ಹಾಸನ

ರಸ್ತೆ ಅಗಲೀಕರಣ ಸರ್ವೆಗೆ ಚಾಲನೆ

Published On :

ಬೇಲೂರು: ಪಟ್ಟಣದ ಮುಖ್ಯರಸ್ತೆ ಅಗಲೀಕರಣ ಗೊಳಿಸುವ ಹಿನ್ನೆಲೆಯಲ್ಲಿ ರಸ್ತೆ ಸರ್ವೆ ಕಾರ್ಯಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.
ಪಟ್ಟಣದ ಮೂಲಕ ರಾಷ್ಟ್ರೀಯ ಹೆದ್ದಾರಿ ರಸ್ತೆ ಹಾದು ಹೋಗುವುದರಿಂದ ಈಗಿರುವ ರಸ್ತೆ ಅಗಲೀಕರಣ ಮಾಡುವ ಹಿನ್ನೆಲೆಯಲ್ಲಿ ಆಳೆತೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಆಳತೆ ಬಗ್ಗೆ ಮತ್ತೊಮ್ಮೆ ಸಭೆ ಕರೆಯುವುದಾಗಿ ಪುರಸಭೆ ಅಧ್ಯಕ್ಷ ತೊ.ಚ ಅನಂತಸುಬ್ಬರಾಯ ತಿಳಿಸಿದರು.
ಬಗೆಹರಿದ ಗೊಂದಲ: ಮುಖ್ಯರಸ್ತೆ ಅಗಲಗೊಳಿಸುವ ಬಗ್ಗೆ ಆದೇಶ ಬಂದಾಗಿನಿಂದ ಸಾರ್ವಜನಿಕ ವಲಯದಲ್ಲಿ ಉಹಾಪೋಹ ಉಂಟಾಗಿತ್ತು. ಒಮ್ಮೆ ಮಧ್ಯರಸ್ತೆಯಿಂದ ಎರಡೂ ಕಡೆ ಸೇರಿ 160 ಅಡಿ ಎಂದರೆ, ಕೆಲ ದಿನಗಳ ನಂತರ ಎರಡೂ ಕಡೆ 140 ಅಡಿ ಎನ್ನುವುದು, ಮತ್ತೆ ಅಲ್ಲ 120 ಅಂತಿಮವಾಗಿದೆ. ಎನ್ನುವ ಮೂಲಕ ಸಾರ್ವಜನಿಕರಲ್ಲಿ ನಿಖರ ಅಳತೆ ಏನು ಎಂಬುದರ ಬಗ್ಗೆ ಗೊಂದಲ ಉಂಟಾಗಿ ನಮ್ಮ ಮನೆ ಮಠಗಳ ಕಥೆ ಏನಪ್ಪಾ ಎಂಬ ಚಿಂತೆ ಕಾಡುತ್ತಿತ್ತು.
ಈ ನಿಟ್ಟಿನಲ್ಲಿ ರಸ್ತೆ ಎರಡೂ ಕಡೆ ಸೇರಿ 80 ಅಡಿ ಅಗಲವನ್ನು ಅಳತೆ ಮಾಡುವ ಮೂಲಕ  ರಸ್ತೆಯ ಅಕ್ಕಪಕ್ಕದ ನಿವಾಸಿಗಳು ತಕ್ಕಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.