ಹಾಸನ

ಜೆ.ಪಿ.ಜಯಣ್ಣಗೆ ಟಿಕೆಟ್: ಅಭಿಮಾನಿ ಸಂಘ ಒತ್ತಾಯ

Published On :

ಅರಸೀಕೆರೆ: ಮೂರು ದಶಕಗಳಿಂದ ತಾಲೂಕಿನ ಬಡವರು, ದೀನ ದಲಿತರು, ರೋಗಿಗಳಿಗೆ ಆಶ್ರಯದಾತರಾಗಿ ಆರ್ಥಿಕ ನೆರವು ನೀಡಿ ದೇವಾಲಯ, ಚರ್ಚ್, ಮಸೀದಿಗಳ ನಿರ್ಮಾಣಕ್ಕೆ ಯಾವುದೇ ಜಾತಿ ಮತ ಭೇದಗಳಿಲ್ಲದೆ ಧನಸಹಾಯ ಮಾಡುವ ಮೂಲಕ ಸೇವ ಮನೋಭಾವದ ಜೆ.ಪಿ.ಜಯಣ್ಣ ಅವರಿಗೆ ಅರಸೀಕೆರೆ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನೀಡಬೇಕೆಂದು ಜಯಣ್ಣ ಅಭಿಮಾನಿಗಳ ಸಂಘದ ಅಧ್ಯಕ್ಷ ಎಂ.ಎಸ್.ಶಿವಪ್ಪ ಹಾಗೂ ಕಾರ್ಯದರ್ಶಿ ಕ್ಯಾತನಹಳ್ಳಿ ಪ್ರಸನ್ನಕುಮಾರ್ ಒತ್ತಾಯಿಸಿದ್ದಾರೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 5 ವರ್ಷಗಳಿಂದ ಕ್ಷೇತ್ರದಲ್ಲಿ ಪಕ್ಷವನ್ನು ಸದೃಢವಾಗಿ ಕಟ್ಟಲು ಶ್ರಮಿಸುತ್ತಿರುವ ಜೆ.ಪಿ.ಜಯಣ್ಣ ಎಲ್ಲ ಜಾತಿ, ಜನಾಂಗದವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಜಯಣ್ಣಗೆ ವರಿಷ್ಠರು ಟಿಕೆಟ್ ನೀಡುವ ಮೂಲಕ ಅವರ ಸೇವಾ ಮನೋಭಾವಕ್ಕೆ ಮಾನ್ಯತೆ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.

ಕಾನೂನು ಸಾಕ್ಷರತಾ ಆಂದೋಲನ
ಹೊಳೆನರಸೀಪುರ:
ಕಾನೂನು ಸೇವೆಗಳ ಸಮಿತಿ ಮತ್ತು ವಕೀಲರ ಸಂಘ, ಕಂದಾಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ತಾಲೂಕು ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರಕ್ಷಕ ಇಲಾಖೆ ಹಾಗೂ ಶಿಕ್ಷಣ ಇಲಾಖೆಗಳ ಸಹಯೋಗದಲ್ಲಿ ಮಾ.29 ರಿಂದ ಮಾ.31ರವರೆಗೆ ತಾಲೂಕಿಗೆ ಆಗಮಿಸುತ್ತಿರುವ ಕಾನೂನು ರಥದ ಮೂಲಕ ಕಾನೂನು ಸಾಕ್ಷರತಾ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ನ್ಯಾಯಾಂಗ ಇಲಾಖೆಯ ಪ್ರಕಟಣೆ ತಿಳಿಸಿದೆ.

