ಹಾಸನ

ಎಚ್‌ಐವಿ, ಕ್ಷಯ ವಿಶೇಷ ಉಪನ್ಯಾಸ

Published On :

ಹಾಸನ: ಗಂಡಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದಿಂದ ಕ್ಷಯ ಮತ್ತು ಎಚ್.ಐ.ವಿ. ಹಾಗೂ ಆರೋಗ್ಯ ಅರಿವು  ಕುರಿತು ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಗಿತ್ತು. ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಮಧು ವೈದ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರ ಕೊಂಡೇನಾಳು ಹಾಗೂ ಮುಖ್ಯ ಅತಿಥಿಗಳಾಗಿ ಲಿಂಗರಾಜು, ಆರೋಗ್ಯ ನಿರೀಕ್ಷಕರು, ಪ್ರ.ಆ. ಕೇಂದ್ರ, ಕೊಂಡೇನಾಳು   ಅಧ್ಯಕ್ಷೆಯನ್ನು ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಲಿಂಗರಾಜು ವಹಿಸಿದ್ದರು. ಕಾಲೇಜಿನ ಗ್ರಂಥಾಲಯದ ಮುಖ್ಯಸ್ಥರು ಹಾಗೂ ಐ.ಕ್ಯೂ.ಎ.ಸಿ. ಸಂಚಾಲಕ ನವೀನ್ ಸಿ.ಎಲ್. ಇವರು ಪ್ರಾಸ್ತಾವಿಕ ಭಾಷಣವನ್ನು ಮಾಡಿ ಈ ಕಾರ್ಯಕ್ರಮ ಆಯೋಜಿಸಿರುವ  ಉದ್ದೇಶವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ವೈದ್ಯಾಧಿಕಾರಿ ಡಾ.  ಮಧು, ಕ್ಷಯ ಎಂದರೆ  ಏನು ಭಾರತದಲ್ಲಿ ಅದರ ದುಷ್ಪರಿಣಾಮ, ಹರಡುವ ವಿಧಾನ, ಅದರ ಲಕ್ಷಣಗಳು, ಪತ್ತೆ ಹಚ್ಚುವ ವಿಧಾನ ಹಾಗೂ ಈ ಖಾಯಿಲೆಗೆ ಇರುವ ಡಾಟ್ಸ್ ಚಿಕಿತ್ಸೆ ಬಗ್ಗೆ ಹಾಗೂ ಎಚ್.ಐ.ವಿ ಬಗ್ಗೆ  ವಿವರವಾಗಿ ತಿಳಿಸಿದರು.
ಏ.7ರಿಂದ ಕಾನೂನು ಸಂಚಾರಿ ರಥ
ಆಲೂರು: ತಾಲೂಕಿನ ನಾನಾ ಸ್ಥಳಗಳಲ್ಲಿ ಏ.7, 8 ಹಾಗೂ 9 ರಂದು ಕಾನೂನು ಸಂಚಾರಿ ರಥದ ಮೂಲಕ ಕಾನೂನು ಅರಿವು ಜಾಗೃತಿ ಮೂಡಿಸಲಾಗುತ್ತಿದ್ದು, ಅಧಿಕಾರಿಗಳು, ಸಂಘ- ಸಂಸ್ಥೆಗಳು ಸಹಕರಿಸಬೇಕೆಂದು ಜೆಎಂ ಎಫ್‌ಸಿ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ವಿ. ಹನುಮಂತಪ್ಪ ಅವರು ಮನವಿ ಮಾಡಿದ್ದಾರೆ.ಪಟ್ಟಣದ ಬಿಕ್ಕೋಡು ರಸ್ತೆಯಲ್ಲಿರುವ ನ್ಯಾಯಾಲಯದ ಕಚೇರಿಯಲ್ಲಿ ಇತ್ತೀಚೆಗೆ ಕಾನೂನು  ಸಂಚಾರಿ ರಥ ಆಗಮನದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ವರ್ಷಕ್ಕೆರಡು ಬಾರಿ ಸಂಚಾರಿ ರಥದ ಮೂಲಕ ಅಧಿಕಾರಿಗಳ ಸಹಕಾರದಿಂದ ಗ್ರಾಮೀಣ ಪ್ರದೇಶಗಳಿಗೆ ತೆರಳಿ ಜನಸಾಮಾನ್ಯರಲ್ಲಿ ಕಾನೂನು ಅರಿವು ಮೂಡಿಸಿ ಜಾಗೃತಿಗೊಳಿಸಲಾಗುತ್ತಿದೆ ಎಂದು ಹೇಳಿದರು.