ಪ್ರಯಾಣಿಕರಂತೆ ನಟಿಸಿ ಆಟೋ ಚಾಲಕನಿಗೆ ಇರಿತ
ಕ.ಪ್ರ.ವಾರ್ತೆ ಹಾಸನ ಮಾ. 20
ದುರ್ಷ್ಕಮಿಗಳು ಪ್ರಯಾಣಿಕರಂತೆ ನಟಿಸಿ ಆಟೋ ಚಾಲಕನ ಕುತ್ತಿಗೆಗೆ ಚಾಕುವಿನಿಂದ ಇರಿದಿರುವ ಘಟನೆ ನಗರದಲ್ಲಿ ಬುಧವಾರ ನಡೆದಿದೆ. ನಗರದ ಹುಣಸೇಕೆರೆಯ ಚಂದ್ರಶೇಖರ್ ಹಾಗೂ ಮಹದೇವಿ ಎಂಬುವರ ಪುತ್ರ ಸಂತೋಷ್ (29) ಇರಿತಕ್ಕೆ ಒಳಗಾದವರು. ಇವರು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಳಿಗ್ಗೆ 7.30ರಲ್ಲಿ ಸಂತೋಷ್ ಆಟೋ ಬಾಡಿಗೆಗಾಗಿ ಮನೆಯಿಂದ ಹೊರಟ ಸಲ್ಪ ದೂರದಲ್ಲಿಯೇ ಮೂವರು ಪ್ರಯಾಣಿಕರಂತೆ ಆಟೋ ಏರಿದರು. ನಂತರ ಹೈಟೆಕ್ ಬಸ್ ನಿಲ್ದಾಣ ಬಳಿ ಹೋಗುವಂತೆ ಸೂಚಿಸಿದ್ದಾರೆ. ಮತ್ತೆ ಬಸ್ನಿಲ್ದಾಣ ಎದುರು ಇರುವ ಹೌಸಿಂಗ್ ಬೋರ್ಡ್ ಒಳಗೆ ಆಟೋವನ್ನು ಕರೆದೊಯ್ದಿದ್ದಾರೆ. ಆ ಸಂದರ್ಭದಲ್ಲಿ ಬಾಡಿಗೆ ಹೆಚ್ಚಿಗೆ ನೀಡುವುದಾಗಿ ದುರ್ಷ್ಕರ್ಮಿಗಳು ಹೇಳಿ ಹಣವನ್ನು ನೀಡಿದ್ದಾರೆ.
ನಂತರ ಆಟೋ ನಿಲ್ಲಿಸುವಂತೆ ಸೂಚಿಸಿ ಹಿಂದಿನಿಂದ ಇಬ್ಬರು ಸಂತೋಷ್ ಕೈಗಳನ್ನು ಹಿಡಿದಿಟ್ಟುಕೊಂಡು ಮತ್ತೊಬ್ಬ ಅವರ ಕುತ್ತಿಗೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.
ನಂತರ ಸಂತೋಷ ಕೂಡಲೇ ತಮ್ಮ ಸಂಬಂಧಿಕರಿಗೆ ಮೊಬೈಲ್ ಮೂಲಕ ವಿಷಯ ತಿಳಿಸಿ, ತಾವೇ ಆಟೋವನ್ನು ಆಸ್ಪತ್ರೆಯವರೆಗೂ ಚಾಲಾಯಿಸಿಕೊಡು ಬಂದು, ಚಿಕಿತ್ಸೆಗೆ ದಾಖಲಾಗಿದ್ದಾರೆ. ಖಾಸಗಿ ಆಸ್ಪತ್ರೆಯವರು ಕೂಡಲೇ ಅವರನ್ನು ದಾಖಲಿಸಿಕೊಂಡು ಸರಿಯಾದ ಸಮಯಕ್ಕೆ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ.
ವಿಷಯ ತಿಳಿದ ಸಹಾಯಕ ಜಿಲ್ಲಾ ಎಸ್ಪಿ ಯಡಾ ಮಾರ್ಟಿನ್, ಇನ್ಸ್ಪೆಕ್ಟರ್ ಸಂಜೀವೇಗೌಡ ಸೇರಿದಂತೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕಾಗಮಿಸಿ ವಿಚಾರಣೆ ನಡೆಸಿದರು. ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