'ಭಗತ್‌ಸಿಂಗ್ ಅಪ್ಪಟ ದೇಶಭಕ್ತ'
ಹಾಸನ
:ಭಗತ್‌ಸಿಂಗ್ ಅಪ್ಪಟ ದೇಶಭಕ್ತ. ವಸಾಹತು ಶಾಹಿ ಆಡಳಿತದ ಬಿಗಿ ಮುಷ್ಟಿಯಲ್ಲಿದ್ದ ಭಾರತಕ್ಕೆ ಸ್ವಾತಂತ್ರ್ಯದ ರಣಕಹಳೆ ಊದಿ ಯುವಕರನ್ನು ಬ್ರಿಟಿಷರ ವಿರುದ್ಧ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ  ಪ್ರೇರೇಪಿಸಿದ ಮಹಾನ್ ನೇತಾರ ಎಂದು ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲ  ಡಾ. ಐ. ಎಂ ಮೋಹನ್ ಹೇಳಿದರು. ಭಗತ್‌ಸಿಂಗ್ ಸ್ಮರಣಾರ್ಥ ಸರ್ಕಾರಿ ಕಲಾ ಕಾಲೇಜಿನ ಇತಿಹಾಸ ವಿಭಾಗ ಹೊಯ್ಸಳ ಇತಿಹಾಸ ವೇದಿಕೆಯಡಿ ಯಲ್ಲಿ ಏರ್ಪಡಿಸಿದ್ದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅತ್ಯಲ್ಪ ಕಾಲವಿದ್ದ ಭಗತ್ ಬದುಕಿನ ಸಾಧನೆಗಳ ಅನನ್ಯ ಮತ್ತು ಅನುಪಮ. ಭಗತ್ ಮತ್ತು ಅವನ ಗೆಳೆಯರ  ತ್ಯಾಗ ಮತ್ತು ಬಲಿದಾನ ಇಂದಿನ ಯುವಕರಿಗೆ ಮಾರ್ಗದರ್ಶಕವಾಗಬೇಕು ಎಂದು ಹೇಳಿದರು. ಸರ್ಕಾರಿ ಮಹಿಳಾ ಕಾಲೇಜಿನ ಇತಿಹಾಸ ವಿಭಾಗ ಮುಖ್ಯಸ್ಥ ಪ್ರೊ. ಲೋಕಪ್ಪಗೌಡ ಅವರು ಭಗತ್‌ಸಿಂಗ್  ಸಂಕ್ಷಿಪ್ತ ಪರಿಚಯ ಮಾಡಿಕೊಟ್ಟರು.

ಉಪ ವಿಭಾಗಾಧಿಕಾರಿಗೆ ಗನ್‌ಮ್ಯಾನ್ ರಕ್ಷಣೆ
ಸಕಲೇಶಪುರ:
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿ ಶ್ರೀವಿದ್ಯಾ ಗನ್‌ಮ್ಯಾನ್ ರಕ್ಷಣೆ ಪಡೆದಿದ್ದಾರೆ. ತಾಲೂಕಿನಲ್ಲಿ ಇತ್ತೀಚೆಗೆ ಅಕ್ರಮ ಮರಳು ಮಾಫಿಯದಿಂದ ಅಧಿಕಾರಿಗಳ ಮೇಲೆ ಹಲ್ಲೆ ಹೆಚ್ಚಿದ್ದು, ಒಂದು ವಾರದ  ಹಿಂದೆ ಬಾಳ್ಳುಪೇಟೆ ಗ್ರಾಮ ಸಮೀಪ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಯನ್ನು ಅಡ್ಡಗಟ್ಟಿದ ಉಪವಿಭಾಗಾಧಿಕಾರಿ ಕಚೇರಿ ನೌಕರನ ಮೇಲೆ ತೀವ್ರ ಹಲ್ಲೆ ನಡೆಸಲಾಗಿತ್ತು ಈ ಹಿನ್ನೆಲೆಯಲ್ಲಿ ಉಪವಿಭಾಧಿಕಾರಿಗೆ ಗನ್‌ಮ್ಯಾನ್ ನೀಡಲಾಗಿದೆ. ರಕ್ಷಣೆಗಾಗಿ ಗನ್‌ಮ್ಯಾನ್ ನೀಡುವಂತೆ ಜಿಲ್ಲಾಧಿಕಾರಿಗೆ ವಿನಂತಿಸಲಾಗಿತ್ತು.

