ತಾಲೂಕು ರಾಜಕೀಯ ಗ್ರಹಣ ಬಿಡಿಸುವೆ: ಯೋಗಾರವುಶ್
ಅರಕಲಗೂಡು: ತಾಲೂಕಿನಲ್ಲಿ ರಾಜಕೀಯ ಗ್ರಹಣ ಬಿಡಿಸುವ ಕಾಲ ಬಂದಿದೆ, ಹೊಸ ಮನ್ವಂತರಕ್ಕೆ ನಾನು ನಾಂದಿ ಹಾಡಲಿದ್ದೇನೆ. ಮುಂಬರುವ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿ ಎಂದು ಪೊಟ್ಯಾಟೋ ಕ್ಲಬ್ನ ಯೋಗಾ ರಮೇಶ್ ಹೇಳಿದ್ದಾರೆ.
ಸರ್ಕಾರಿ ಸೇವೆ ತ್ಯಜಿಸಿ ಹೊರಬಂದ ನಂತರ ಮೊದಲ ಬಾರಿಗೆ ಅರಕಲಗೂಡು ಪಟ್ಟಣದ ಹೊರವಲಯದಲ್ಲಿ ಬೃಹತ್ ರಾಜಕೀಯ ಸಮಾವೇಶ ನಡೆಸಿದ ಅವರು ಹಾಲಿ-ಮಾಜಿ ಶಾಸಕರ ವಿರುದ್ಧ ಹರಿಹಾಯ್ದರು. ಅಧಿಕಾರ ಹಿಡಿಯಲು ಪಕ್ಷಾಂತರ ಮಾಡಿರುವವರು ಕಳೆದ 15-20ವರ್ಷಗಳಿಂದ ರಾಜಕೀಯ ಮಾಡುತ್ತಾ ಬಂದಿದ್ದಾರೆ. ಆದರೆ ಅಭಿವೃದ್ಧಿ ಕುಂಠಿತವಾಗಿದ್ದು, ವೈಯಕ್ತಿಕ ಅಭಿವೃದ್ಧಿ ಮಾಡಿಕೊಳ್ಳುತ್ತಿದ್ದಾರೆ. ಸ್ವಾರ್ಥವೇ ಅವರಿಗೆ ಪ್ರಧಾನವಾಗಿದೆ ಎಂದರು.
ಪ್ರಾಮಾಣಿಕತೆ ರಾಜಕಾರಣ ಕೇವಲ ಬಾಯಿ ಮಾತಿನದ್ದೇ ವಿನಹ ಕೃತಿಯಲ್ಲಿಲ್ಲ. ಉದ್ಯೋಗ ಖಾತ್ರಿ ಹಗರಣದ ಬಗ್ಗೆ ಮಾತನಾಡುವವರು ಅವರ ಪಕ್ಷದಲ್ಲಿ ಎಂತಹ ಹಗರಣಗಳಿವೆ ಎಂಬುದನ್ನು ಮೊದಲು ಸರಿಪಡಿಸಿಕೊಳ್ಳಲಿ. ಜನರನ್ನು ಹೆಚ್ಚು ದಿನ ಮೋಸ ಮಾಡಲು ಸಾಧ್ಯವಿಲ್ಲ, ವಿನಾಕಾರಣ ಅಡ್ಡಿ ಆತಂಕಗಳನ್ನು ಒಡ್ಡದೇ ಹಾಲಿ-ಮಾಜಿಗಳು ನೇರವಾಗಿ ಚುನಾವಣೆಗೆ ಬರಲಿ ಎಂದು ಹೇಳಿದರು.
ಹಲವು ವರ್ಷಗಳಿಂದ ಅಧಿಕಾರದಲ್ಲಿದ್ದರೂ ಅಡಿಕೆ ಬೊಮ್ಮನಹಳ್ಳಿ ಹಾಗೂ ಕೆಂದಿಣ್ಣೆ ಏತನೀರಾವರಿ ಯೋಜನೆಗಳನ್ನು ಮಾಡಲಾಗಿಲ್ಲ. ತಾಲೂಕಿನ ಮುಖ್ಯ ರಸ್ತೆಗಳು ಹಾಗೂ ಗ್ರಾಮೀಣ ರಸ್ತೆಗಳು ಹಾಳುಬಿದ್ದಿವೆ. ಜನ ಅಭಿವೃದ್ದಿಯಿಲ್ಲದೇ ಕಂಗೆಟ್ಟಿದ್ದಾರೆ ಎಂದು ಹಾಲಿ ಶಾಸಕರನ್ನು ಕುರಿತು ನುಡಿದರು.
