ಯಡಿಯೂರಪ್ಪ ದುರಂತ ನಾಯಕ: ಸಚಿವ ಸಿ.ಟಿ.ರವಿ
ಹಾಸನ: ಹೊಸ ಪಕ್ಷ ಕೆಜೆಪಿ ಕಟ್ಟಿದ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ನಿರೀಕ್ಷಿತ ಜನ ಬೆಂಬಲ ಸಿಗದ ಕಾರಣ, ಹತಾಶರಾಗಿ ವ್ಯಾಘ್ರನಂತೆ ವರ್ತಿಸುತ್ತಿದ್ದಾರೆ ಮಾತ್ರವಲ್ಲ, ಯಡಿಯೂರಪ್ಪ ತಮ್ಮದೇ ವರ್ತನೆಯಿಂದಲೇ ದುರಂತ ನಾಯಕರಾಗುತ್ತಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ ಮೂದಲಿಸಿದ್ದಾರೆ.
ಈ ಸಂಬಂಧ ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಗೆ ಪರ್ಯಾಯ ನಾಯಕರಾಗಲಿದ್ದಾರೆ ಅನ್ನೋ ಕಾರಣಕ್ಕೆ ತಾವು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಜಗದೀಶ್ ಶೆಟ್ಟರ್ ಅವರು ಮಂತ್ರಿಯಾಗುವುದನ್ನು ತಪ್ಪಿಸಿದ ಅವರು, ಈಗ ಜಗದೀಶ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಗಾದಿಯಿಂದ ಕೆಳಗಿಳಿಸಲು ಶತ ಪ್ರಯತ್ನ ಮಾಡುತ್ತಿದ್ದಾರೆ ಎಂದು ಗುಡುಗಿದರು.
ಜನತೆ ಕ್ಷಮಿಸುವುದಿಲ್ಲ: ನಾಡಿನ ಜನತೆ ರಾಜಕೀಯವಾಗಿ ಪ್ರಜ್ಞಾವಂತರಾಗಿದ್ದು, ಯಡಿಯೂರಪ್ಪ ಅವರ ಹಠಮಾರಿತನ, ದ್ವೇಷ ಮತ್ತು ಜಾತಿವಾದವನ್ನು ಸಾರಸಗಟಾಗಿ ತಿರಸ್ಕರಿಸಲಿದ್ದಾರೆ. ಮಾತ್ರವಲ್ಲ, ನಾಡಿನ ಜನತೆ ಯಡಿಯೂರಪ್ಪ ಅವ ರನ್ನು ಎಂದಿಗೂ ಕ್ಷಮಿಸುವುದಿಲ್ಲ. ಇಲ್ಲಸಲ್ಲದೆ ಸದಾನಂದಗೌಡರು, ಈಶ್ವರಪ್ಪ, ಅನಂತ್ಕುಮಾರ್ಸೇರಿದಂತೆ ಇತರರು ತಮಗೆ ದ್ರೋಹ ಬಗೆದರು ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಆದರೆ ಯಾರೂ ಅವರಿಗೆ ಮೋಸ ಮಾಡಿಲ್ಲ. ಸಮ್ಮಿಶ್ರ ಸರ್ಕಾರ ಇದ್ದ ಸಂದರ್ಭದಲ್ಲಿ ಸಿಎಂ ಮತ್ತು ಡಿಸಿಎಂ ಸ್ಥಾನ ಬಂದಾಗ ಎಲ್ಲರು ಯಡಿಯೂರಪ್ಪ ಹೆಸರನ್ನೇ ಸೂಚಿಸಿದ್ದೇವು ಇದನ್ನು ಅವರು ನೆನಪಿಸಿಕೊಳ್ಳಲಿ ಎಂದು ಚುಚ್ಚಿದರು.
ವೈಯಕ್ತಿಕ ಕಾರಣಕ್ಕೆ ಅಧಿಕಾರಭಂಗ: ಯಡಿಯೂರಪ್ಪ ತಮ್ಮ ವೈಯಕ್ತಿಕ ಕಾರಣದಿಂದ ಅಧಿಕಾರದಿಂದ ಕಳೆದುಕೊಂಡರೆ ಹೊರತು, ಯಾರು ಅವರ ಕಾಲೆಳೆಯುವಂತಹ ಕಾರ್ಯ ಮಾಡಿಲ್ಲ. ಅಲ್ಲದೆ ಕಾಲೆಳೆಯುವವರಿಗೆ ರಾಜಕಾರಣದಲ್ಲಿ ಮನ್ನಣೆ ಸಿಗುವುದಿಲ್ಲ. ದಬ್ಬಾಳಿಕೆ, ತಂತ್ರಗಾರಿಕೆಯನ್ನು ಯಡಿಯೂರಪ್ಪ ನಡೆಸುತ್ತಿದ್ದು, ಅದನ್ನು ಜನರು ಒಪ್ಪುವುದಿಲ್ಲ ಎಂದರು.
ಸ್ಪೀಕರ್ ವಿವೇಚನೆಗೆ: ಶಾಸಕರ ರಾಜಿನಾಮೆ ವಿಚಾರ ಸ್ಪೀಕರ್ ವಿವೇಚನೆಗೆ ಬಿಟ್ಟಿದ್ದು ಎಂದ ಸಚಿವರು, ಯಾವುದೇ ಪರಿಸ್ಥಿತಿ ಎದುರಿಸಲು ಬಿಜೆಪಿ ಸಿದ್ಧವಾಗಿದೆ. ರಾಜ್ಯಪಾಲರು ವಿಶ್ವಾಸಮತ ಸಾಬೀತು ಪಡಿಸಿ ಎಂದರೆ ಅದಕ್ಕೂ ಸಿದ್ಧ ಎಂದು ಈ ಸಂದರ್ಭದಲ್ಲಿ ಸಚಿವ ಸಿ.ಟಿ.ರವಿ ಸ್ಪಷ್ಟಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

