ಹಾಸನ

2013-14 ಬಜೆಟ್ ಮಾತು

Published On :

ಸುಧಾರಣೆ ಹಾಗೂ ಚುನಾವಣಾ ಸೂತ್ರಕ್ಕನುಗುಣವಾಗಿ ಬಜೆಟ್ ಮಂಡಿಸಲಾಗಿದೆ. ಕೃಷಿ ಮೂಲ ಸೌಕರ್ಯಗಳಿಗೆ ಇನ್ನಷ್ಟು ಹಣವನ್ನು ತೊಡಗಿಸಬಹುದಿತ್ತು ನೌಕರ ವರ್ಗಕ್ಕೆ ಬಜೆಟ್ ಕೊಡುಗೆ ಶೂನ್ಯ.
 ಡಾ. ಟಿ.ಎಸ್. ದೇವರಾಜ್, ಆರ್ಥಿಕ ತಜ್ಞರು

ಬೆಂಗಳೂರಿನಲ್ಲಿ ಕೈಗಾರಿಕೆ ಕಾರಿಡಾರ್ ಬಗ್ಗೆ ಬಜೆಟ್‌ನಲ್ಲಿ ಹೇಳಿರುವುದನ್ನು ಬಿಟ್ಟರೆ ಉಳಿದಂತೆ ಯಾವುದೇ  ಅನುಕೂಲಗಳು ಕಾಣುತ್ತಿಲ್ಲ. ಸಮತೋಲನ ಬಜೆಟ್ ಮಂಡಿಸಲಾಗಿದೆ.
- ಚ್.ಟಿ. ಚಂದ್ರಶೇಖರ್,  ಅಧ್ಯಕ್ಷರು, ಹಾಸನ ಜಿಲ್ಲಾ ವಾಣಿಜ್ಯ ಒಕ್ಕೂಟ

ಇದೊಂದು ಶ್ರೀಮಂತರು, ಕೈಗಾರಿಕೋದ್ಯಮಿಗಳ ಪರ ಬಜೆಟ್. ಡಿಸೇಲ್, ಪೆಟ್ರೋಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಣದಲ್ಲಿ ಇಡುವುದಕ್ಕೆ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ.
-  ಧರ್ಮೇಶ್,  ಸಿಐಟಿಯು ಕಾರ್ಯದರ್ಶಿ

ಕರ್ನಾಟಕ ಮತ್ತು ಕೇಂದ್ರದ ಚುನಾವಣೆ ಹತ್ತಿರದಲ್ಲಿ ಇಲ್ಲದಿದ್ದರೇ ಬೆಲೆ ಏರಿಕೆ ಸಿಕ್ಕಾಪಟ್ಟೆ ಇರುತ್ತಿತ್ತು. ವೈಯಕ್ತಿಕ ಆದಾಯ ಮಿತಿ ಹೆಚ್ಚಳ ಮಾಡಬಹುದಿತ್ತು.
- ನಾಗೇಂದ್ರ ಗುಪ್ತ. ಜಿಲ್ಲಾ ವಾಣಿಜ್ಯ ಒಕ್ಕೂಟ ನಿರ್ದೇಶಕರು

ರೈತರ ಬದುಕು ಹಸನು ಮಾಡುವ ಒಂದಂಶವೂ ಬಜೆಟ್‌ನಲ್ಲಿ ಇಲ್ಲ. ರಸಗೊಬ್ಬರಗಳಿಗೆ ಸಬ್ಸಿಡಿ ನೀಡಬೇಕಿತ್ತು. ಹಾಗೇ ಮಾಡದೇ ಕೈಗಾರಿಕೋದ್ಯಮಿಗಳು ಮತ್ತು ಕೈಗಾರಿಕೆಗಳ ಹಿತ ಕಾಯಲು ಬೇಕಾದ ಅಂಶಗಳನ್ನು ಮಾತ್ರ ಪ್ರಸ್ತಾಪಿಸಲಾಗಿದೆ.
- ಕಣಗಾಲ್ ಮೂರ್ತಿ, ರೈತ ಮುಖಂಡ.

