ಹಾಸನ

ಇಂದು ವಿದ್ಯಾರ್ಥಿ ಸಂಘ ಉದ್ಘಾಟನೆ

Published On :

ಹಾಸನ: ನಗರದ ಸರ್ಕಾರಿ ಶುಶ್ರೂಷ ಮಹಾವಿದ್ಯಾಲಯದ ಆವರಣದಲ್ಲಿ ಮಾ. 26ರಂದು ಬೆಳಗ್ಗೆ  9ಕ್ಕೆ  ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಮತ್ತು ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ  ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಡಾ.ರಾಚೇಗೌಡ ಉದ್ಘಾಟಿಸುವರು. ಪ್ರಾಂಶುಪಾಲೆ ಶೋಭಾ ದೇವಮಾನೆ ಅಧ್ಯಕ್ಷತೆ ವಹಿಸುವರು. ಉಪವಿಭಾಗಾಧಿಕಾರಿ ಕೆ.ಎಚ್. ಜಗದೀಶ್ ಮತ್ತು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಕೆ.ಶಂಕರ್ ಭಾಗವಹಿಸುವರು.
ಇಂದು ಕಾಮದಹನ  ನಾಳೆ ಓಕುಳಿ
ಹಾಸನ: ಭಾವಸಾರ ಕ್ಷತ್ರಿಯ ಹೋಳಿ ಮಹೋತ್ಸವ ಸಮಿತಿಯ ವತಿಯಿಂದ ಮಾ. 26 ರಿಂದ ಮಾ. 28 ರವರೆಗೆ ಹೋಳಿ  ಆಚರಣೆ ನಡೆಯಲಿದೆ. ಮಾ.26 ರಂದು  ರಾತ್ರಿ  9.30ಕ್ಕೆ ಕಾಮದಹನ,  ಮಾ. 27 ರಂದು  ಬೆಳಗ್ಗೆ  ಸಮಾಜ ಬಾಂಧವರಿಂದ ಮಾತ್ರ ಬಣ್ಣದ ಓಕುಳಿ ಹಾಗೂ ಮಾ. 28 ರಂದು ಸಂಜೆ 7ಕ್ಕೆ ಬೂದಿ ಪೂಜೆ  ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು  ಸಮಿತಿಯ  ಪದಾಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.