ಹಾಸನ

ಸರೋಜಿನಿ ನಾಯ್ಡು ಪ್ರಶಸ್ತಿಗೆ ಉತ್ತಮ ಲೇಖನಗಳ ಆಹ್ವಾನ

Published On :

ಹಾಸನ: ಚುನಾಯಿತ ಗ್ರಾಮ ಪಂಚಾಯ್ತಿ ಮಹಿಳೆಯರ ಸಾಧನೆಗಳನ್ನು ಹೊರತರುವ ನಿಟ್ಟಿನಲ್ಲಿ ಸರೋಜಿನಿ ನಾಯ್ಡು ಪ್ರಶಸ್ತಿಗಾಗಿ ಉತ್ತಮ ಲೇಖನಗಳನ್ನು ಆಹ್ವಾನಿಸಿರುವುದಾಗಿ ಬೆಂಗಳೂರಿನ ದಿ ಹಂಗರ್ ಪ್ರಾಜೆಕ್ಟ್ ಹಾಗೂ ವಿಕಸನ ಸಂಸ್ಥೆ  ನಿರ್ದೇಶಕ ಎ.ಎಂ.ವರ್ಗೀಸ್ ಕೀಲ್‌ಟಾಸ್ ತಿಳಿಸಿದರು. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಶಸ್ತಿಗೆ ಮಾಧ್ಯಮ ಪ್ರತಿನಿಧಿಗಳಿಂದ ಲೇಖನಗಳನ್ನು ಆಹ್ವಾನಿಸಲಾಗಿದೆ. ದಿ ಹಂಗರ್ ಪ್ರಾಜೆಕ್ಟ್ ಮುದ್ರಣ ಮಾಧ್ಯಮದೊಂದಿಗೆ ಬಾಂಧವ್ಯದ ಪ್ರಾರಂಭವನ್ನು ಸೂಚಿಸಲು ಸರೋಜಿನಿ ನಾಯ್ಡು ಪ್ರಶಸ್ತಿಯನ್ನು 2001ರಲ್ಲಿ ಆರಂಭಿಸಲಾಯಿತು ಎಂದರು. ಪ್ರಶಸ್ತಿಯ ಮೊತ್ತ ಪ್ರತಿ ವಿಭಾಗಕ್ಕೂ 2 ಲಕ್ಷ ನೀಡಲಾಗುವುದು. ಹಿಂದಿ, ಇಂಗ್ಲಿಷ್ ಹಾಗೂ ಇತರ ಭಾರತೀಯ ಭಾಷೆ ಮೂರು ವಿಭಾಗಗಳಲ್ಲಿ ಬಹುಮಾನವನ್ನು ನೀಡಲಾಗುತ್ತದೆ. ಜೂ.15, 2013ರೊಳಗೆ ಲೇಖನಗಳನ್ನು ಕಳುಹಿಸಬೇಕಾಗಿದ್ದು, ಎಲ್ಲಾ ಲೇಖನಗಳು  ಮಹಿಳೆ ಮತ್ತು ಪಂಚಾಯತ್ ರಾಜ್ ವಿಷಯಕ್ಕೆ ಸಂಬಂಧಿಸಿರಬೇಕು. ಕೇವಲ ಮಹಿಳೆ ಇಲ್ಲವೇ ಪಂಚಾಯತ್ ರಾಜ್‌ಗೆ ಸಂಬಂಧಿಸಿದ ಲೇಖನಗಳನ್ನು ಪರಿಗಣಿಸಲಾಗುವುದಿಲ್ಲ ಎಂದರು.ಈ ಸಂದರ್ಭದಲ್ಲಿ ಬೇಲೂರು ತಾಲೂಕಿನ ಗ್ರಾಪಂ ಮಹಿಳಾ ಸದಸ್ಯರು ಮತ್ತು ಅಧ್ಯಕ್ಷರು ಆಗಮಿಸಿ ಮಹಿಳೆ ಮೇಲೆ ಆಗುತ್ತಿರುವ ದೌರ್ಜನ್ಯ ಹಾಗೂ ಸಮಸ್ಯೆ ಬಗ್ಗೆ ಮಹಿಳೆಯರು ಹೇಳಿಕೊಂಡರು. ಕೋಗಿಲೆ ಮನೆ ಗ್ರಾಪಂ ಸದಸ್ಯೆ ಭಾರತೀ ಬಾಯಿ, ಸನ್ಯಾಸಿಹಳ್ಳಿ ಗ್ರಾಪಂ ಸದಸ್ಯೆ ಮೀನಾಕ್ಷಿ, ಅಧ್ಯಕ್ಷೆ ಲತಾ ಮೋಹನ್, ಜಯಂತಿ ಹಾಗೂ ಶ್ರೀನಿವಾಸ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.