ಸಂಭ್ರಮದ ಈದ್ಮಿಲಾದ್
ಬೇಲೂರು: ಈದ್ಮಿಲಾದ್ ಅಂಗವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಶುಕ್ರವಾರ ಹಾಲು ಹಣ್ಣು
ಬ್ರೆಡ್ ವಿತರಿಸಲಾಯಿತು. ಪಟ್ಟಣದ ನೌ ಜವಾನ್ ಮಿಲಾದ್ ಸಂಘದಿಂದ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಾಲು ಹಣ್ಣು ವಿತರಿಸಲಾಯಿತು. ಸಂಘದ ಗೌರವಾಧ್ಯಕ್ಷ ಸೈಯದ್
ಶೌಫಿಕ್ ಮಾತನಾಡಿ, ಪ್ರವಾದಿ ಮಹಮದ್ ಪೈಗಂಬರರು ಸಮಾಜದಲ್ಲಿ ಎಲ್ಲರನ್ನೂ ಸರಿಸಮಾನವಾಗಿ ಕಾಣುವಂತೆ ಹಾಗೂ ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ನೀಡುವಂತೆ ಬೋಧಿಸಿದ್ದಾರೆ. ಸಂಘದಿಂದ ಶುಕ್ರವಾರ ಆಸ್ಪತ್ರೆಯಲ್ಲಿ ಹಾಲು, ಹಣ್ಣು ವಿತರಿಸಿದ ನಂತರ, ಅನಾಥಾಶ್ರಮಗಳಿಗೆ ಭೇಟಿ ನೀಡಿ ದವಸ ಧಾನ್ಯಗಳನ್ನು ನೀಡಲಾಗುವುದು ಎಂದರು. ಅಧ್ಯಕ್ಷ ಪರ್ವೀಜ್ ಪಾಷಾ, ಉಪಾಧ್ಯಕ್ಷ ತೌಫಿಕ್ ಅಹಮದ್, ಕಾರ್ಯದರ್ಶಿ ನಯಾಜ್ಪಾಷಾ, ಖಜಾಂಚಿ ಮುಜಾಹಿದ್ ಸಂಘದ ಸದಸ್ಯರು ಇದ್ದರು.
ವಿದ್ಯಾರ್ಥಿಗಳಿಗೆ ಸಿಹಿತಿಂಡಿ ವಿತರಣೆ: ಈದ್ ಮಿಲಾದ್ ಅಂಗವಾಗಿ ಸುನ್ನಿ ದಾವತ್ ಇಸ್ಲಾಮಿ ಸಂಘದಿಂದ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಸಿಹಿತಿಂಡಿಗಳನ್ನು ವಿತರಿಸಲಾಯಿತು. ಗುರುವಾರ ಪಟ್ಟಣದ ಉರ್ದು ಕಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ತೆರಳಿ ಮಕ್ಕಳಿಗೆ ಪುಸ್ತಕ, ಲೇಖನ ಸಾಮಾಗ್ರಿ ಮತ್ತು ಸಿಹಿತಿಂಡಿ ವಿತರಿಸಲಾಯಿತು.
ಫಾಜಿಲ್, ಶಫೀರ್ ಅಹಮದ್, ವಜೀರ್ ಅಹಮದ್, ಸಗೀರ್ ಅಹಮದ್, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.
ಅರಸೀಕೆರೆಯಲ್ಲಿ ಸಡಗರ
ಅರಸೀಕೆರೆ: ಪಟ್ಟಣದ ಮುಸ್ಲಿಂರು ಶುಕ್ರವಾರ ಈದ್ ಮಿಲಾದ್ ದಿನವನ್ನು ಸಡಗರ ಸಂಭ್ರಮದಿಂದ ಆಚರಿಸಿದರು. ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಹಲವು ರಸ್ತೆಗಳಲ್ಲಿ ಹಸಿರುತೋರಣ ಹಾಗೂ ಧ್ವಜಗಳಿಂದ ನವವಧುವಿನಂತೆ ಶೃಂಗರಿಸಿದ್ದರಲ್ಲದೆ ಟಿಪ್ಪುಸುಲ್ತಾನ್ ಭಾವಚಿತ್ರಗಳ ಫ್ಲೆಕ್ಸ್ಗಳು ರಾಷ್ಟ್ರೀಯ ಹೆದ್ದಾರಿ ನಡುವೆ ರಸ್ತೆಯುದ್ದಕ್ಕೂ ಗುರುವಾರ ಸಂಜೆಯೇ ಸಮಾಜದ ಯುವಕರು ಹಿರಿಯರ ಮಾರ್ಗದರ್ಶನದಲ್ಲಿ ಇಡೀ ರಾತ್ರಿ ಮಸೀದಿ ರಸ್ತೆ, ರೀಡಿಂಗ್ರೂಂ ರಸ್ತೆ, ಸಂತೆಪೇಟೆ, ಗಣಪತಿ ಪೆಂಡಾಲ್ ರಸ್ತೆ, ಬಿ.ಎಚ್. ರಸ್ತೆಗಳಲ್ಲಿ ಹಸಿರು ಧ್ವಜ ಮತ್ತು ಬಂಟಿಂಗ್ಸ್, ಪ್ಲೆಕ್ಸ್ಗಳಿಂದ ಅಲಂಕೃತಗೊಳಿಸಿದ್ದರು.
ಸಂಘದ ಕಾರ್ಯದರ್ಶಿ ನಿಜಾಂ ಉದ್ದೀನ್ ಮಾತನಾಡಿದರು. ಮದರಸ ಗುರು ಅಬ್ದುಲ್ ಖಾದರ್, ಅಧ್ಯಕ್ಷ ಯಾಸೀನ್, ಅಹಮದ್ ಇದ್ದರು. ನಂತರ ಪ್ರತಿವರ್ಷದಂತೆ ಸಂಘದ ಪದಾಧಿಕಾರಿಗಳು ಸರ್ಕಾರಿ ಆಸ್ಪತ್ರೆ ಸೇರಿದಂತೆ ಪಟ್ಟಣದ ಎಲ್ಲಾ ನರ್ಸಿಂಗ್ ಹೋಂಗಳ ರೋಗಿಗಳಿಗೆ ಹಾಗೂ ಬಂಧಿಖಾನೆಯಲ್ಲಿರುವ ಆರೋಪಿಗಳಿಗೆ ಹಣ್ಣು ಹಂಚಿದರು.
ಸಂಜೆ ಮಸೀದಿಗಳಲ್ಲಿ ಪ್ರಾರ್ಥನೆ ನಂತರ ಜಮಾತ್ಗುರು ನಜ್ಹೀಮ್ರುಜ್ಹ ಅವರೊಂದಿಗೆ ಸಮಿತಿ ಪದಾಧಿಕಾರಿಗಳು ಈದ್ಗಾ ಮೈದಾನಕ್ಕೆ ಮೆರವಣಿಗೆ ತೆರಳಿದರು. ಹಾಸನ ರಸ್ತೆ ರಾಷ್ಟ್ರೀಯ ಹೆದ್ದಾರಿಯ ಮೂಲಕ ಪೇಟೆಬೀದಿ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

