಗಳನ್ನು ಬಳಸಲು ಕಾಫಿ ಬೆಳೆಗಾರರಿಗೆ ಬೆಂಬಲ ನೀಡಲು ಈ ಯೋಜನೆ ಜಾರಿಗೆ ತರಲಾಗಿದೆ. ಕಾಫಿ ತೋಟದಲ್ಲಿ ಮಹತ್ವದ ಕೃಷಿ ಚಟುವಟಿಕೆಗಳನ್ನು ಸಕಾಲದಲ್ಲಿ ನಡೆಸಲು ಯಂತ್ರಗಳನ್ನು ಬಳಸಲು ಕಾಫಿ ಬೆಳೆಗಾರರಿಗೆ ಉತ್ತೇಜನ ನೀಡುವುದಾಗಿದೆ. ಕಾಫಿ ತೋಟಗಳಲ್ಲಿ ಪ್ರಸ್ತುತ ಕಾಣುತ್ತಿರುವ ಕೃಷಿ ಕಾರ್ಮಿಕರ ಕೊರತೆಯ ಹಿನ್ನೆಲೆಯಲ್ಲಿ ಕಾರ್ಮಿಕರ ಕಾರ್ಯ ದಕ್ಷತೆ ಮತ್ತು ಉತ್ಪಾದಕತೆಯ ಸುಧಾರಣೆಗಾಗಿ ಯಾಂತ್ರೀಕರಣ ಮಹತ್ವಗೊಳಿಸಿದೆ ಎಂದು ಹೇಳಿದರು.
ಕಾಫಿ ತೋಟಗಳಲ್ಲಿ ಕಾರ್ಮಿಕ ಶ್ರಮವನ್ನು ಬಯಸುವ ಮಹತ್ವದ ಬೇಸಾಯ ಕಾರ್ಯ ಎಂದರೆ ಕಳೆ ಕೀಳುವುದು, ಕಾಫಿ ಗಿಡಗಳ ಕಪಾತು ಮತ್ತು ನೆರಳನ್ನು ಕ್ರಮಗೊಳಿಸುವುದು, ಕಾಫಿ ಗಿಡ ನೆಡಲು ಗುಂಡಿ ತೆಗೆಯುವುದು ಮತ್ತು ಮಣ್ಣಿನ ಬೇಸಾಯ ಮಾಡಲು ಹಾಗೂ ರೋಗರುಜಿನಗಳ ನಿಯಂತ್ರಣಕ್ಕಾಗಿ ಸಿಂಪರಣೆ ಮತ್ತು ಫಸಲಿನ ಕೊಯ್ಲುಗಳಾಗಿವೆ. ವ್ಯವಸಾಯಕ್ಕೆ ಸಾಕಷ್ಟು ಯಂತ್ರೋಪರಣಗಳು ಲಭ್ಯವಾಗುತ್ತಿದೆ. ಅದನ್ನು ಬಳಸಿಕೊಳ್ಳುವ ಮೂಲಕ ಕಾರ್ಮಿಕರ ಹಾಗೂ ಕೌಶಲ್ಯದ ಕೊರತೆಯನ್ನು ನೀಗಿಸಿಕೊಳ್ಳಬಹುದು ಎಂದು ವಿವರಿಸಿದರು.
ಭಾರತ ಸರ್ಕಾರ ಕಾಫಿ ತೋಟಗಳ ವ್ಯವಸಾಯದಲ್ಲಿ ಯಾಂತ್ರೀಕರಣದ ಬೆಂಬಲ ಎಂಬ ಹೊಸ ಯೋಜನೆಯನ್ನು 12ನೇ ಯೋಜನೆಯ ಅವಧಿಯಲ್ಲಿ ಜಾರಿಗೆ ತರಲು ಜ.31 ರಂದೇ ಅಂಗೀಕಾರ ನೀಡಿದೆ ಎಂದ ಅವರು, ಕಳೆ ತೆಗೆಯುವ ಯಂತ್ರ, ಬ್ಯಾಟರಿ ಚಾಲಿತ ಹಗುರ ತೂಕದ ಕೊಯ್ಲಿನ ಯಂತ್ರ, ದೂರಗಾಮಿ ಕಪಾತು ಮಾಡುವ ಯಂತ್ರ, ಆಧುನಿಕ ಸಿಂಪಡಣ ಯಂತ್ರ, ಗುಂಡಿ ತೆಗೆಯುವ ಯಂತ್ರ, ಟ್ರೈಲರ್ ರಹಿತ ಮತ್ತು ಸಹಿತ ಪವರ್ ಟಿಲ್ಲರ್, ಟ್ರೈಲರ್ ರಹಿತ ಮತ್ತು ಸಹಿತ ಮಿನಿ ಟ್ರ್ಯಾಕ್ಟರ್ ಇತ್ಯಾದಿ ಯಂತ್ರಗಳು ಲಭ್ಯವಿವೆ ಎಂದು ಹೇಳಿದರು.
ಬೆಳೆಗಾರರಿಗೆ ಅನ್ವಯಿಸುವ ಸಹಾಯಧನ ಪ್ರಮಾಣವು 20 ಹೆಕ್ಟೇರ್‌ವರೆಗಿನ ವಿಸ್ತೀರ್ಣದವರೆಗೆ ಶೇ.50ರಂತೆ 2 ಲಕ್ಷ ರು., 20 ಹೆಕ್ಟೇರ್ ಮೀರಿದ ಬೆಳೆಗಾರರಿಗೆ ಶೇ.25ರಂತೆ 4.5ಲಕ್ಷ ರು. ಹಾಗೂ ಸ್ವಸಹಾಯ ತಂಡಗಳು ಮತ್ತು ಸಣ್ಣ ಬೆಳೆಗಾರರ ಒಕ್ಕೂಟಗಳಿಗೆ ಶೇ.50ರಂತೆ 5 ಲಕ್ಷರು.ಗಳ ಸಹಾಯ ಧನ ನೀಡಲಾಗುತ್ತದೆ ಎಂದು ಹೇಳಿದರು. ಮಂಡಳಿ ನಿರ್ದೇಶಕ ಹೇಮಂತ್‌ಕುಮಾರ್, ಅನಂತ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.