ಹೊರದೇಶದಿಂದ ತರುವ ಚಿನ್ನದ ಪ್ರಮಾಣವನ್ನು 50 ಸಾವಿರ ರು. ನಿಂದ ಒಂದು ಲಕ್ಷ ರು.ಗೆ ಏರಿಸಿರುವುದು ಉತ್ತಮ ನಿರ್ಧಾರ. ಇದೇ ಸಂದರ್ಭದಲ್ಲಿ ಆಮದು ಮಾಡಿಕೊಳ್ಳುವ ಚಿನ್ನದ ಮೇಲಿನ ಸುಂಕವನ್ನು ಇಳಿಸಬೇಕಿತ್ತು.
- ಬಿ.ಎನ್. ಪ್ರಮೋದ್,  ಚಿನ್ನ ವರ್ತಕರು.

ಮ್ಯಾಜಿಕ್ ಬಜೆಟ್. ಆರ್ಥಿಕ ಸುಧಾರಣೆ ಸಂದರ್ಭದಲ್ಲಿ ದೇಶದ ಪ್ರಜೆಗಳ ತಲಾ ಆದಾಯ ಹೆಚ್ಚಿಸಲು ಬೇಕಾದ ಕ್ರಮ ತೆಗೆದು ಕೊಳ್ಳಬೇಕಿತ್ತು. ಹಾಗೇ ಮಾಡಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಲು ಮುಂದಾಗಬೇಕಿತ್ತು.
- ದಲೀಂ ಚಂದ್ ಜೈನ್,  ಉದ್ಯಮಿ.

ಸಂವಿಧಾನದ ಆಶಯ ಪ್ರಜಾಪ್ರಭುತ್ವದಿಂದ ಸಮಾಜವಾದದ ಕಡೆಗೆ ಹೋಗುವುದು. ಅದಕ್ಕಾಗಿ ಆರ್ಥಿಕ ಸಮಾನತೆ ಸಾಧಿಸಬೇಕು. ಕೇಂದ್ರ ಅತ್ತ ಗಮನಹರಿಸದೇ ಇರುವುದು ದುರದೃಷ್ಟಕರ.
- ಎಚ್.ಎ. ಕಿಶೋರ್‌ಕುಮಾರ್, ಅಧ್ಯಕ್ಷ, ಮಲೆನಾಡು ಹೋರಾಟ ಸಮಿತಿ.

ಅಕ್ಕಿ, ಗೋಧಿ ಮತ್ತಿತರ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರುತ್ತಿದೆ. ಕೆಜಿ ಅಕ್ಕಿ 50 ರು.ಗಿಂತ ಹೆಚ್ಚಾಗಿದೆ. ಗೃಹ ಪಯೋಗಿ ಅಡುಗೆ ಅನಿಲಗಳ ಸಂಖ್ಯೆಯನ್ನು  ಹೆಚ್ಚಿಸಿಲ್ಲ.
- ರೂಪ ಜಗದೀಶ್,  ಗೃಹಿಣಿ.

ದೇಶಾದ್ಯಂತ ಶೇ. 70 ರಷ್ಟು ಬಡ ಜನರು ಇದ್ದಾರೆ. ಈ ಹಿನ್ನೆಲೆಯಲ್ಲಿ ಅಕ್ಕಿ, ಗೋಧಿ ಮತ್ತಿತರ ವಸ್ತುಗಳ
ಬೆಲೆ ಇಳಿಸಬೇಕಿತ್ತು. ಾಗೇ ಮಾಡದೇ ಚಪ್ಪಲಿ, ಶೂ ಬೆಲೆಗಳನ್ನು ಇಳಿಸಿದರೆ ಪ್ರಯೋಜನವೇನು.
- ಜೋಸೆಫ್,  ಅಧ್ಯಕ್ಷ, ಮಾನವ ಹಕ್ಕುಗಳ ವಿಮೋಚನಾ ವೇದಿಕೆ,

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.