ಹಾಸನ

ಬ್ಯಾಂಕ್ ವ್ಯವಹಾರ ಕುರಿತು ವಿದ್ಯಾರ್ಥಿಗಳಿಗೆ ಉಪನ್ಯಾಸ

Published On :

ಕ.ಪ್ರ. ವಾರ್ತೆ ಹಾಸನ ಮಾ.18
ಸುಜಲ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವರ್ಷದ (ದ್ವಿತೀಯ ಸೆಮಿಸ್ಟರ್) ಬಿ.ಕಾಂ. ಸಾಲಿನ ವಿದ್ಯಾರ್ಥಿಗಳಿಗೆ ಬ್ಯಾಂಕ್ ವ್ಯವಹಾರ ಕುರಿತು ಉಪನ್ಯಾಸ ಏರ್ಪಡಿಸಲಾಗಿತ್ತು. ಎಸ್‌ಬಿಎಚ್. ಡೆಪ್ಯುಟಿ ಮ್ಯಾನೇಜರ್ ಪಿ.ಎಸ್. ಕೃಷ್ಣಮೂರ್ತಿ ಬ್ಯಾಂಕಿನ ವ್ಯವಹಾರಗಳ ಬಗ್ಗೆ ಮಾಹಿತಿ ನೀಡುತ್ತಾ ಡಿ.ಡಿ, ಚೆಕ್, ಚಲನ್, ಎಟಿಎಂ, ಪ್ಲಾಟಿನಂ ಕಾರ್ಡ್, ಕರೆನ್ಸಿ ಬದಲಾವಣೆ, ಲಾಕರ್, ಸ್ಟ್ರಾಂಗ್ ರೂಂ ಮತ್ತು ಆರ್‌ಬಿಐನ ಷರತ್ತುಗಳು ಮತ್ತು ನಿರ್ದೇಶನಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.  ಸಾಲ, ಠೇವಣಿ, ಬಡ್ಡಿ ದರ ಹೀಗೆ ಅನೇಕ ಉಪಯೋಗಗಳ ಬಗ್ಗೆ ತಿಳಿಸಿದರು. ವಿದ್ಯಾರ್ಥಿಗಳು ಕೇಳಿದ ಅನೇಕ ಪ್ರಶ್ನೆಗಳಿಗೆ ಸಮಪರ್ಕ ಉತ್ತರಿಸಿದರು.  ಸಿ. ಸುಬ್ಬೇಗೌಡ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಬ್ಯಾಂಕಿನ ವ್ಯವಹಾರಗಳ ಬಗ್ಗೆ ತಿಳಿದು ಕೊಳ್ಳಬೇಕೆಂದರು.  ಪ್ರಾಂಶುಪಾಲ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಎಟಿಎಂನಂತಹ ಸವಲತ್ತುಗಳನ್ನು ಬಿಟ್ಟರೆ ಡಿ.ಡಿ. ಚಲನ್ ಭರ್ತಿ ಮಾಡುವಂತಹ ಸಾಮಾನ್ಯ ಜ್ಞಾನದ ಅವಶ್ಯಕತೆ ಇದೆ ಎಂದರು. ಉಪನ್ಯಾಸಕ ಧರಣೇಶ್ ಮತ್ತು ಅಜಿತ್‌ಪ್ರಸಾದ್, ಉಪನ್ಯಾಸಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