ಹೊಳೆನರಸೀಪುರದಿಂದ ಹಳ್ಳಿ ಮೈಸೂರನ್ನು ಕೈ ಬಿಟ್ಟ ಮೇಲೆ ಮತ್ತೆ ಅಲ್ಲಿಗೆ ಹೋಗಿ ಜನರೆದುರು ಕಣ್ಣೀರು ಸುರಿಸುವುದು ಸರಿಯೇ. ಅಲ್ಲಿಯ ಮತದಾರನ ಬಳಿ ಹೋಗಲು ಇವರಿಗೇನು ನೈತಿಕತೆ ಇದೆ ಎಂದು ಸಂಸದ ದೇವೇಗೌಡರ ವಿರುದ್ಧವೂ ಕಟಕಿಯಾಡಿದ ಯೋಗಾರವುಶ್ ಜನರ ಸೇವೆಗಾಗಿ ನಾನು ಸರ್ಕಾರಿ ಸೇವೆಯನ್ನು ತ್ಯಜಿಸಿ ಬಂದಿದ್ದೇನೆ ಎಂದರು.
ತಾಲೂಕಿನಲ್ಲಿ ಮೂರನೇ ರಾಜಕೀಯ ಶಕ್ತಿಯಾಗಿ ಪೊಟ್ಯಾಟೋ ಕ್ಲಬ್ ಸವಾಲು ಹಾಕಲಿದೆ. ನಾನಾಗಿ ಯಾರ ಬಳಿಯೂ ಪಕ್ಷದ ಟಿಕೆಟ್ ಕೇಳುವುದಿಲ್ಲ. ಪಕ್ಷೇತರನಾಗಿ ಚುನಾವಣೆ ಎದುರಿಸುತ್ತೇನೆ ಎಂದರು.
ಸೇರ್ಪಡೆ: ಸಮಾವೇಶದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಹಲವು ಮುಖಂಡರು ಪೊಟ್ಯಾಟೋ ಕ್ಲಬ್ಗೆ ಸೇರ್ಪಡೆ ಗೊಂಡರು.
ಕಾಂಗ್ರೆಸ್ ಮುಖಂಡರಾದ ಚನ್ನಕೇಶವೇಗೌಡ, ಗಂಜಲಗೋಡು ಜಯರಾಂ, ಹೆಗ್ಗಡಿಹಳ್ಳಿ ಹನುಮೇಗೌಡ, ತಾಪಂ ಮಾಜಿ ಅಧ್ಯಕ್ಷ ಜೆಡಿಎಸ್ನ ಮಾದೇಶ್, ಪಾರ್ವತಿ ಸಂಜೀವ ನಾಯಕ್, ತಾಪಂ ಮಾಜಿ ಅಧ್ಯಕ್ಷೆ ಗೌರಮ್ಮ, ಮಾಜಿ ಸದಸ್ಯರಾದ ಗಾಯಿತ್ರಿ ಸೇರಿದಂತೆ ಹಲವು ಮಂದಿ ಗ್ರಾಮ ಪಂಚಾಯ್ತಿ ಮುಖಂಡರು ಪೊಟ್ಯಾಟೋ ಕ್ಲಬ್ಗೆ ಸೇರ್ಪಡೆಗೊಂಡರು.
ಕಾರ್ಯಕ್ರಮಕ್ಕೆ 150ಕ್ಕೂ ಹೆಚ್ಚು ಖಾಸಗಿ ವಾಹನಗಳಲ್ಲಿ ಸುಮಾರು 6-7ಸಾವಿರ ಜನ ಜಮಾಯಿಸಿದ್ದರು.
ಸಮಾವೇಶದ ವೇದಿಕೆಯಲ್ಲಿ ಪೊಟ್ಯಾಟೋ ಕ್ಲಬ್ ಮುಖಂಡರಾದ ದೊಡ್ಡಮಗ್ಗೆ ರಾಜೇಂದ್ರ, ಮುತ್ತಿಗೆ ರಾಜೇಗೌಡ, ತಾಜೀಂ ಪಾಶ, ಸಿ.ಕೆ. ಮೂರ್ತಿ, ಕಂಚೇನಹಳ್ಳಿ ಶ್ರೀನಿವಾಸ, ಸತ್ಯನಾರಾಯಣ, ಜಯಪ್ಪ, ನಳಿನಿ ಮತ್ತಿತರರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

