ಹಾಸನ

ಮಾನವ ಸಂಪನ್ಮೂಲ ಸದ್ಬಳಕೆಯಿಂದ ರಾಷ್ಟ್ರದ ಅಭಿವೃದ್ಧಿ ಸಾಧ್ಯ: ಗುರೂಜಿ

Published On :

ಆಲೂರು: ರಾಷ್ಟ್ರದ ನಿಜವಾದ ಸಂಪತ್ತು ಮಾನವ ಸಂಪನ್ಮೂಲ. ಯಾವ ದೇಶದಲ್ಲಿ ಇದನ್ನು ಸದ್ಬಳಕೆ ಮಾಡಿಕೊಳ್ಳುತ್ತಾರೋ ಆ ರಾಷ್ಟ್ರ ಅಭಿವೃಧ್ಧಿಯಾಗುತ್ತದೆ ಎಂದು ಹಾಸನದ ಯೋಗ ಗುರು ಸುರೇಶ್‌ಗುರೂಜಿ ಹೇಳಿದರು.
ಅವರು ತಾಲೂಕಿನ ಸಿಂಗಾಪುರ ಗ್ರಾಮದಲ್ಲಿ ಆಲೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಏರ್ಪಡಿಸಿದ್ದ ಶಿಬಿರದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯ ಮತ್ತು ಸೇವಾ ಮನೊಭಾವ ಗುಣವಿದ್ದಾಗ ಮಾತ್ರ ಆರೋಗ್ಯ್ಯಕರ ಸಮಾಜದ ನಿರ್ಮಾಣ ಸಾಧ್ಯವೆಂದರು.
ಆಧುನಿಕತೆಯ ಭರಾಟೆಯಲ್ಲಿ ಮಾನವ ಯಾಂತ್ರೀಕತೆಯ ಜೀವನಕ್ಕೆ ಮಾರುಹೋಗಿ ತನ್ನ ಶಕ್ತಿ ಕಳೆದುಕೊಂಡಿದ್ದಾನೆ ಎಂದು ಗುರೂಜಿ ವಿಷಾದಿಸಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನಿರ್ದೇಶಕ ಕೆ.ಕೆ.ಸಿದ್ದೇಗೌಡ ಮಾತನಾಡಿ, ಶಿಬಿರಾರ್ಥಿಗಳು ರಾಷ್ಟ್ರ ಪ್ರೇಮ, ಶಿಸ್ತು,ಸಮಯ ಪ್ರಜ್ಞೆಯನ್ನು ಎನ್‌ಎಸ್‌ಎಸ್ ಮೂಲಕ ಪಡೆದು ಮೌಲ್ಯಯುತ ಬದುಕು ರೂಪಿಸಿಕೊಳ್ಳಲು ಸಲಹೆ ನೀಡಿದರು.
ಶಿಬಿರಾಧಿಕಾರಿ ಪ್ರೊ.ಡಿ.ಕೆ.ಮಂಜಯ್ಯ, ಸಹ ಶಿಭಿರಾಧಿಕಾರಿ ದೇವರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಪಂಚಾಯ್ತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ  ಎಸ್.ಪಿ.ಕಾಂತರಾಜ್, ಗ್ರಾಪಂ ಸದಸ್ಯ ನಾಗರಾಜೇಗೌಡ, ಪ್ರಕಾಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.