'ಚರ್ಚ್‌ಗಳಲ್ಲಿ ಕನ್ನಡ ವಿರೋಧಿ ನೀತಿ ಅನುಸರಣೆ ಖಂಡನೀಯ'
ಕ.ಪ್ರ. ವಾರ್ತೆ ಹಾಸನ ಮಾ.18
ಕ್ಯಾಥೋಲಿಕ್ ಕ್ರೈಸ್ತರ ಧರ್ಮಾಡಳಿತ ಹಾಗೂ ಚರ್ಚ್‌ಗಳ ಭಾಷೆ ಆಯಾ ಪ್ರಾದೇಶಿಕ ಭಾಷೆಯಾಗಿರಬೇಕು ಎಂದು ಆದೇಶ ಹೊರಡಿಸಿದ್ದರೂ ಅನ್ಯ ಭಾಷೆ ಬಳಸುತ್ತಿರುವುದು ಖಂಡನೀಯ ಎಂದು ಅಖಿಲ ಕರ್ನಾಟಕ  ಕ್ಯಾಥೋಲಿಕ್ ಕ್ರೈಸ್ತರ ಕನ್ನಡ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರಫಾಯಿಲ್ ರಾಜ್ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 13 ಕ್ರೈಸ್ತ ಧರ್ಮ ಕ್ಷೇತ್ರಗಳ ಪೈಕಿ ಮಂಗಳೂರು, ಉಡುಪಿ, ಕಾರವಾರ ಹಾಗೂ ಬೆಂಗಳೂರಿನಲ್ಲಿ ಕನ್ನಡದ ಬದಲು ಅನ್ಯ ರಾಜ್ಯದ ಭಾಷೆಯನ್ನು ಜಾರಿ ಮಾಡಿ ಕ್ರೈಸ್ತರಲ್ಲಿ ಅಶಾಂತಿ ಉಂಟು ಮಾಡಲಾಗುತ್ತಿದೆ. ಪ್ರಪಂಚದ ಎಲ್ಲಾ ಚರ್ಚ್‌ಗಳಲ್ಲೂ, ದೇಶದ ಚರ್ಚ್‌ಗಳಲ್ಲೂ ಆಯಾ ಪ್ರಾದೇಶಿಕ ಭಾಷೆಗಳಲ್ಲಿಯೇ ಪೂಜಾ ವಿಧಿಗಳು ನಡೆದುಕೊಂಡು ಬರುತ್ತಿದೆ. ಆದರೆ ರಾಜ್ಯದಲ್ಲಿ ಮಾತ್ರ ಹಿಂದಿನಿಂದಲೂ ಧರ್ಮಾಡಳಿತ ನಡೆಸುತ್ತಿರುವ ವಲಸೆಗಾರ ಧರ್ಮಾಧ್ಯಕ್ಷರು ಕನ್ನಡ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು. ಇತ್ತೀಚೆಗೆ ಚಿಕ್ಕಮಗಳೂರಿನಲ್ಲಿ ನಡೆದ ಕೊಂಕಣಿ ಸಮಾವೇಶದಲ್ಲಿ ಗೋವಾ ರಾಜ್ಯದ ಕೊಂಕಣಿ ಸಾಹಿತಿ ಚರ್ಚ್‌ಗಳಲ್ಲಿ ಕನ್ನಡದ ಬದಲು ಕೊಂಕಣಿ ಭಾಷೆ ಅಳವಡಿಸ ಬೇಕೆಂದಿರವುದು ಖಂಡನೀಯ ಎಂದ ಅವರು, ಏಪ್ರಿಲಲ್ನ ಕೊನೆಯ ವಾರದಲ್ಲಿ ಹಾಸನದಲ್ಲಿ ಚಿಕ್ಕಮಗಳೂರು ಧರ್ಮಕ್ಷೇತ್ರದ  ವ್ಯಾಪ್ತಿಯ ಎಲ್ಲಾ  ಕ್ಯಾಥೋಲಿಕ್ ಕ್ರೈಸ್ತರನ್ನು ಒಗ್ಗೂಡಿಸಿ ಸಮಾವೇಶ ನಡೆಸಲಾಗುವುದು ಎಂದು ಹೇಳಿದರು.  ಜಿಲ್ಲಾಧ್ಯಕ್ಷ ದಿನೇಶ್‌ಮ್ಯಾಸ್ಕರೆನಾಸ್, ಪ್ರಾನ್ಸಿಸ್ ಸೇವಿಯರ್, ವಿಕ್ಟರ್, ಎ.ದೇವಕುಮಾರ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.