ಹಾಸನ

ಸರ್ಕಾರ ಬೀಳಿಸಲು ಮುಹೂರ್ತ ಫಿಕ್ಸ್ಆಗಿದ್ರೆ ಮೊದ್ಲೆ ಸ್ಪೀಕರ್ಗೆ ಪತ್ರ ಬರೀಬೇಕಿತ್ತು

Published On :

ಹಾಸನ: ರಾಜ್ಯ ಸರ್ಕಾರ ಬೀಳಿಸಲು ಜ್ಯೋತಿಷಿಗಳಿಂದ ಮುಹೂರ್ತ ಫಿಕ್ಸ್ ಮಾಡಿಸಿದ್ರೆ, ಮೊದಲೇ ಸ್ಪೀಕರ್ಗೆ ಪತ್ರ ಬರೆಯಬೇಕಿತ್ತು. ಹಾಗೆ ಮಾಡದೆ ಅನಗತ್ಯ ಟೀಕೆ ಮಾಡುವುದು ತರವಲ್ಲ ಎಂದು  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಅರವಿಂದ ಲಿಂಬಾವಳಿ, ಕೆಜೆಪಿ ಮುಖಂಡರನ್ನು ತರಾಟೆಗೆ ತೆಗೆದುಕೊಂಡರು.
 ಶಾಸಕರಿಗೆ ರಾಜಿನಾಮೆ ನೀಡಲು ಇಷ್ಟವಿಲ್ಲ. ಆದರೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಜಾತಿ ಮತ್ತಿತರ ಕಾರಣಗಳನ್ನು ಒಡ್ಡಿ ಬಲವಂತವಾಗಿ ರಾಜಿನಾಮೆ ಕೊಡಿಸುತ್ತಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕವೇ ಹೊರತು ಪೂರಕವಲ್ಲ.  ವಿಧಾನಸಭಾಧ್ಯಕ್ಷ ಬೋಪಯ್ಯ ನಿಗದಿತ ಕಾರ್ಯಕ್ರಮದಂತೆ ವಿದೇಶಕ್ಕೆ ಹೋಗಿದ್ದಾರೆ. ಆ ಬಗ್ಗೆ ರಾಜಕೀಯ ಕಾರಣಗಳಿಗಾಗಿ ಅನಗತ್ಯ ವಿವಾದ ಸೃಷ್ಟಿಸುತ್ತಿರುವುದು ಸರಿಯಲ್ಲ ಎಂದು ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.  ಕೆಜೆಪಿ ಮಂದಿ ಇನ್ನೆರಡು ದಿನ ಕಾಯುವ ವ್ಯವದಾನ ಬೆಳೆಸಿಕೊಳ್ಳಬೇಕು. ಅಲ್ಲಿಯವರೆಗೆ ಗಡಿಬಿಡಿ ಏಕೆ ಎಂದು ಕುಟುಕಿದ ಸಚಿವರು, ಸಂವಿಧಾನದಡಿ ಜನಪ್ರತಿನಿಧಿಗಳಾದವರು ಕಾರ್ಯ ನಿಮಿತ್ರ ವಿದೇಶಕ್ಕೆ ಹೋಗಿರುವ ಸ್ಪೀಕರ್ ಸ್ಥಾನಕ್ಕೆ ಚ್ಯುತಿ ತರುವಂಥಹ ಕಾರ್ಯ ಮಾಡಬಾರದು. ಅದನ್ನು ಜನತೆ ಸಹಿಸುವುದಿಲ್ಲ. ವೀಸಾ ಮತ್ತಿತರ ದಾಖಲೆ ಮಾಡಿಸಿಕೊಂಡೆ ಸ್ಪೀಕರ್ ವಿದೇಶಕ್ಕೆ ಹೋಗಿದ್ದಾರೆ. ದುರುದ್ದೇಶದಿಂದ ಹೋಗಿಲ್ಲ ಎಂದು ಸಚಿವರು ಸಮರ್ಥಿಸಿಕೊಂಡರು.
 ಕೇವಲ ತಂತ್ರಗಾರಿಕೆ, ಅಪಚಾರದಿಂದಲೆ ಅಧಿಕಾರಕ್ಕೆ ಬರುವುದಾಗಿ ತಿಳಿದುಕೊಂಡಿದ್ದರೆ ಅದು ಕೇವಲ ಭ್ರಮೆಯಾಗುತ್ತದೆ ಅಷ್ಟೇ. ಕೆಜೆಪಿಯ ಬ್ಲಾಕ್ಮೇಲ್ ತಂತ್ರಕ್ಕೆ ಬಿಜೆಪಿ ಬಗ್ಗುವುದಿಲ್ಲ. ಬಗ್ಗುವಂಥಹ ಕೆಲಸವನ್ನೂ  ಮಾಡಿಲ್ಲ ಎಂದು ಲಿಂಬಾವಳಿ ಹೇಳಿದರು.   

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.