'ಕ್ಷುಲ್ಲಕ ವಿಚಾರದಿಂದ ಮಹಿಳೆ ಅಲ್ಪಮತಿ'
ಚನ್ನರಾಯಪಟ್ಟಣ: ಇಂದಿನ ಮಹಿಳೆ ಕ್ಷುಲ್ಲಕ ವಿಚಾರಗಳಿಂದ ಅಲ್ಪಮತಿಯಾಗಿ ತನ್ನ ಶಕ್ತಿಯನ್ನು ತಾನೇ ಕಳೆದು ಕೊಳ್ಳುತ್ತಿದ್ದಾಳೆಂದು ಬ್ರಹ್ಮಕುಮಾರಿ ಮೋಹನ ತಿಳಿಸಿದರು.
ಅವರು ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯ ಆಯೋಜಿಸಿದ್ದ 77ನೇ ಶಿವಜಯಂತಿ ಹಾಗೂ ವಿಶ್ವ ಮಹಿಳಾ ದಿನ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಮಾತೆ ನಾರಿಯರೆಂದು ಕರೆಯುವ ಮಹಿಳೆ ಸುಸಂಸ್ಕೃತ, ತ್ಯಾಗ ಮನೋಭಾವದಿಂದ ಜೀವನವನ್ನು ಗೆಲ್ಲಬೇಕು. ಪ್ರೀತಿ, ಶಾಂತಿ, ತಾಳ್ಮೆಯ ಸ್ವರೂಪದ ಸಂಗಡ ಅಧ್ಯಾತ್ಮ ಚಿಂತನೆ ಮಾಡಿ ಸ್ವಶಕ್ತಿ ವೃದ್ಧಿಸಿಕೊಳ್ಳಬೇಕೆಂದರು. ನೆಲಮಂಗಲದ ಎ.ಪಿ.ಪಿ.ಕೆ.ಎಲ್. ಭಾಗ್ಯಲಕ್ಷ್ಮಿ ಮಾತನಾಡಿ, ಇಂದು ಸಮಾಜದ ಘಟನೆಗಳು ಕಾನೂನಿಗೆ ಸವಾಲಾಗಿ ನಿಲ್ಲುತ್ತಿವೆ. ಮಹಿಳೆಯ ಮೇಲಿನ ದೌರ್ಜನ್ಯ, ಕ್ರೌರ್ಯ ತಡೆಯಲು ಹೆಣ್ಣಿನಿಂದಲೇ ಸಾಧ್ಯ, ಮಕ್ಕಳಲ್ಲಿ ಗಂಡು-ಹೆಣ್ಣು ಎಂಬ ತಾರತಮ್ಯ ಮಾಡದೆ ಗಂಡು ಮಕ್ಕಳಿಗೆ ನೀತಿ ಸಂಸ್ಕೃತಿ ನೀಡುವ ತಾಯಿಯಾಗಬೇಕು. ಗಂಡು ಮಕ್ಕಳು ಹದ್ದುಮೀರದಂತೆ ತಾಯಿ ತಂದೆ ಎಚ್ಚರವಹಿಸಿದರೆ ಸಮಾಜ ಸರಿದಾರಿಗೆ ಬರಬಹುದೆಂದರು. ತಹಸೀಲ್ದಾರ್ ಪಿ. ಜಿ. ನಟರಾಜ್ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಲಲಿತ ಪ್ರಾರ್ಥಿಸಿದರು, ಸ್ವಾಗತ ಹೆಚ್. ಎಂ. ಗೌಡಯ್ಯ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

