ಹಾಸನ

ಗೃಹರಕ್ಷಕ ದಳ- ಪೊಲೀಸ್ ಇಲಾಖೆ ಒಂದೇ ನಾಣ್ಯದ ಎರಡು ಮುಖಗಳು

Published On :

ಕ.ಪ್ರ.ವಾರ್ತೆ ಅರಸೀಕೆರೆ ಮಾ. 25
ಗೃಹ ರಕ್ಷಕ ದಳ ಮತ್ತು ಪೊಲೀಸ್ ಇಲಾಖೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇವುಗಳು ಸಲ್ಲಿಸುತ್ತಿರುವ ಸೇವೆಗಳು ಸಾರ್ವಜನಿಕ ಜೀವನದಲ್ಲಿ ತಮ್ಮದೇ ಆದ ಗುರುತರ ಛಾಪನ್ನು ಮೂಡಿಸುತ್ತಾ ಬಂದಿವೆ. ಗೃಹ ರಕ್ಷಕ ದಳದಲ್ಲಿ ಕೆಲಸ ನಿರ್ವಹಿಸುವವರು ವೇತನ ತಾರತಮ್ಯ ಎದುರಿಸುತ್ತಿದ್ದರೂ ಸಮಾಜದಲ್ಲಿ ಅವರ ನಿಸ್ವಾರ್ಥ ಸೇವೆ ಶ್ಲಾಘನೀಯ ಎಂದು ಗ್ರಾಮಾಂತರ ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಗಂಗಾಧರ್ ತಿಳಿಸಿದರು.
ಪಟ್ಟಣದ ನ್ಯೂ ಮಿಡ್ಲ್ ಸ್ಕೂಲ್ ಆವರಣದಲ್ಲಿ ಇತ್ತೀಚೆಗೆ ನಡೆದ ರೈಫಲ್ ತರಬೇತಿ, ಲಾಠಿ ತರಬೇತಿ ಮತ್ತು ಕವಾಯತು ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಕ್ಲಿಷ್ಟಕರ ಸಮಯಗಳಲ್ಲಿ ಗೃಹರಕ್ಷಕ ದಳದವರು ತಮ್ಮ ಪ್ರಾಣದ ಹಂಗನ್ನು ತೊರೆದು ಸಾರ್ವಜನಿಕರ ಆಸ್ತಿ ಪಾಸ್ತಿಗಳನ್ನು ರಕ್ಷಿಸುವಲ್ಲಿ ತಮ್ಮದೇ ಪಾತ್ರವನ್ನು ವಹಿಸುತ್ತಿದ್ದಾರೆ. ಇವರ ಸೇವೆಯು ನಮ್ಮ ಪೊಲೀಸ್ ಇಲಾಖೆಗೆ ಅತ್ಯವಶ್ಯಕವಾಗಿದ್ದು, ಮುಂದಿನ ವಿಧಾನಸಭೆ ಚುನಾವಣೆಗೆ ಇವರ ಸೇವೆ ಪಡೆಯುತ್ತೇವೆ ಎಂದು ಹೇಳಿದರು.
ರೋಟರಿ ಸಂಸ್ಥೆ ಅಧ್ಯಕ್ಷ ಯೋಗೀಶ್ ಆಚಾರ್ ಮಾತನಾಡಿ, ಸರ್ಕಾರವು ಎಚ್ಚೆತ್ತು ಗೃಹ ರಕ್ಷಕ ದಳದವರ ವೇತನವನ್ನು ಪರಿಷ್ಕರಿಸಿ ಹೆಚ್ಚು ಮಾಬೇಕು ಎಂದು ತಿಳಿಸಿದರು. ಲಯನ್ಸ್ ಸಂಸ್ಥೆ ಅಧ್ಯಕ್ಷ ಎಂ.ವೈ ಖಾನ್ ಮಾತನಾಡಿದರು.
ಈ ಶಿಬಿರದಲ್ಲಿ 80 ಶಿಬಿರಾರ್ಥಿಗಳಿಗೆ ತರಬೇತಿ ನೀಡಲಾಯಿತು. ತಾಲೂಕಿನ ಕಣಕಟ್ಟೆ, ಬಾಣಾವರ, ಜಾವಗಲ್, ಬೆಳಗುಂಬ ಈ ಹೋಬಳಿ ಕೇಂದ್ರಗಳಿಂದ ಶಿಬಿರಾರ್ಥಿಗಳು ತರಬೇತಿಗೆ ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ಹೋಂಗಾರ್ಡ್ ಅಧಿಕಾರಿ ಮರುಳಸಿದ್ದಪ್ಪ, ಕ್ಷೇತ್ರ ಶಿಕ್ಷಣ ಇಲಾಖೆಯ ಬಿಆರ್‌ಸಿ ಮೋಹನ್ ಕುಮಾರ್, ಇಲಾಖೆಯ ಅಧಿಕಾರಿ ವಸಂತ್, ಬಾಣಾವರ ಕಮಾಂಡೆಟ್ ಮಲ್ಲಪ್ಪ, ಕಣಕಟ್ಟೆಯ ಕಮಾಂಡ್ ಕಣಕಟ್ಟೆ ಕುಮಾರ್ ಭಾಗವಹಿಸಿದ್ದರು. ಗೃಹ ರಕ್ಷಕ ದಳದವರು ನಡೆಸಿದ ಕವಾಯತು ಸಾರ್ವಜನಿಕರ ಗಮನ ಸೆಳೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.