ಏ.7 ರಂದು ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಸ್ವಾಗತ ಸಮಾರಂಭ ನಡೆಯಲಿದ್ದು ಎಲ್ಲಾ ಅಧಿಕಾರಿಗಳು ಹಾಜರಿರಬೇಕು. ಇದೇ ಸಂದರ್ಭದಲ್ಲಿ ಆಟೋ, ಕಾರು ಚಾಲಕರಿಗೆ ವಿಶೇಷ ಉಪನ್ಯಾಸ  ನೀಡಲಾಗುವುದು. ಏ.8 ಮತ್ತು 9 ರಂದು  ಕುಂದೂರು, ಕೆ. ಹೊಸ ಕೋಟೆ ಮತ್ತು ಕಸಬಾ ಹೋಬಳಿಯ ನಾನಾ ಸ್ಥಳಗಳಲ್ಲಿ  ಕಾನೂನು ಅರಿವು ಮೂಡಿಸುವ ಸಭೆಗಳನ್ನು ಏರ್ಪಡಿಸಿ ಕಾನೂನು ತಜ್ಞರಿಂದ ಕಾನೂನು ಸಲಹೆ ನೀಡಲಾಗುವುದು ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯ್ತಿ ಜನ ಪ್ರತಿನಿಧಿಗಳು, ಕಡ್ಡಾಯವಾಗಿ ಭಾಗವಹಿಸುವಂತೆ ಸೂಚಿಸಿದ್ದಾರೆ. ತಹಸೀಲ್ದಾರ್ ಎನ್.ಕೆ. ಶಾರದಾಂಬ ಮಾತನಾಡಿದರು. ಪಿಎಸ್‌ಐ ಜಯಲಕ್ಷ್ಮಿ, ಎಪಿಪಿ ವಿನಯರಾಣಿ, ಸಮಾಜ ಕಲ್ಯಾಣಾಧಿಕಾರಿ ಸಂತೋಷಕುಮಾರ್, ಶಿಕ್ಷಣ ಸಂಯೋಜಕ ಸುಂದರೇಶ್, ಆರೋಗ್ಯ ಇಲಾಖೆ  ವೆಂಕಟೇಶ್, ಜೀವನ್‌ಪ್ರಸಾದ್ ಇತರರು ಸಭೆಯಲ್ಲಿ ಇದ್ದರು.
ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬಿ
ಆಲೂರು: ಶಿಕ್ಷಕರು ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಯಲ್ಲಿ ಆತ್ಮಸ್ಥೈರ್ಯ ಮೂಡಿಸಬೇಕು. ಇದರಿಂದ ವಿದ್ಯಾರ್ಥಿಗಳು ಮುಂದೆ ಅವರ ಆಯ್ಕೆ ಕ್ಷೇತ್ರದಲ್ಲಿ ಗಣನೀಯ ಯಶಸ್ಸು ಗಳಿಸುವರು ಎಂದು ತಾ. ಕ್ಷೇತ್ರ ಸಮನ್ವಯಾಧಿಕಾರಿ ರವಿ ಪ್ರಕಾಶ್ ಹೇಳಿದರು. ಅವರು ಪಟ್ಟಣದ ಎನ್.ಎಚ್.ಪಿ.ಎಸ್ ಶಾಲೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಶಾಲಾ ವಾರ್ಷಿಕೋತ್ಸವ ಹಾಗೂ ಶಾರದಾ ಪೂಜಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಮಕ್ಕಳಲ್ಲಿ ಬಾಲ್ಯದಿಂದಲೇ ನೈತಿಕ ಶಿಕ್ಷಣವನ್ನು ನೀಡಿದರೆ ಸಮಾಜದಲ್ಲಿ ಸತ್ಪ್ರಜೆಗಳಾಗಲು ಸಹಕಾರಿಯಾಗಲಿದೆ ಎಂದು ಹೇಳಿದರು. ಸಮಾರಂಭದ ಉದ್ಘಾಟನೆಯನ್ನು ತಾ.ಪಂ.ಅಧ್ಯಕ್ಷೆ ಯಶೋಧ ಹರೀಶ್ ನೆರವೇರಿಸಿ ಮಾತನಾಡಿ ದರು. ಮುಖ್ಯ ಶಿಕ್ಷಕ ಎಮ್.ಪಿ. ನಾಗರಾಜೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕೆ.ನಾಗರಾಜ್, ಸಿ.ಕೆ.ವಿರೂ ಪಾಕ್ಷಪ್ಪ,ಮಲ್ಲಿಕಾರ್ಜುನ್, ಮೀನಾಕ್ಷಿ, ಎಚ್.ವಿ. ರಾಘವೇಂದ್ರ, ಸಿ.ಆರ್.ಪಿ.ಪ್ರಮೀಳ, ಡಾ. ಗಿರೀಶ್ ಬಸಪ್ಪ, ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.