ಹಾಸನ

ಕದಿಯಲು ಹೋಗಿ ಗೂಸಾ ತಿಂದ ಖದೀಮ: ಪೊಲೀಸ್ ವಶಕ್ಕೆ

Published On :

ಹಾಸನ: ಬ್ಯಾಂಕ್‌ನಿಂದ ಬ್ಯಾಗ್ ಹಿಡಿದು ಹೊರ ಬಂದ ವ್ಯಕ್ತಿ ಹಣ ತಂದಿದ್ದಾರೆ ಎಂದು ತಿಳಿದು ಹಣ ದೋಚಲು ಯತ್ನಿಸಿ ಸಾರ್ವಜನಿಕರಿಂದ ಗೂಸಾ ತಿಂದ ಖದೀಮನೊಬ್ಬ ಪೊಲೀಸರ ಅತಿಥಿಯಾದ ಘಟನೆ ಮಂಗಳವಾರನಗರದಲ್ಲಿ ನಡೆದಿದೆ.
ಆಂಧ್ರ ಮೂಲದ ರಮೇಶ್ (34) ಕಳ್ಳತನ ಮಾಡಲು ಮುಂದಾಗಿ ಸಾರ್ವಜನಿಕರಿಂದ ಗೂಸಾ ತಿಂದವನು. ತಣ್ಣೀರುಹಳ್ಳದ ಸೋಮಣ್ಣ ಎಂಬುವರು ನಗರದ ಹೃದಯ ಭಾಗದಲ್ಲಿ ಇರುವ ವಿಜಯಾ ಬ್ಯಾಂಕ್‌ನಲ್ಲಿ ಹಣ ಪಾವತಿಸಿ ಖಾಲಿ ಬ್ಯಾಗ್‌ನೊಂದಿಗೆ ಹೊರ ಬಂದರು.  
ಈ ಸಂದರ್ಭದಲ್ಲಿ ಹೊಂಚು ಹಾಕಿದ್ದ ರಮೇಶ್,ಸೋಮಣ್ಣ ಅವರ ಮೇಲೆ ತುರಿಕೆ ಉಂಟಾಗುವ ಪುಡಿ ಎರಚಿದ್ದಾನೆ.
 ನಂತರ ಸೋಮಣ್ಣ ತಮ್ಮ ಕಾರಿನಲ್ಲಿ ಹಾಸನಾಂಬ ದೇವಾಲಯದ ಹತ್ತಿರ ಬಂದು ಕಾರನ್ನು ನಿಲ್ಲಿಸಿ ವೈದ್ಯರ ಹತ್ತಿರ ತುರಿಕೆ ತೋರಿಸಲು ಬಂದರು.
ಈ ಸಂದರ್ಭದಲ್ಲಿ ರಮೇಶ ತನ್ನ ಸಹಚರರೊಂದಿಗೆ, ಸೋಮಣ್ಣ ಅವರನ್ನು ಹಿಂಬಾಲಿಸಿಕೊಂಡು ಬಂದು, ಕಾರಿನ ಗ್ಲಾಸ್ ಹೊಡೆದು ಕಳವು ಮಾಡಲು ಮುಂದಾದ. ಈ ಸಂದರ್ಭದಲ್ಲಿ ಅಲ್ಲಿದ್ದ ಸಾರ್ವಜನಿಕರು ಆತನನ್ನು ಹಿಡಿದುಕೊಂಡು ಹಿಗ್ಗಾಮಗ್ಗಾ ಥಳಿಸಿದ್ದಾರೆ. ನಂತರ ಆತನನ್ನು ನಗರದ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.          

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.