ಹಾಸನ

ಜಾವಗಲ್: ಎಸ್‌ಬಿಎಂ ಶಾಖೆ ಉದ್ಘಾಟನೆ

Published On :

ಕನ್ನಡಪ್ರಭ ವಾರ್ತೆ ಜಾವಗಲ್ ಮಾ. 25
ಗ್ರಾಮೀಣ ಭಾಗದ ಜನತೆಗೆ ಬ್ಯಾಂಕ್‌ನಿಂದ ಹೆಚ್ಚು ಉಪಯೋಗ ಸಿಗುವಂತಾಗ ಬೇಕೆಂದು ಸ್ಟೇಟ್ ಬ್ಯಾಂಕ್ ಆಫ್ ಮೈಸೂರುನ ಮೈಸೂರು ವಲಯ ಉಪ ಪ್ರಧಾನ ವ್ಯವಸ್ಥಾಪಕ ಬಾಲ ಕಿಷನ್ ತಿಳಿಸಿದರು.
ಶುಕ್ರವಾರ ಸ್ಟೇಟ್ ಬ್ಯಾಂಕ್ ಆಫ್ ಮೈಸೂರುನ ಜಾವಗಲ್ ಶಾಖೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ಗ್ರಾಹಕರ ಮತ್ತು ಬ್ಯಾಂಕಿನ ನಡುವೆ ಸುಮಧುರ ಬಾಂಧವ್ಯ ಅಗತ್ಯ ಎಂದರು.
ಬ್ಯಾಂಕ್‌ನ ನೌಕರ ವರ್ಗವು ಗ್ರಾಹಕರಿಗೆ ನಿಸ್ಪೃಹತೆಯಿಂದ ಸೇವೆ ನೀಡಲು ಗಮನ ನೀಡಬೇಕೆಂದ ಅವರು, ಗ್ರಾಹಕರೇ ಬ್ಯಾಂಕ್ ಬಂಡವಾಳವಿದ್ದಂತೆ ಎಂದು ತಿಳಿಸಿ, ವಾಣಿಜ್ಯ ಬ್ಯಾಂಕ್‌ಗಳ ಪೈಪೋಟಿಗಿಂತಲೂ ಪರಸ್ಪರ ಸೌಹಾರ್ಧತೆಯ ವಾತಾವರಣ ಮುಖ್ಯ ಎಂದು ಹೇಳಿದರು.
ಜಾವಗಲ್ ದರ್ಗಾ ಟ್ರಸ್ಟಿನ ಸದಸ್ಯ ಸರ್ದಾರ್ ಪಾಷಾ ಬ್ಯಾಂಕ್ ಕಾರ್ಯಕ್ರಮ ಉದ್ಘಾಟಿಸಿ, ಎಸ್‌ಬಿಎಂ ಶಾಖೆ ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಗಮನ ಹರಿಸ ಬೇಕು ಗ್ರಾಮೀಣ ಭಾಗದ ಜನತೆಗೆ ಹೆಚ್ಚು ಸೇವೆ ಸಿಗುವಂತಾಗ ಬೇಕು ಎಂದು ನುಡಿದರು.
ಜಾವಗಲ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಸಂತರಾಜ್ ಅರಸ್ ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು. ಪ್ರಾದೇಶಿಕ ಕಚೇರಿ ಸಹಾಯಕ ಪ್ರಧಾನ ವ್ಯವಸ್ಥಾಪಕ  ಭುವನೇಂದ್ರ ಠಾಕೂರ್, ವಲಯ ಕಾರ್ಯದರ್ಶಿ ರಾಘವೇಂದ್ರ, ಶಾಖಾ ವ್ಯವಸ್ಥಾಪಕ ಕಾಲೀಂದ್ರ ಕುಮಾರ್, ಅರಸೀಕೆರೆ ಉಪ ಶಾಖಾಧಿಕಾರಿ ನಾಗರಾಜ ರಾವ್, ಅನಿಲ್ ಮಾತನಾಡಿದರು.
ಇದೇ ಸಂದರ್ಭದಲ್ಲಿ ಶಾಖೆಯಲ್ಲಿ 35 ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಜಾವಗಲ್ ರಾಜಣ್ಣ ಅವರನ್ನು  ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.