ಹಾಸನ

ವಿಶ್ವ ರಂಗಭೂಮಿ ದಿನಾಚರಣೆ ಇಂದು

Published On :

ಹಾಸನ: ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು ಮತ್ತು ಸಾಹಿತ್ಯ ವೇದಿಕೆ ಎನ್‌ಡಿಆರ್‌ಕೆ ಪ್ರಥಮ ದರ್ಜೆ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಎನ್‌ಡಿಆರ್‌ಕೆ ಕಾಲೇಜು ಸಭಾಂಗಣದಲ್ಲಿ ಮಾ.27ರಂದು ಬೆಳಿಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ. ಜಿಲ್ಲೆಯ ಕಲಾವಿದರಿಂದ ಉಪನ್ಯಾಸ, ರಂಗ ಗೀತೆಗಳು, ರಂಗ ದೃಶ್ಯಾವಳಿಗಳು, ಏಕಪಾತ್ರಾಭಿನಯ ಮತ್ತು ನಾಟಕ ಪ್ರದರ್ಶನ ನಡೆಯಲಿವೆ. ನಾಟಕಕಾರ ಗೊರೂರು ಅನಂತರಾಜು ಉದ್ಘಾಟಿಸುವರು. ಕಾಲೇಜಿನ ಪ್ರಾಂಶುಪಾಲ ಕೆ.ಶಾಮ್‌ಭಟ್ ಅಧ್ಯಕ್ಷತೆ ವಹಿಸುವರು. ಕಲಾವಿದ ಮತ್ತು ಶಿಕ್ಷಣ ಸಂಯೋಜಕ ಬಿ.ಡಿ. ಶಂಕರೇಗೌಡ ಉಪನ್ಯಾಸ ನೀಡುವರು.  ಕೆ.ಪಿ.ವಿಜಯಕುಮಾರ್, ಕಾರ್ಯದರ್ಶಿ, ಬಿಸಿಕೆಎಸ್ ವಿದ್ಯಾಸಂಸ್ಥೆ ಮತ್ತು ಕಲಾವಿದ ಕೆ.ಬಿ. ರಾಜಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ರಂಗ ನಿರ್ದೇಶಕ ಯಶೋಧರ್ ನಾಯಕ್, ಮತ್ತು  ಶ್ರೀರಮ್ಯ ಕಲಾರಂಗದ ನಟ ನಿರ್ದೇಶಕ ಎಚ್.ರಾಮಣ್ಣರನ್ನು ಸನ್ಮಾನಿಸಲಾಗುವುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.