ಸ್ಥಳೀಯರಿಗೆ ಕೆಜೆಪಿ ಟಿಕೆಟ್‌ಗೆ ಆಗ್ರಹಿಸಿ ಪ್ರತಿಭಟನೆ ಇಂದು
ಕನ್ನಡಪ್ರಭವಾರ್ತೆ ಬೇಲೂರು ಮಾ.28

ವಿಧಾನಸಭಾ ಚುನಾವಣೆಯಲ್ಲಿ ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿ ಶುಕ್ರವಾರ ಪ್ರತಿಭಟನೆ ಹಾಗೂ ಕಾರ್ಯಕರ್ತರ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಕೆಜೆಪಿ ಮುಖಂಡ ಬಿ.ಶಿವರುದ್ರಪ್ಪ ಹಾಗೂ ಕೊರಟಿಕೆರೆ ಪ್ರಕಾಶ್ ತಿಳಿಸಿದ್ದಾರೆ. ಕಳೆದ 40 ದಶಕಗಳಿಂದ ತಾಲೂಕು ವಿಧಾನಸಭಾ ಕ್ಷೇತ್ರ ಮೀಸಲು ಆಗಿದ್ದು ಬಹುತೇಕ ಹೊರಗಿನವರೇ ಶಾಸಕರಾಗಿ ಆಡಳಿತ ನಡೆಸಿದ್ದು ಅಭಿವೃದ್ಧಿ ಕುಂಠಿತಗೊಂಡಿದೆ. ಈಗ ಸಾಮಾನ್ಯ ಕ್ಷೇತ್ರವಾಗಿದ್ದು ತಾಲೂಕಿನಲ್ಲಿ ಸ್ಪರ್ಧಿಸಲು ಸ್ಥಳಿಯರು ಆಸಕ್ತ್ನಿ ಹೊಂದಿದ್ದಾರೆ. ಸ್ಥಳಿಯರಾದರೆ ಅವರಿಗೆ ತಾಲೂಕಿನ ಹಾಗು ಹೋಗುಗಳ ಅರಿವು ತಿಳಿದಿರುತ್ತದೆ. ಕಾರ್ಯಕರ್ತರ ಹಾಗೂ ಜನಸಾಮಾನ್ಯರ ಕಷ್ಟಸುಖಗಳಿಗೆ ಸ್ಪಂದಿಸುವ ಅವಕಾಶ ದೊರಕುತ್ತದೆ. ಅಲ್ಲದೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಕಟ್ಟಾ ಬೆಂಬಲಿಗರಾಗಿರುವ ಅನೇಕ ಕೆಜೆಪಿ ಮುಖಂಡರು ಕೆಜೆಪಿಯಿಂದ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ. ಅದರಲ್ಲೂ ವೀರಶೈವ ಸಮುದಾಯದಲ್ಲಿ 60 ಸಾವಿರಕ್ಕೂ ಹೆಚ್ಚು ಮತದಾರರಿದ್ದು ಅವರ ಆಶೀರ್ವಾದವೂ ಸಾಕಷ್ಟಿದೆ. ಕೆಜೆಪಿಯಿಂದ ತಾಲೂಕಿನ ಯಾವುದೇ ಸ್ಥಳಿಯ ಅಭ್ಯರ್ಥಿಗೆ ಟಿಕೆಟ್ ನೀಡಿದಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಗೆಲ್ಲಿಸುವಲ್ಲಿ ಶ್ರಮಿಸುವುದಾಗಿ ತಿಳಿಸಿದರು. ಈ ನಿಟ್ಟನಲ್ಲಿ ತಾಲೂಕಿನ ಎಲ್ಲಾ ಜನಾಂಗದ ಮುಖಂಡರು, ಕಾರ್ಯಕರ್ತರು ಮತ್ತು ಮತದಾರರು ಸ್ಥಳಿಯರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ವೀರಶೈವ ಕಲ್ಯಾಣ ಮಂದಿರದಲ್ಲಿ ಸಭೆಯನ್ನು ಕರೆಯಲಾಗಿದೆ. ಇದೇ ಸಂದರ್ಭದಲ್ಲಿ ಯಡಿಯೂರಪ್ಪನವರ ಬಳಿಗೆ ನಿಯೋಗ ತೆರಳಿ ಅವರಿಗೆ ತಾಲೂಕಿನ ವಸ್ತುಸ್ಥಿತಿಯ ಬಗ್ಗೆ ಸಂಪೂರ್ಣ ಮನವರಿಕೆ ಮಾಡಿಕೊಡಲಾಗುವುದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.